ಬೆಂಗಳೂರು:ದೇಶದ 18ನೇ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಇಂದು (ಏಪ್ರಿಲ್​ 26) ಆರಂಭವಾಗಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಇಂದು 14 ಕ್ಷೇತ್ರಗಳಿಗೆ ಮತದಾನ ಶುರುವಾಗಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಇಂದು ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಇಂದು ಮತದಾನ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳು ಯಾವುವು?* ಬೆಂಗಳೂರು ಗ್ರಾಮಾಂತರ* ಬೆಂಗಳೂರು ಉತ್ತರ* ಬೆಂಗಳೂರು ಕೇಂದ್ರ* ಬೆಂಗಳೂರು ದಕ್ಷಿಣ* ಹಾಸನ* ಚಿಕ್ಕಬಳ್ಳಾಪುರ* ಉಡುಪಿ-ಚಿಕ್ಕಮಗಳೂರು* ದಕ್ಷಿಣ ಕನ್ನಡ* ತುಮಕೂರು* ಚಿತ್ರದುರ್ಗ* ಮಂಡ್ಯ* ಮೈಸೂರು-ಕೊಡಗು* ಚಾಮರಾಜನಗರ* ಕೋಲಾರ
ದಕ್ಷಿಣ ಕರ್ನಾಟಕದ 2.88 ಕೋಟಿ ಮತದಾರರು ಕಣದಲ್ಲಿರುವ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಿದ್ದಾರೆ. ಈ ಚುನಾವಣೆ ದೇಶವನ್ನಾಳುವ ಪ್ರಧಾನಿಯನ್ನು ಆಯ್ಕೆ ಮಾಡುವುದಕ್ಕೋ ಅಥವಾ ಸಂಸದರನ್ನು ಆರಿಸಿ ಕಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಮುಖ್ಯವಾಗಿ ರಾಜ್ಯದ ಪ್ರಮುಖ ನಾಯಕರ ಭವಿಷ್ಯವನ್ನು ಮೊದಲ ಹಂತದ ಮತದಾನ ನಿರ್ಧರಿಸಲಿದೆ. ಇದೇ ಕಾರಣಕ್ಕೆ ಮೂರೂ ಪಕ್ಷಗಳ ದಿಗ್ಗಜರು ಕಳೆದೊಂದು ತಿಂಗಳಿಂದ ಶತಪ್ರಯತ್ನ ಮಾಡಿ ತಮ್ಮ ಅಸ್ತಿತ್ವ ಭದ್ರಪಡಿಸಿಕೊಳ್ಳಲು ಬೆವರು ಹರಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು* ಚಿತ್ರದುರ್ಗ- ಗೋವಿಂದ ಕಾರಜೋಳ* ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜೆ* ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ* ಮಂಡ್ಯ- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ* ತುಮಕೂರು – ವಿ.ಸೋಮಣ್ಣ* ಬೆಂಗಳೂರು ಕೇಂದ್ರ – ಪಿ.ಸಿ ಮೋಹನ್* ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್* ಹಾಸನ – ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ* ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ* ಚಾಮರಾಜನಗರ- ಎಸ್ ಬಾಲರಾಜ್* ಬೆಂಗಳೂರು ಗ್ರಾಮಾಂತರ – ಡಾ.ಸಿಎನ್ ಮಂಜುನಾಥ್* ಕೋಲಾರ – ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು* ಮೈಸೂರು-ಕೊಡಗು – ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ದಕ್ಷಿಣ ಕನ್ನಡ – ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಹೀಗಿದೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ* ಚಿತ್ರದುರ್ಗ- ಬಿಎನ್ ಚಂದ್ರಪ್ಪ* ಬೆಂಗಳೂರು ಗ್ರಾಮಾಂತರ- ಡಿ.ಕೆ ಸುರೇಶ್* ಬೆಂಗಳೂರು ಉತ್ತರ – ಪ್ರೊ.ಎಂ.ವಿ ರಾಜೀವ್ ಗೌಡ* ಬೆಂಗಳೂರು ಕೇಂದ್ರ – ಮನ್ಸೂರ್ ಆಲಿ ಖಾನ್* ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ* ಮೈಸೂರು- ಕೊಡಗು – ಎಂ.ಲಕ್ಷ್ಮಣ್* ಉಡುಪಿ-ಚಿಕ್ಕಮಗಳೂರು – ಡಾ.ಜಯಪ್ರಕಾಶ್ ಹೆಗ್ಡೆ* ತುಮಕೂರು-ಎಸ್ ಪಿ ಮುದ್ದಹನುಮೇಗೌಡ* ಕೋಲಾರ- ಕೆ.ವಿ ಗೌತಮ್* ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ* ಹಾಸನ- ಎಂ ಶ್ರೇಯಸ್ ಪಟೇಲ್* ಮಂಡ್ಯ- ವೆಂಕಟರಮಣಗೌಡ ( ಸ್ಟಾರ್ ಚಂದ್ರು)* ದಕ್ಷಿಣ ಕನ್ನಡ – ಪದ್ಮರಾಜ್.ಆರ್* ಚಾಮರಾಜನಗರ- ಸುನೀಲ್ ಬೋಸ್
ನಾಯಕರಿಗೂ ಪ್ರತಿಷ್ಠೆ:ಸಿಎಂ ಸಿದ್ದರಾಮಯ್ಯಗೆ ತವರು ಮೈಸೂರಿನಲ್ಲಿ ಪಕ್ಷ ಗೆಲ್ಲಿಸುವುದು ಸವಾಲಿನ ಕೆಲಸವಾಗಿದೆ. ಅದೇ ರೀತಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರನನ್ನು ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲಿಸಿಕೊಳ್ಳಬೇಕಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿಯವರಿಗೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನದಲ್ಲಿ ಗೆಲ್ಲುವುದು ಪ್ರತಿಷ್ಠೆಯಾಗಿದೆ. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ವಲಸೆ ಬಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಚಿವೆ ಶೋಭಾ ಕರಂದ್ಲಾಜೆ ರಾಜಕೀಯ ಭವಿಷ್ಯ ಕೂಡ ಅಡಗಿದೆ.
ಹೈ ಪ್ರೊಫೈಲ್ ಕ್ಷೇತ್ರಗಳು:14ಕ್ಷೇತ್ರಗಳ ಪೈಕಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ, ಬಿಜೆಪಿಯಿಂದ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜು ನಾಥ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರ ಸಿಎಂ ತವರು ಜಿಲ್ಲೆಯ ಕಾರಣಕ್ಕೆ ಹೈ-ಪ್ರೊಫೈಲ್ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ.
1 ಕಾಂಗ್ರೆಸ್​ಗೆ ದಿಕ್ಸೂಚಿ:ಗ್ಯಾರಂಟಿ ಯೋಜನೆ ಪರಿಣಾಮ ಅಳೆಯುವುದಕ್ಕೆ ಈ ಚುನಾವಣೆ ಒಂದು ತಕ್ಕಡಿ ಆಗಲಿದೆ. ಇದಿಷ್ಟೇ ಅಲ್ಲ ನಾಯಕತ್ವ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಆಗಿದೆ ಎನ್ನಲಾದ ನಾಲ್ಕು ಗೋಡೆ ನಡುವಿನ ಒಪ್ಪಂದ ಬಹಿರಂಗವಾಗಿಲ್ಲ. ಈ ಚುನಾವಣೆ ಬಳಿಕ ಆ ಗುಟ್ಟು ರಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಜಯಸಿದಲ್ಲಿ ಒಂದು ರೀತಿಯ ಪರಿಣಾಮ ಉಂಟಾದರೆ ಸೋತರೆ ಮತ್ತೊಂದು ಮಗ್ಗುಲಿನಲ್ಲಿ ರಾಜಕೀಯ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ.
2 ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ:ಬಿಜೆಪಿ, ಜೆಡಿಎಸ್ ಮೈತ್ರಿ ಯಾವ ರೀತಿ ಪರಿಣಾಮ ಬೀರಿದೆ, ಪರಸ್ಪರ ಎಷ್ಟು ಲಾಭ ಆಗಿದೆ ಎಂಬುದರ ಮೇಲೆ ಮುಂದಿನ ರಾಜಕೀಯ ಲೆಕ್ಕಾಚಾರ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮೈತ್ರಿಗೆ ಮಹತ್ವವಿದೆ. ಈ ಫಲಿತಾಂಶದಲ್ಲೇ ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಮೈತ್ರಿ ಫಲಿಸಿದರೆ ಮುಂದೆಯೂ ಒಟ್ಟಿಗೆ ಹೆಜ್ಜೆ ಹಾಕಲು ಅವಕಾಶವಾಗಲಿದೆ.
3 ಬಿಜೆಪಿಗೆ ಸವಾಲು:ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಬಿಜೆಪಿ ರಾಷ್ಟ್ರ ನಾಯಕರ ಕನಸಿಗೆ ಕರ್ನಾಟಕವೇ ಆಶಾಕಿರಣ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಬಿಜೆಪಿ ಮತಗಳಿಕೆ ಹೆಚ್ಚಾಗಬಹುದು. ಆದರೆ, ಸೀಟುಗಳು ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯ ನಾಯಕರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಮೇಲೂ ಬಿಜೆಪಿ ವರಿಷ್ಠರು ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಮತದಾನ ಮುನ್ನ ಖಾತೆಗೆ ಗೃಹಲಕ್ಷ್ಮಿ!; ಮಹಿಳಾ ಮತದಾರರಿಗೆ ಗ್ಯಾರಂಟಿ ಗಾಳ?

ಒಕ್ಕಲಿಗರ ಅಸ್ಮಿತೆಗೆ ಹೋರಾಟ; ಮತಕಣದಲ್ಲಿ ದೇವೇಗೌಡ, ಡಿ.ಕೆ.ಶಿವಕುಮಾರ್​ಗೆ ಅಗ್ನಿಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
