ಬೆಂಗಳೂರು:ಆರ್​​ಟಿಓ ಅಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಳಗ್ಗೆ 4 ಗಂಟೆ ವೇಳೆ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ 20ಕ್ಕೂ ಅಧಿಕ ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಅತ್ತಿಬೆಲೆ ಆರ್​​ಟಿಓ ಕಛೇರಿಗೆ ದಾಳಿ ನಡೆಸಿದ್ದಾರೆ.
ಸುಮಾರು 5 ವಾಹನಗಳಲ್ಲಿ ಆಗಮಿಸಿದ ಲೋಕಾಯುಕ್ತ ಪೊಲೀಸರು ಆರ್​​ಟಿಓ ಕಛೇರಿ ಸಿಬ್ಬಂದಿ ಬಳಿಯಿದ್ದ ಮೊಬೈಲ್ ಮತ್ತು ಪರ್ಸ್​ಗಳನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪತ್ತೆಯಾದ ಹಣಕ್ಕೆ ಸೂಕ್ತ ದಾಖಲೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ.
ಒಂದೊಂದು ಲಾರಿಗೆ ಹಣ ಫಿಕ್ಸ್
ಅತ್ತಿಬೆಲೆ ಆರ್​​ಟಿಓ ಕಛೇರಿಯಲ್ಲಿ ಭ್ರಷ್ಟಾಚಾರವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಛೇರಿ ಒಳಗಡೆ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾಗಲೇ, ಹೊರಗಡೆ ಲಾರಿ ಕ್ಲೀನರ್ಸ್​​ಗಳಿಂದ ಲಂಚ ಪಡೆಯುತ್ತಿದ್ದುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ತಮಿಳುನಾಡಿನಿಂದ ಬೆಂಗಳೂರಿಗೆ ಹೂವಿನ ಲಾರಿಗಳು ಆಗಮಿಸುತ್ತವೆ. ಅಂತರ್​ರಾಜ್ಯದಿಂದ ಬರುವ ಲಾರಿಗಳಿಗೆ ಅಧಿಕಾರಿಗಳು ಒಂದೊಂದು ಲಾರಿಗೂ ಇಂತಿಷ್ಟು ಹಣ ಫಿಕ್ಸ್ ಮಾಡಿದ್ದಾರೆ. ಸಾಗಾಟದ ವಾಹನಗಳ ಕ್ಲೀನರ್ಸ್​​ಗಳು ಲೋಕಾಯುಕ್ತ ಅಧಿಕಾರಿಗಳು ಇರುವುದನ್ನು ಅರಿಯದೆ, ಅವರ ಎದುರೇ ಲಂಚ ನೀಡಿದ್ದಾರೆ.
ಬೆಂಗಳೂರಿನ ಹೂವಿನ ಮಾರುಕಟ್ಟೆಗೆ ಸಾಗುವ ವಾಹನವೊಂದಕ್ಕೆ ನಿಗಿದಿತ ಮೊತ್ತ ಫಿಕ್ಸ್ ಮಾಡಿರುವ ಆರ್​ಟಿಓ ಅಧಿಕಾರಿಗಳು, ಲಂಚ ಪಡೆದು ಕೈಗೆ ಶೀಲ್ ಹಾಕುತ್ತಾರೆ. ವಾಹನವೊಂದಕ್ಕೆ 100 ರೂಪಾಯಿ ಫಿಕ್ಸ್ ಮಾಡಿದ್ದು, ನಿಗದಿತ ಹಣ ನೀಡಿದರೆ ಕೈಗೆ ಶೀಲ್ ಹಾಕುತ್ತಾರೆ. ಶೀಲ್ ಇದ್ದರೆ ಮುಂದೆ ವಾಹನಗಳನ್ನು ಆರ್​ಟಿಓ ಅಧಿಕಾರಿಗಳು ಪರಿಶೀಲನೆ ಮಾಡುವುದಿಲ್ಲ ಎಂದು ಹೂ ಸಾಗಾಟ ವಾಹನದ ಕ್ಲೀನರ್ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದಾನೆ.
ವಾಹನ ಚಾಲಕರ ಬಳಿ ಅಧಿಕಾರಿಗಳ ನೆಪದಲ್ಲಿ ಹಣ ವಸೂಲಿ ಮಾಡುತ್ತಿದ್ದ ಧರ್ಮ ಎಂಬ ವ್ಯಕ್ತಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × five =
Remember me
