
ಶಿವಾನಂದ ತಗಡೂರು,ಬೆಂಗಳೂರು:ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ರಾಜಕಾರಣ ರಾಜ್ಯ ರಾಜಕಾರಣದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವ ಪರೀಕ್ಷೆಗೆ ಲೋಕಸಭಾ ಚುನಾವಣೆ ವೇದಿಕೆಯಾಗಿದೆ.ರಾಜಕಾರಣದಲ್ಲಿ ಆರು ದಶಕಗಳನ್ನು ಕಳೆದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದೇ ವೇದಿಕೆಯಲ್ಲಿ ನಿಂತು ಮತ ಯಾಚನೆ ಮಾಡಲು ಹೊರಟಿರುವುದು ಕೂಡ, ರಾಜ್ಯ ರಾಜಕಾರಣದ ಮಗ್ಗಲು ಬದಲಾಗುತ್ತಿರುವ ಸೂಚನೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.ಒಕ್ಕಲಿಗರ ಪ್ರಭಾವಿ ನಾಯಕರಾಗಿ ದಶಕಗಳಿಂದ ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡು ಬಂದಿದ್ದ ಎಚ್.ಡಿ.ದೇವೇಗೌಡರು ಈ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸುವ ಮೂಲಕ ಸಮುದಾಯದ ಮೇಲಿನ ಹಿಡಿತ ಗಟ್ಟಿಗೊಳಿಸಬೇಕು ಎನ್ನುವ ಇರಾದೆಯಲ್ಲಿದ್ದಾರೆ.ಮತ್ತೊಂದೆಡೆ ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು, ಕಳೆದ ಚುನಾವಣೆಯಲ್ಲಿ ಆಗಿರುವ ಹಿನ್ನೆಡೆಯನ್ನು ಮೆಟ್ಟಿ ನಿಂತು ಬಿಜೆಪಿಗೆ ತಮ್ಮ ವರ್ಚಸ್ಸಿನ ಮೂಲಕ ಮೊದಲಿನಂತೆ ಶಕ್ತಿ ತುಂಬಲು ಮುಂದಾಗಿದ್ದಾರೆ.ಒಕ್ಕಲಿಗರು ಮತ್ತು ಲಿಂಗಾಯಿತ ಸಮುದಾಯಗಳು ಸಮ್ಮಿಶ್ರಣಗೊಂಡರೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಶಕ್ತಿಯಾಗಬಹುದು ಎನ್ನುವ ಮುನ್ನೋಟ ಇಬ್ಬರು ನಾಯಕರಲ್ಲಿದೆ. ಅದೇ ಕಾರಣಕ್ಕೆ ರಾಜಕಾರಣದ ಹಳೆ ವೈಷಮ್ಯ ಮರೆತು ಇಬ್ಬರೂ ನಾಯಕರು ತಮ್ಮ ಮಕ್ಕಳ ಜೊತೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತಬೇಟೆಗೆ ಇಳಿದಿದ್ದಾರೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿರುವ ಕಾಂಗ್ರೆಸ್ ಭದ್ರ ನೆಲೆಯ ವಿರುದ್ದ ಈಜಬೇಕಾದರೆ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳ ಸಮ್ಮಿಲನ ಹೆಚ್ಚು ಪರಿಣಾಮಕಾರಿ ಆಗಬಹುದು ಎನ್ನುವ ನಿರೀಕ್ಷೆ ಎರಡೂ ಪಕ್ಷದ ನಾಯಕರಲ್ಲಿದೆ. ಈ ಹಿನ್ನೆಲೆಯಲ್ಲಿಯೇ ಹಲವು ವೇದಿಕೆಯಲ್ಲಿ ಪರಸ್ಪರ ಕೈ ಹಿಡಿದು ಹಳೆಯ ಘಟನೆಗಳನ್ನು ಮರೆಸುವ ಮತ್ತು ಹೊಸ ಬದಲಾವಣೆಗೆ ನಾಂದಿಯಾಡುವ ನಿಟ್ಟಿನಲ್ಲಿ ಪರಸ್ಪರ ವಿಶ್ವಾಸದ ಹೆಜ್ಜೆ ಇಟ್ಟಿದ್ದಾರೆ.ರಾಷ್ಟ್ರ ರಾಜಕಾರಣ ದೃಷ್ಟಿಯಲ್ಲಿ ಮೈತ್ರಿ ರಾಜಕಾರಣ ಬೀರುವ ಪರಿಣಾಮಗಳೇ ಬೇರೆ. ಆದರೆ, ರಾಜ್ಯ ರಾಜಕಾರಣದಲ್ಲಿ ಸ್ಥಳೀಯ ನಾಯಕರುಗಳ ಪ್ರಭಾವವೇ ಮುಖ್ಯವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯ ರಾಜಕಾರಣದಲ್ಲಿ ಇಬ್ಬರೂ ನಾಯಕರು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದ್ದಾರೆ ಎನ್ನುವುದು ಸ್ಪಷ್ಟವಾಗುವ ಸಾಧ್ಯತೆ ಇದೆ. ನಿರೀಕ್ಷೆಗೂ ಮೀರಿ ಇದು ಯಶಸ್ವಿ ಹೊಂದಾಣಿಕೆ ರಾಜಕಾರಣದ ಮುನ್ನುಡಿ ಆಗಬಹುದು ಎನ್ನುವ ದಿಸೆಯಲ್ಲಿ ರಾಜಕಾರಣದ ಚರ್ಚೆಗಳು ಜೆಡಿಎಸ್ ಮತ್ತು ಬಿಜೆಪಿ ಅಂಗಳದಲ್ಲಿ ನಡೆಯುತ್ತಿರುವುದು ವಿಶೇಷ.
*ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜತೆಯಾಗಿ ಮತದಾರರ ಮುಂದೆ ಹೋಗುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಭಾಷ್ಯ ಬರೆಯುತ್ತಿದೆ. ಹಳೆ ಕಹಿ ಘಟನೆಗಳನ್ನು ಮರೆತು ಹೊಸ ಶಕ್ತಿಯಾಗಿ ಹೊರಹೊಮ್ಮಲು ಲೋಕಸಭೆ ಚುನಾವಣೆ ವೇದಿಕೆ ಆಗವುದರಲ್ಲಿ ಎರಡು ಮಾತಿಲ್ಲ.-ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
