ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ವಿಧಾನಸಭಾ ಚುನಾವಣಾ ಕಣದಲ್ಲಿ ಸಂಸದೆ ಸುಮಲತಾ ಅಂಬರೀಷ್​ ಅವರು ಜೆಡಿಎಸ್​ ಪಕ್ಷವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರೂ ಜೆಡಿಎಸ್​ ನಾಯಕರು ಸುಮ್ಮನಿರುವುದು ಅವರಿಗೆ ವರದಾನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಾದ ತಪ್ಪಿನಿಂದ ದಳಪತಿಗಳು ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ. ಮಾತಿನ ಎಡವಟ್ಟಿನಿಂದ ನಷ್ಟ ಮಾಡಿಕೊಳ್ಳದಂತೆ ಎಚ್ಚರಿಕೆ ನಡೆ ಅನುಸರಿಸುತ್ತಿದ್ದಾರೆ. ಪದೇಪದೆ ಜೆಡಿಎಸ್‌ ನಾಯಕರನ್ನು ಸುಮಲತಾ ಕೆಣಕುತ್ತಿದ್ರು ಏನೂ ಪ್ರತಿಕ್ರಿಯೆ ನೀಡದೆ ಗಪ್ ಚುಪ್ ಆಗಿದ್ದಾರೆ.
ಇದನ್ನೂ ಓದಿ:ವೀಲ್​ಚೇರ್​ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಎಂದು ಹೇಳಿಕೊಂಡು ತಮಿಳುನಾಡಿನ ಸಿಎಂಗೆ ಟೋಪಿ ಹಾಕಿದ್ದ!
ಸುಮಲತಾ ಪದೇಪದೆ ತಮ್ಮ ಮಾತಿನ ಮೂಲಕ ಜೆಡಿಎಸ್ ಟಾರ್ಗೆಟ್ ಮಾಡಿದ್ರೂ ಕೂಡ ತಿರುಗೇಟು ನೀಡಲು ದಳಪತಿಗಳು ಹಿಂದೇಟು ಹಾಕುತ್ತಿದ್ದಾರೆ. ಸ್ವಾಭಿಮಾನ ಇದ್ದವರು ಜೆಡಿಎಸ್‌‌ನಲ್ಲಿ ಇರುವುದಿಲ್ಲ, ಜೆಡಿಎಸ್‌ ನಾಯಕರಿಗೆ ದುರಹಂಕಾರದ ಪರಮಾವಧಿ ಎಂದೆಲ್ಲ ಸುಮಲತಾ ವಾಗ್ದಾಳಿ ನಡೆಸುತ್ತಿದ್ದಾರೆ.
ಸದಾ ಸಂಸದೆ ಸುಮಲತಾ ವಿರುದ್ಧ ಹರಿಹಾಯ್ತಿದ್ದ ಜೆಡಿಎಸ್‌ ಶಾಸಕರು ಈಗ ಫುಲ್ ಸೈಲೆಂಟ್ ಆಗಿದ್ದಾರೆ. ಸುಮಲತಾ ವಿರುದ್ಧ ಅಗ್ರೆಸ್ಸಿವ್ ಆಗಿದ್ದ ರವೀಂದ್ರ ಶ್ರೀಕಂಠಯ್ಯ ಕೂಡಾ ಕೂಲ್ ಕೂಲ್ ಆಗಿದ್ದಾರೆ. ಸುಮಲತಾ ಅಪ್ರಭುದ್ಧ ರಾಜಕಾರಣಿ. ಮೇ 13ರಂದು ಸುಮಲತಾಗೆ ಉತ್ತರ ಕೊಡ್ತೀವಿ. ಮಂಡ್ಯ ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಜೆಡಿಎಸ್‌ ಗೆಲ್ಲಲಿದೆ ಎಂದು ಕೂಲ್​ ಆಗಿಯೇ ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.(ದಿಗ್ವಿಜಯ ನ್ಯೂಸ್​)
ನಾನು ಮಾಡಿದ ಅಭಿವೃದ್ಧಿಯೇ ಶ್ರೀರಕ್ಷೆ

ಮೋದಿ ಜತೆ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ; ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಪ್ರೀತಮ್ ಗೌಡ

ತಾಳಿಕೋಟೆಯಲ್ಲಿ ಅಬ್ಬರಿಸಿದ ರಾಜಾಹುಲಿ; ಭಾವೈಕ್ಯತೆ ಸಂದೇಶ ಸಾರಿದ ಬಿಎಸ್​ವೈ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × three =
Remember me
