ಬೆಂಗಳೂರು:ಚುನಾವಣೆ ಮುಗಿದು ಸರ್ಕಾರ ರಚನೆಯಾದ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ತಮ್ಮ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಇಂದು (ಮೇ 31) ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವೆಡೆ ದಾಳಿಯಾಗಿದೆ. ಬೆಸ್ಕಾಂನ ಟೆಕ್ನಿಕಲ್​ ಡೈರೆಕ್ಟರ್ ರಮೇಶ್ ಅವರ ಬಸವೇಶ್ವರನಗರದ ನಿವಾದ ಮೇಲೆ ಹಾಗೂ ಇಂಡಸ್ಟ್ರೀಸ್ ಆ್ಯಂಡ್ ಬಾಯ್ಲರ್ ಇಲಾಖೆ ಅಧಿಕಾರಿಯೊಬ್ಬರ ಮನೆ ಮೇಲೂ ಲೋಕಾಯುಕ್ತ ದಾಳಿಯಾಗಿದೆ. ಅಲ್ಲದೆ, ಕಾರ್ಮಿಕ ಇಲಾಖೆಯ ಉಪ ನಿರ್ದೇಶಕ ನಾರಾಯಣಪ್ಪ ಅವರ ಬೆಂಗಳೂರಿನ ವಿಜಯನಗರದ ನಿವಾಸ ಸೇರಿ ಸಂಬಂಧಿಕರ ಮನೆ ಮೇಲೆ ಏಕಕಾಲದಲ್ಲಿ ದಾಳಿಯಾಗಿದೆ. ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪ ಹಿನ್ನೆಲೆಯಲ್ಲಿ ಆದಾಯದ ಮೂಲ, ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ವಿವರಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ:ಜೆಡಿಎಸ್​ ಪಕ್ಷ ವಿಸರ್ಜನೆ ಯಾವಾಗ ಎಂದು ಪ್ರಶ್ನಿಸುವವರಿಗೆ ಮಾಜಿ ಸಿಎಂ ಎಚ್​ಡಿಕೆ ಕೊಟ್ಟ ಉತ್ತರವಿದು…
ಹಾವೇರಿಯಲ್ಲೂ ಲೊಕಾಯುಕ್ತ ದಾಳಿಯಾಗಿದೆ. ರಾಣೆಬೇನ್ನೂರು ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ರಾಣೆಬೇನ್ನೂರಿನ ಸಿದ್ದಾರೂಢ ಮಠದ ಹಿಂಭಾಗದಲ್ಲಿ ಇರುವ ಐಷಾರಾಮಿ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ತಂಡ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ.
ತುಮಕೂರಿನಲ್ಲೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ. ಕೆ.ಐ.ಎ.ಡಿ.ಬಿ ಅಧಿಕಾರಿ ನರಸಿಂಹಮೂರ್ತಿ ಅವರ ತುಮಕೂರು ನಗರದ ಆರ್.ಟಿ. ನಗರದಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಡಿಎಸ್​ಪಿಗಳಾದ ಮಂಜುನಾಥ್ ಹಾಗೂ ಹರೀಶ್ ತಂಡದಿಂದ ದಾಳಿ ನಡೆದಿದ್ದು, ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಕೊಪ್ಪಳದಲ್ಲಿಯೂ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಕೆಆರ್​ಐಡಿಎಲ್​ನ ಇಇ ಝೆಡ್.ಎಂ. ಚಿಂಚೋಳಿಕರ್ ಅವರ ಕಚೇರಿ ಮತ್ತು ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹಾಗೂ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿಎಸ್​ಪಿ ಸಲೀಂಪಾಷಾ ಅವರ ನೇತೃತ್ವದಲ್ಲಿ ದಾಳಿಯಾಗಿದೆ.
ಇದನ್ನೂ ಓದಿ:2 ಗ್ಯಾರಂಟಿ ಬೇಷರತ್ ಜಾರಿ; ಎಲ್ರಿಗೂ 200 ಯುನಿಟ್ ಕರೆಂಟ್, ಸ್ತ್ರೀಯರಿಗೆ ಉಚಿತ ಬಸ್ ಟಿಕೆಟ್
ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆದಿದೆ. ನಿವೇದಿತಾ ನಗರದ ಸಂಕ್ರಾಂತಿ ವೃತ್ತದಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ಅವರ ಮನೆಯ ಹಾಗೂ ತೋಟದ ಮನೆ ಸೇರಿ ಹಲವು ಕಡೆ 13 ತಂಡದಿಂದ ಏಕಕಾಲಕ್ಕೆ‌ ದಾಳಿಯಾಗಿದ್ದು, ಕಡತಗಳ ಪರಿಶೀಲನೆ ನಡೆಯುತ್ತಿದೆ.
ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ಆರೋಪದ ಅಡಿಯಲ್ಲಿ ಶಿವಮೊಗ್ಗದ ಶರಾವತಿ ನಗರ, ಶೆಟ್ಟಿಹಳ್ಳಿ ಹಾಗೂ ಶಿಕಾರಿಪುರದಲ್ಲಿ ಲೋಕಾಯುಕ್ತ ದಾಳಿಯಾಗಿದೆ. ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಪ್ರಶಾಂತ್ ಮನೆ ಹಾಗೂ ತೋಟದ ಮನೆ ಮೇಲೆ ರೇಡ್ ಆಗಿದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರ್​ ಶಂಕರ್​ ನಾಯ್ಕ್ ಅವರ​ ಶಿಕಾರಿಪುರದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಭಯೋತ್ಪಾದಕ ಕೃತ್ಯಕ್ಕೆ ಹವಾಲಾ ಹಣ ಬಳಕೆ ಆರೋಪ: ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ದಾಳಿ

ಎರಡು ಮುಖ, ಮೂರು ಕಣ್ಣುಳ್ಳ ಮೇಕೆ ಮರಿ ಜನನ! ಭಾರವಾದ ತಲೆಯಿಂದ ನಿಲ್ಲುವುದಕ್ಕೂ ಆಗ್ತಿಲ್ಲ

ತಂಬಾಕುವ್ಯಸನ ಬಿಡಲು ಮನಸ್ಸಿದ್ದರಷ್ಟೇ ಮಾರ್ಗ!; ಸುರುಳಿ ಹೊಗೆ, ಜಗಿದ ತಂಬಾಕು ಜೀವಕ್ಕೆ ಬತ್ತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − sixteen =
Remember me
