| ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನ ಹತ್ತಿರವೇ ಇದ್ದರೂ, ಪ್ರಚಾರದ ಅಬ್ಬರ, ಸಮಾವೇಶಗಳ ಭರಾಟೆ ತಾರಕಕ್ಕೇರುತ್ತಿಲ್ಲ. ಇದಕ್ಕೆ ಕಾರಣ ಬರಗಾಲ, ವಿಪರೀತ ಬಿಸಿಲಿನ ಧಗೆ ಹಾಗೂ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ಕ್ರಮ. ಈ ಬಾರಿ ಮಳೆ ಕೊರತೆಯಿಂದ ತೀವ್ರ ಬರ, ಕಾರ್ವಿುಕರ ಕೂಲಿ ಹೆಚ್ಚಳ, ಪ್ರಚಾರ ವಸ್ತುಗಳ ದರ ಏರಿಕೆ ಬರೆ ಎಳೆದಿದೆ. ಇದರಿಂದ ಕಂಗೆಟ್ಟಿರುವ ಅಭ್ಯರ್ಥಿಗಳು ಖರ್ಚು-ವೆಚ್ಚಗಳ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ.
ಇದರ ಜತೆಗೆ ಉಷ್ಣಾಂಶ ದಾಖಲೆ ಮಟ್ಟದಲ್ಲಿ ಏರಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ 40 ಡಿಗ್ರಿಗಿಂತ ಮೇಲೆಯೇ ಉಷ್ಣಾಂಶವಿದ್ದರೆ, ದಕ್ಷಿಣ ಜಿಲ್ಲೆಗಳಲ್ಲೂ 40 ಡಿಗ್ರಿ ಸನಿಹ ತಾಪಮಾನವಿದ್ದು, ದೊಡ್ಡ ಮಟ್ಟದ ಸಾರ್ವಜನಿಕ ಸಭೆ, ರ್ಯಾಲಿಗಳನ್ನು ಆಯೋಜಿಸುವುದು ಪ್ರಯಾಸ ದಾಯಕವಾಗಿದೆ. ಹೀಗಾಗಿ ಅಭ್ಯರ್ಥಿಗಳು ಸಮಾವೇಶದ ಬದಲು ರೋಡ್​ಶೋ, ಮನೆ ಮನೆ ಪ್ರಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಕೃಷಿ, ನರೇಗಾ ಯೋಜನೆಯಡಿ, ಕಟ್ಟಡ ಕಾರ್ವಿುಕರ ದಿನದ ಕೂಲಿ 320 ರಿಂದ 500 ರೂ.ಗೆ ಹೆಚ್ಚಳವಾಗಿದೆ. ಡೀಸೆಲ್, ಪೆಟ್ರೋಲ್ ದರವೂ ಇಳಿಯದ ಕಾರಣ ವಾಹನಗಳ ಬಾಡಿಗೆ ದರ ಪ್ರತಿ ಕಿಮೀಗೆ ಸರಾಸರಿ 3 ರಿಂದ 5 ರೂ. ಏರಿಕೆ ಕಂಡಿದೆ. ತರಕಾರಿ ದರ ಏರಿಕೆಯಿಂದಾಗಿ ಆಹಾರ ಪದಾರ್ಥಗಳ ದರ ಹೆಚ್ಚಳವಾಗಿದೆ. ಮತ್ತೊಂದೆಡೆ ಪ್ರಚಾರಕ್ಕೆ ಇಷ್ಟೇ ಹಣ ಖರ್ಚು ಮಾಡಬೇಕೆಂದು ಆಯೋಗ ಹಲವು ನಿಯಮ ರೂಪಿಸಿದೆ. ಹೀಗಾಗಿ ಚುನಾವಣೆ ಪ್ರಚಾರಕ್ಕೆ ವೆಚ್ಚ ಮಾಡಲು ಅಭ್ಯರ್ಥಿಗಳು ಮೀನಮೇಷ ಎಣಿಸುತ್ತಿದ್ದಾರೆ. ನಗರ, ಗ್ರಾಮೀಣ ಪ್ರದೇಶಗಳೆಂಬ ಭೇದವಿಲ್ಲದೆ ಚುನಾವಣೆ ಪ್ರಚಾರಕ್ಕೆ ಬಿಸಿಲಿನಿಂದಾಗಿ ಜನರು ಬರುತ್ತಿಲ್ಲ. ಪ್ರಚಾರಕ್ಕೆ ದಿನಕ್ಕೆ 500 ರೂ.ಕೂಲಿ, ಊಟ, ವಾಹನ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ನಿತ್ಯ ಲಕ್ಷಾಂತರ ರೂ. ವ್ಯಯಿಸಬೇಕಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಖರ್ಚು ಮಾಡುತ್ತಿದ್ದರು.
ಇದು ಲೋಕಸಭೆ ಚುನಾವಣೆ ಆಗಿದ್ದರಿಂದ ಎಲ್ಲ ಕ್ಷೇತ್ರಗಳಲ್ಲಿ ಒಬ್ಬ ಅಭ್ಯರ್ಥಿ ಓಡಾಡಬೇಕಲ್ಲ ಎಂದು ಬಿಜೆಪಿ, ಕಾಂಗ್ರೆಸ್ ಮುಖಂಡರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂ.ಬೇಕು!:ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ, ಬಿ.ಎಸ್.ಯಡಿಯೂರಪ್ಪ ಸೇರಿ ಸ್ಟಾರ್ ಪ್ರಚಾರಕರನ್ನು ಕರೆತಂದು ಬೃಹತ್ ಸಮಾವೇಶ ಏರ್ಪಡಿಸುವುದು ಕಷ್ಟವಾಗುತ್ತಿದೆ. ರಾಜ್ಯಮಟ್ಟದ ನಾಯಕರ ಸಮಾವೇಶಕ್ಕೆ ಕನಿಷ್ಠ 10 -20 ಸಾವಿರ, ರಾಷ್ಟ್ರಮಟ್ಟದ ನಾಯಕರ ಸಮಾವೇಶಗಳಿಗೆ 50 ಸಾವಿರ ಜನರನ್ನು ಕರೆದುಕೊಂಡು ಬರಬೇಕು. ಅದಕ್ಕಾಗಿ ವಾಹನಗಳ ಬಾಡಿಗೆ, ಜನರಿಗೆ ಕುಡಿಯುವ ನೀರು, ಊಟದ ವ್ಯವಸ್ಥೆ ಇತರ ವೆಚ್ಚಗಳಿಗಾಗಿ ಲಕ್ಷಾಂತರ ರೂ. ವ್ಯಯಿಸಬೇಕು. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಬೃಹತ್ ಸಮಾವೇಶ ಆಯೋಜಿಸುವ ಬದಲು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದು ಸೂಕ್ತ ಎನ್ನುತ್ತಿದ್ದಾರೆ. ಆದರೆ ವರಿಷ್ಠರು ಬೃಹತ್ ಸಮಾವೇಶ ಆಯೋಜಿಸಬೇಕು ಎಂದು ನಿರ್ದೇಶನ ನೀಡಿರುವುದು ಅಭ್ಯರ್ಥಿಗಳಿಗೆ ತಲೆ ಬಿಸಿ ತಂದಿಟ್ಟಿದೆ.
ಕೊತಕೊತ ವಾತಾವರಣ:ಕೆಲವು ಅಭ್ಯರ್ಥಿಗಳು ಹಣ ಖರ್ಚು ಮಾಡಿ ಸಮಾವೇಶ ನಡೆಸಲು ಸಿದ್ಧವಿದ್ದರೂ, ಉತ್ತರ ಕರ್ನಾಟಕ ಅದರಲ್ಲೂ ಉಷ್ಣಾಂಶ 42-43 ಡಿಗ್ರಿ ತಲುಪಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರನ್ನು ಸೇರಿಸುವುದು ಕಷ್ಟ. ಕಳೆದ ಕೆಲವು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ, ಬಿಸಿಲಿನ ಪ್ರಖರತೆಯೇನೂ ಕಡಿಮೆಯಾಗಿಲ್ಲ. ಹಾಗಾಗಿ ಹಣ ಕೊಡು ತ್ತೇವೆಂದರೂ, ಜನ ಗಂಟೆಗಟ್ಟಲೆ ಬಿಸಿಲಲ್ಲಿ ಕುಳಿತು ದಣಿಯಲು ಸಿದ್ಧರಿಲ್ಲ. ಹೀಗಾಗಿ ಪ್ರಚಾರ ಕಣವೂ ರಂಗೇರುತ್ತಿಲ್ಲ.
ಮೋದಿ, ಸಿದ್ದು, ಬಿಎಸ್​ವೈಗೆ ಬೇಡಿಕೆ:ಲೋಕಸಭೆ ಚುನಾವಣೆ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೆಚ್ಚಿನ ಬೇಡಿಕೆಯಿದೆ. ಒಮ್ಮೆ ಕ್ಷೇತ್ರಕ್ಕೆ ಬಂದು ಹೋಗಬೇಕೆಂದು ಅಭ್ಯರ್ಥಿಗಳು ದುಂಬಾಲು ಬಿದ್ದಿದ್ದಾರೆ. ಕೆಲ ಅಭ್ಯರ್ಥಿಗಳು ಮೋದಿ ಅವರ ರೋಡ್ ಶೋ ಆಯೋಜನೆಗೆ ಪ್ರಯತ್ನ ಆರಂಭಿಸಿದ್ದಾರೆ. ಆದರೆ, ವರಿಷ್ಠರು ಅಭ್ಯರ್ಥಿಗಳು ಕೇಳಿದ ಕಡೆಯೆಲ್ಲ ಈ ನಾಯಕರ ಪ್ರಚಾರಕ್ಕೆ ಅವಕಾಶ ನಿರಾಕರಿಸುತ್ತಿದ್ದಾರೆ.
1. ಲೋಕಸಭೆ ಅಭ್ಯರ್ಥಿಗಳ ವೆಚ್ಚದ ಮೇಲೆ ಕಣ್ಣು
2. ಪ್ರತಿ ಅಭ್ಯರ್ಥಿ ಮೇಲೆ ನಿಗಾ ಇಡಲಿದೆ ಆಯೋಗ
3. 2024ರ ಚುನಾವಣೆಯಲ್ಲಿ 95 ಲಕ್ಷ ರೂ. ನಿಗದಿ
4. ಪ್ರತಿ ಅಭ್ಯರ್ಥಿ 95 ಲಕ್ಷ ಖರ್ಚು ಮಾಡಬಹುದು
5.1951ರ ಮೊದಲ ಎಲೆಕ್ಷನ್ ವೆಚ್ಚ ಮಿತಿ 25 ಸಾವಿರ
6. 1980ರಲ್ಲಿ ಗರಿಷ್ಠ ಖರ್ಚಿನ ಮಿತಿ 1 ಲಕ್ಷ ರೂ.ಗೆ ಏರಿಕೆ
1. 95 ಲಕ್ಷ ಮಾತ್ರ ಚುನಾವಣೆ ವೆಚ್ಚಕ್ಕೆ ಬಳಕೆ
2. ಇಷ್ಟೇ ಹಣದಲ್ಲಿ ವೆಚ್ಚ ಸರಿದೂಗಿಸಬೇಕು
3. ಸಮಾವೇಶಕ್ಕೆ ಕನಿಷ್ಠ 60-70 ಲಕ್ಷ ಬೇಕು
4. 10 ಸಾವಿರ ಜನರ ಕರೆತಂದರೂ ಕಷ್ಟ
5. ಪ್ರತಿಯೊಬ್ಬರಿಗೂ 500 ರೂ. ಕೊಡಬೇಕು
6. ಊಟ, ಪ್ರಯಾಣದ ಖರ್ಚು ಹೆಚ್ಚುವರಿ
7. ವಾಹನ ಬಾಡಿಗೆ ಕಿ.ಮೀಗೆ 3-5 ರೂ. ಏರಿಕೆ
8. ಹಣ ಪಡೆದ ಬಳಿಕ ಜನ ಕೈಕೊಡುವ ಸಾಧ್ಯತೆ
9. ಒಂದು ಸಮಾವೇಶಕ್ಕೆ ವೆಚ್ಚ ಮಿತಿ ಪೂರ್ಣ
1. ನರೇಗಾ ಕೂಲಿ ಮೊತ್ತವೇ ಈಗ 500 ರೂ.
2. ಹೀಗಾಗಿ 500 ರೂ. ಕೊಡದೆ ಜನ ಬರಲ್ಲ
3. 500 ರೂಪಾಯಿ ಜತೆ ಊಟ ಹೆಚ್ಚುವರಿ
4. ಬಿಸಿಲು ಸೋಕದಂತೆ ಪೆಂಡಾಲ್ ಕಟ್ಟಬೇಕು
5. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು
6. ಈ ಎಲ್ಲ ಸೌಲಭ್ಯ ಕೊಟ್ಟರೆ ಮಾತ್ರ ಜನ ಲಭ್ಯ
1. ಸಮಾವೇಶಕ್ಕಿಂತ ರೋಡ್​ಶೋ ಲಾಭ ಹೆಚ್ಚು
2. ಸ್ಟಾರ್ ಪ್ರಚಾರಕ ಪ್ರಚಾರಕ್ಕೆ ಹೆಚ್ಚು ಖರ್ಚಿಲ್ಲ
3. ಜನರನ್ನು ಹಣಕೊಟ್ಟು ಕರೆ ತರಬೇಕಾಗಿಲ್ಲ
4. ಪೆಂಡಾಲ್, ಊಟ, ನೀರಿನ ಟೆನ್ಶನ್ ಇರಲ್ಲ
5. ಜನರೇ ಸ್ಟಾರ್ಸ್​ಗಳ ನೋಡೋಕೆ ಬರುತ್ತಾರೆ
6. ಮನೆಗಳಿಗೆ ಹೋದರೆ ಮತ ಗಟ್ಟಿ ಆಗುವ ವಿಶ್ವಾಸ
ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
