ದೇವನಹಳ್ಳಿ:ಒಂದು ಇಲಾಖೆಯ ಮೇಲೆ ಇನ್ನೊಂದು ತನಿಖಾ ಇಲಾಖೆ ದಾಳಿ ಮಾಡೋದು ಅಪರೂಪ. ಅಂತಹ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಪ್ರಕರಣ ದಿಂದ ಕೈ‌ಬಿಡುವ ವಿಚಾರದಲ್ಲಿ ಮಂಜುನಾಥ್ ಎಂಬುವವರ ಬಳಿ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೊಪ ಕೇಳಿ ಬಂದಿತ್ತು. ವಿಜಯಪುರ ಠಾಣೆಯ ಕಾನ್ಸಟೆಬಲ್ ಚಂದ್ರಶೇಖರ್ ಎಂಬಾತ 3 ಲಕ್ಷಕ್ಕೆ ಹಣಕ್ಕೆ‌ ಬೇಡಿಕೆ ಇರಿಸಿದ್ದ ಎನ್ನಲಾಗಿದೆ.
ಸಬ್ ಇನ್ಸ್​ಪೆಕ್ಟರ್ ಈರಮ್ಮ ಮೇಲೆ ಕಾನ್​ಸ್ಟೇಬಲ್ ಮುಖಾಂತರ ಹಣ‌ಕ್ಕಾಗಿ ಬೇಡಿಕೆ ಇಡುವ ಆರೋಪ ಇತ್ತು. ಮೊದಲ ಹಂತವಾಗಿ‌ ಮಂಜುನಾಥ್ ಎಂಬುವವರು 30 ಸಾವಿರ ಹಣ‌ವನ್ನು ಕಾನ್ಸಟೆಬಲ್ ಚಂದ್ರಶೇಖರ್​ಗೆ ನೀಡುತ್ತಿದ್ದರು. ಈ ಸಂದರ್ಭ ಲೋಕಾಯುಕ್ತ ದಾಳಿ ಮಾಡಿದೆ.
ಡಿವೈಎಸ್ಪಿ ರೇಣುಕಪ್ರಸಾದ್ ಹಾಗೂ ಇನ್ಸ್​ಪೆಕ್ಟರ್ ಅಂಬರಿಶ್‌ ಗೌಡ ನೇತೃತ್ವದಲ್ಲಿ ಲೋಕಾಯುಕ್ತರು ದಾಳಿ ‌ನಡೆಸಿ ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಕಾನ್ಸ್​ಟೇಬಲ್​ ಚಂದ್ರಶೇಖರ್​ರನ್ನು ಲೋಕಯುಕ್ತರು ತಮ್ಮ ವಶಕ್ಕೆ ಪಡೆದಿದ್ದಾರೆ. ಇದೀಗ ಇನ್ಸ್​ಪೆಕ್ಟರ್ ಈರಮ್ಮನ ವಿಚಾರಣೆಯನ್ನು ಲೊಕಾಯುಕ್ತರು ಮುಂದುವರೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fifteen =
Remember me
