ಬಾಗಲಕೋಟೆ:ಇಂದು ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಸರ್ಕಾರಿ ಅಧಿಕಾರಿಗಳ ಬೆವರಿಳಿಸಿದ್ದಾರೆ. ದಾಳಿ ವೇಳೆ ಸಾಕಷ್ಟು ಸಂಪತ್ತು ಪತ್ತೆಯಾಗಿದ್ದು, ಬಾಗಲಕೋಟೆಯ ಕೃಷಿ ಇಲಾಖೆಯ ಜೆಡಿ ಚೇತನಾ ಪಾಟೀಲಗೆ ವ್ಯಾನಿಟಿ ಬ್ಯಾಗ್, ಶೋಕಿ ಇತ್ತು ಎಂಬುದು ಬೆಳಕಿಗೆ ಬಂದಿದೆ.
ವಿದ್ಯಾಗಿರಿಯ ಅಕ್ಕಿಮರಡಿ ಲೇಔಟನಲ್ಲಿರುವ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಅವರ ಮನೆಯ ಮೇಲೆ ನಡೆದ ಲೋಕಾ ದಾಳಿಯ ವೇಳೆ ರಾಶಿ ರಾಶಿ ವ್ಯಾನಿಟ್​ ಬ್ಯಾಗ್​ಗಳು ಪತ್ತೆಯಾಗಿವೆ. ಸುಮಾರು 30ಕ್ಕೂ ಹೆಚ್ಚು ವಿವಿಧ ತರಹದ ವ್ಯಾನಿಟಿ ಬ್ಯಾಗ್ ಮನೆಯಲ್ಲಿದ್ದವು. ಅಲ್ಲದೆ, ಚಿನ್ನಾಭರಣ, ಬೆಳ್ಳಿ ಫ್ರೇಮ್ ಇರುವ ಫೋಟೋ ಸಹ ಪತ್ತೆಯಾಗಿದೆ.
ಇದನ್ನೂ ಓದಿ:ಕಾರಿನ ಪೇಂಟ್ ಮಾಡಲು 1 ಕೋಟಿ ರೂ. ವ್ಯಯಿಸಿದ ಮುಖೇಶ್ ಅಂಬಾನಿ!; ಇದರ ವಿಶೇಷತೆ ಏನು?
ಹತ್ತಕ್ಕೂ ಅಧಿಕ ಲಗೇಜ್ ಬ್ಯಾಗ್ ಸಹ ಲೋಕಾ ಅಧಿಕಾರಿಗಳಿಗೆ ದೊರಕಿದೆ. ಸದ್ಯ ಅಕ್ಕಸಾಲಿಗರಿಂದ ಚಿನ್ನಾಭರಣ ಪರಿಶೀಲನೆ ನಡೆಯುತ್ತಿದೆ.
ಚೇತನಾ ಪಾಟೀಲ ಮನೆಯಲ್ಲಿ ಎರಡು ಆಮೆಗಳು ಸಹ ಪತ್ತೆಯಾಗಿವೆ. ಆಮೆಗಳನ್ನು ಸಾಕಿದ್ದೇಕೆ ಎನ್ನುವ ಕುತೂಹಲವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಲ್ಯಾಪ್​ಟಾಪ್ ನಲ್ಲಿರುವ ದಾಖಲಾತಿ ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ಸಂಗ್ರಹಿಸುತ್ತಿದ್ದು ಹೆಚ್ಚಿನ ಪರಿಶೀಲನೆ ನಡೆಸಲಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ.(ದಿಗ್ವಿಜಯ ನ್ಯೂಸ್​)
ಲೋಕಾಯುಕ್ತ ದಾಳಿ | ಬಾಗಲಕೋಟೆ ಕೃಷಿ ನಿರ್ದೇಶಕಿ ಮನೆಯಲ್ಲಿ ಆಮೆ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
