|ವಿಲಾಸ ಮೇಲಗಿರಿಬೆಂಗಳೂರು
ದಶಕದ ಹಿಂದೆ ಭ್ರಷ್ಟರ ಪಾಲಿಗೆ ದುಃಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸಲಾಗಿದೆ. ಲೋಕಾಯುಕ್ತ ಬಲಪಡಿಸಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆ, ಲೋಕಾಯುಕ್ತರ ಅಧಿಕಾರಕ್ಕೆ ಕತ್ತರಿ ಹಾಕಿರುವ ಪ್ರಕರಣದ ವಿಚಾರಣೆ ಹೈಕೋರ್ಟ್​ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಈ ನಡುವೆ ಒಬ್ಬ ವ್ಯಕ್ತಿ, ಒಂದು ಪ್ರಕರಣ ವಿಚಾರಣೆ ನಡೆಸುತ್ತಿದ್ದ ಲೋಕಾಯುಕ್ತ ಈಗ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಕಾರ್ಯವೈಖರಿಯನ್ನೂ ಬದಲಿಸಿಕೊಂಡಿದೆ!
ವ್ಯಕ್ತಿ, ಪ್ರಕರಣ ಕೇಂದ್ರಿತ ತನಿಖೆಯಿಂದ ಸಮುದಾಯ ಆಧಾರಿತ ಕಾರ್ಯಕ್ರಮಗಳ ಮೇಲೆ ಕಣ್ಣು ನೆಟ್ಟಿದೆ. ಸಮಾಜದ ಅಂಕು-ಡೊಂಕು ತಿದ್ದಲು ಸ್ಪಷ್ಟ ರೂಪು-ರೇಷೆ ಸಿದ್ಧಪಡಿಸಿ ಜಾರಿಗೊಳಿಸಿದೆ. ಸರ್ಕಾರದ ಪ್ರಮುಖ ಯೋಜನೆಗಳ ಜಾರಿ ಮೇಲೆ ನಿಗಾ ಇರಿಸಿದೆ. ಅಧಿಕಾರಿಗಳು ಆಚೆ-ಈಚೆ ಅಲ್ಲಾಡಿದರೂ ಚಾಟಿ ಬೀಸುವ ಕೆಲಸಕ್ಕೆ ಕೈಹಾಕಿದೆ.
ಮಗ್ಗಲು ಬದಲು:ಒಬ್ಬ ವ್ಯಕ್ತಿ, ಒಂದು ಪ್ರಕರಣಕ್ಕೆ ನ್ಯಾಯ ಕೊಡಿಸುವುದು ಎಷ್ಟು ಮುಖ್ಯವೋ, ಸಮಾಜದ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳಲ್ಲಿ ಭ್ರಷ್ಟಾ ಚಾರ ನಡೆಯದಂತೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪು ವಂತೆ ಮಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಮೊದಲೆಲ್ಲ ಲೋಕಾಯುಕ್ತರು ಸರ್ಕಾರಿ ಕಚೇರಿಗಳ ಮೇಲೆ ಹಠಾತ್ ದಾಳಿ ನಡೆಸಿ ಅಕ್ರಮ ಪತ್ತೆ ಮಾಡುತ್ತಿದ್ದರು. ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುತ್ತಿದ್ದರು. ಜತೆಗೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದರು. ಆದರೀಗ, ಲೋಕಾ ಯುಕ್ತರೇ ಖುದ್ದು ಇಲಾಖೆ ಮುಖ್ಯಸ್ಥರನ್ನು ಕಚೇರಿಗೆ ಕರೆಸಿ ಸರ್ಕಾರದ ಯೋಜನೆಗಳ ರೂಪುರೇಷೆ, ಯೋಜನಾ ವೆಚ್ಚ, ಅನುಷ್ಠಾನದ ಹಂತಗಳು, ಕಾಲಮಿತಿ, ಗುತ್ತಿಗೆ ಅವಧಿ, ಕಾಮಗಾರಿ ನಿರ್ವಹಿಸುವ ಸಂಸ್ಥೆಯ ವಿವರ ಮತ್ತಿತರ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಕರ್ತವ್ಯ ನಿರ್ವಹಣೆಯಲ್ಲಿ ಖಚಿತತೆ:ಮೊದಲು ದೂರು ಬಂದ ಕೆಲವೇ ಕೆಲವು ಪ್ರಕರಣಗಳ ಮೇಲೆ ಲೋಕಾಯುಕ್ತರು ದೃಷ್ಟಿ ಹರಿಸುತ್ತಿದ್ದರು. ನಿರ್ದಿಷ್ಟ ಇಲಾಖಾ ಕಾರ್ಯಕ್ರಮಕ್ಕೆ ಸೀಮಿತವಾಗಿ ಕಾರ್ಯ ನಿರ್ವಹಿ ಸುತ್ತಿದ್ದರು. ಇನ್ನು ಕೆಲ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಕಾಲ ಕಾಲಕ್ಕೆ ಬಿಡಿ ಬಿಡಿಯಾಗಿ ಆದೇಶ, ಸುತ್ತೋಲೆ ಹೊರಡಿಸಿ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು.
ಈಗ ಲೋಕಾಯುಕ್ತ ಪೊಲೀಸರು ಮಾಡಬೇಕಾದ ಕರ್ತವ್ಯ, ಕಾರ್ಯವಿಧಾನಗಳನ್ನು ನಿರ್ದಿಷ್ಟವಾಗಿ ಒಂದು ಕೈಪಿಡಿ ರೂಪದಲ್ಲಿ ನೀಡಲಾಗಿದೆ. ಅಲ್ಲದೆ, ಮೊದಲಿಗಿಂತ ಲೋಕಾಯುಕ್ತ ಪೊಲೀಸರ ಜವಾಬ್ದಾರಿಗಳನ್ನು ಹೆಚ್ಚಿಸಲಾಗಿದೆ.
ದುರಾಡಳಿತ ತಪ್ಪಿಸಲು ದೂರ ದೃಷ್ಟಿ:ಸಾರ್ವಜನಿಕ ಕುಂದುಕೊರತೆ ನಿವಾರಿಸಲು ಮತ್ತು ದುರಾಡಳಿತ ತಪ್ಪಿಸಲು ಅಗತ್ಯ ಮಾಹಿತಿಯನ್ನು ಏಕೀಕರಿಸಿ ಸುತ್ತೋಲೆ/ಮಾರ್ಗಸೂಚಿ ಹೊರಡಿಸಲಾಗಿದೆ.
ಉದ್ಯೋಗ ಖಾತ್ರಿ ಖಾತ್ರಿಪಡಿಸುವ ಕೆಲಸ:ಲೋಕಾಯುಕ್ತ ಸಂಸ್ಥೆ ಮಹಾತ್ಮಗಾಂಧಿ ಉದ್ಯೋಗ ಖಾತಿ ಯೋಜನೆಯಲ್ಲಿ ಅಕ್ರಮ ಎಸಗಿರುವ ಹಿನ್ನೆಲೆ 2007-2012 ಕೈಗೊಂಡ ಕಾಮಗಾರಿಗಳ ತನಿಖೆ ನಡೆಸುತ್ತಿದೆ. ಜತೆಗೆ ಈ ಯೋಜನೆಯಲ್ಲಿನ ಲೋಪಗಳು ಕಂಡುಬಂದರೆ ಆಗಾಗ್ಗೆ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.
ತಿಂಗಳಿಗೊಮ್ಮೆ ದೂರು ಸ್ವೀಕಾರ!:ಪ್ರತಿ ಜಿಲ್ಲಾ ಲೋಕಾಯುಕ್ತ ಕಚೇರಿಯಿಂದ ಇನ್​ಸ್ಪೆಕ್ಟರ್ ಅಥವಾ ಅವರಿಗಿಂತ ಮೇಲಿನ ಅಧಿಕಾರಿ ತಿಂಗಳಿಗೊಮ್ಮೆ ತಾಲೂಕುಗಳಿಗೆ ಭೇಟಿ ನೀಡಿ ಜನರಿಂದ ದೂರು ಸ್ವೀರಿಸಲಿದ್ದಾರೆ. ತಾಲೂಕುಗಳಿಂದ ಜಿಲ್ಲಾ ಕೇಂದ್ರ ಕಚೇರಿಗೆ ಬಂದು ದೂರು ಸಲ್ಲಿಸಲು ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ.
ಕುಂದು ಕೊರತೆ ಆಲಿಸಿ ಕ್ರಮ:ಕೃಷಿ, ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಕೃಷಿ ಮಾರುಕಟ್ಟೆ ಸಮಿತಿಗಳ ಕಾರ್ಯನಿರ್ವಹಣೆ ಮೇಲೂ ನಿಗಾ ಇರಿಸಲಿದ್ದಾರೆ. ಗುಣಮಟ್ಟದ ಬೀಜ, ರಸಗೊಬ್ಬರ ಸಕಾಲಕ್ಕೆ ವಿತರಿಸದೆ ಇದ್ದಲ್ಲಿ ವಿಚಾರಿಸಿ ವರದಿ ಸಲ್ಲಿಸಲಿದ್ದಾರೆ. ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಹಾಸ್ಟೇಲ್, ಶಾಲೆಗಳಿಗೂ ಭೇಟಿ ನೀಡಿ ಕುಂದುಕೊರತೆ ಆಲಿಸುವ ಅಧಿಕಾರ ಹೊಂದಿದ್ದಾರೆ.
ಶೌಚಗೃಹ ಸದ್ಬಳಕೆಗೆ ಸೂಚನೆ:ಸರ್ಕಾರ ನಿರ್ವಿುಸಿರುವ ಸಾರ್ವಜನಿಕ ಶೌಚಗೃಹ ಮತ್ತು ಸರ್ಕಾರದ ಸಹಾಯಧನದಡಿ ಮನೆಗಳಲ್ಲಿ ನಿರ್ವಿುಸಿ ರುವ ಶೌಚಗೃಹ ಮೇಲ್ವಿಚಾರಣೆ ನಡೆಸಲಿದ್ದಾರೆ.
ಕಸದ ಮೇಲೂ ಕಣ್ಣು:ಕಸದ ಅನಧಿಕೃತ ವಿಲೇವಾರಿ ಮೇಲೂ ಲೋಕಾಯುಕ್ತ ಪೊಲೀಸರ ಕಣ್ಣು ಬೀಳಲಿದೆ. ಯಾವ ಯಾವ ಸ್ಥಳದಲ್ಲಿ ಕಸವನ್ನು ಅನಧಿಕೃತವಾಗಿ ಚೆಲ್ಲಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಅದನ್ನು ಸ್ಥಳೀಯ ಆಡಳಿತದ ಗಮನಕ್ಕೆ ತರಲಿದ್ದಾರೆ. ಕೆರೆ ಮತ್ತು ಸರ್ಕಾರಿ ಜಮೀನು ಒತ್ತುವರಿ, ಅಸಮರ್ಪಕ ನಿರ್ವಹಣೆ ಮತ್ತು ಅಕ್ರಮ ಗಣಿಗಾರಿಕೆಯನ್ನೂ ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ.
ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕೆಲವು ಸಲಹೆ-ಸೂಚನೆ ನೀಡಿದ್ದಾರೆ. ಅದರ ಅನ್ವಯ ನಾವು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಮನೆ ಶೌಚಗೃಹ ಮತ್ತು ಸಮುದಾಯ ಶೌಚಗೃಹಕ್ಕೆ ಒತ್ತುಕೊಟ್ಟಿದ್ದೇವೆ. ಶೌಚಗೃಹಕ್ಕೆ ಸರ್ಕಾರ ನೀಡುವ ಸಹಾಯಧನ ದುರುಪಯೋಗವಾಗದಂತೆ ಮಾನಿಟರ್ ಮಾಡುತ್ತಿದ್ದೇವೆ.
| ಗಂಗಾಧರಸ್ವಾಮಿ ನಿರ್ದೇಶಕರು,ಸ್ವಚ್ಛ ಭಾರತ ಮಿಷನ್
ದೂರು ಇಲ್ಲದಿದ್ದರೂ ಕಚೇರಿ ಭೇಟಿ:ತಾಲೂಕು ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಲೆಕ್ಕಿಗರ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮೂಜಣಿದಾರರ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮಾಡಿಕೊಡಬೇಕಾದ ಕಾರ್ಯಗಳಲ್ಲಿ ಅನಗತ್ಯ ವಿಳಂಬ, ಬೇಜವಾಬ್ದಾರಿತನ ಹಾಗೂ ದುರಾಡಳಿತದ ಆರೋಪಗಳಿದ್ದಾಗ ತಿದ್ದಿಕೊಳ್ಳಲು 2-3 ದಿನ ಕಾಲಾವಕಾಶ ನೀಡಲಾಗುತ್ತದೆ. ಸಮಸ್ಯೆ ಪರಿಹಾರ ಕಾಣದೇ ಹೋದರೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಅಧಿಕಾರಿಗಳ ಸಣ್ಣಪುಟ್ಟ ತಪ್ಪು ಹುಡುಕಿ ಇನ್ಕ್ರಿಮೆಂಟ್ ಕಟ್ ಮಾಡುವುದು, ಛೀಮಾರಿ ಹಾಕಿ ಬಿಡುವುದು ನಮ್ಮ ಆದ್ಯತೆಯಲ್ಲ. ಸಮುದಾಯ ಆಧಾರಿತ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ನಾವು ಒತ್ತುಕೊಟ್ಟಿದ್ದೇವೆ. ಭ್ರಷ್ಟಾಚಾರ ರಹಿತವಾಗಿ ಕಾಮಗಾರಿಗಳು ಅನುಷ್ಠಾನವಾಗಬೇಕು. ಈ ನಿಟ್ಟಿ ನಲ್ಲಿ ಅಧೀನ ಅಧಿಕಾರಿಗಳಿಗೆ 26 ಕಾರ್ಯಸೂಚಿಗಳನ್ನು ಕೊಟ್ಟು ಹೊಣೆಗಾರಿಕೆಯನ್ನು ಫಿಕ್ಸ್ ಮಾಡಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಜನರಿಗೆ ಅನುಕೂಲವೂ ಆಗುತ್ತಿದೆ.
| ಬಿ.ಎಸ್. ಪಾಟೀಲ್ಲೋಕಾಯುಕ್ತರು
ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ತೋಟಯ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
