ಬೆಂಗಳೂರು:ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು 50 ಸಾವಿರ ರೂ. ಲಂಚ ನೀಡುವಂತೆ ಹೇಳಿದ್ದ ಬೆಸ್ಕಾಂ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನ ಬಿಳೇಕಹಳ್ಳಿ ಬೆಸ್ಕಾಂ ಸಬ್​ ಡಿವಿಷನ್ ಎ.ಇ.ನಾಗರಾಜ್​ ಬಂಧಿತ ಆರೋಪಿ.
ಈತ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯಕ್ತ ಅಧಿಕಾರಿಗಳು ಬಲೆಗೆ ಬೀಳಿಸಿಕೊಂಡಿದ್ದಾರೆ. ಖಾಸಗಿ ಹೋಟೆಲೊಂದರಲ್ಲಿ ಲಂಚ ಪಡೆಯುತ್ತಿದ್ದಾಗ ಈ ಕಾರ್ಯಾಚರಣೆ ನಡೆದಿದೆ.
ಎಲೆಕ್ಟ್ರಿಕಲ್ ಗುತ್ತಿಗೆದಾರ ಎಚ್.ಎಸ್.ಕುಮಾರ್ ಎಂಬವರು ಬೇಗೂರು ಹೋಬಳಿ ಕೋಡಿಚಿಕ್ಕನಹಳ್ಳಿ ಗ್ರಾಮದ ಅಬ್ದುಲ್ ರಹೀಮ್ ಎಂಬುವರಿಗೆ ಸಂಬಂಧಿಸಿದ ಕಟ್ಟಡದ ಎಲೆಕ್ಟ್ರಿಕಲ್ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದು, ಅದರಂತೆ 2017ರ ಅಕ್ಟೋಬರ್‌ನಲ್ಲಿ ಅವರ ಬಹುಮಹಡಿ ಕಟ್ಟಡಕ್ಕೆ 37 ಕಿಲೋ ವ್ಯಾಟ್ ವಿದ್ಯುತ್ ಮಂಜೂರಾತಿ ನೀಡಿದ್ದು, ವಿದ್ಯುತ್ ಸಂಪರ್ಕ ಪಡೆಯಲು ಲೈನ್ ಕ್ಲಿಯರೆನ್ಸ್ (ಎಲ್.ಸಿ) ನೀಡಲು ಎ.ಇ ನಾಗರಾಜ್ 50 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕುರಿತು ಮೊಬೈಲ್​ಫೋನ್​ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡ ಕುಮಾರ್ ಈ ಬಗ್ಗೆ ಅ.20ರಂದು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ದೂರಿನನ್ವಯ ಶುಕ್ರವಾರ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ನಾಗರಾಜ್ ಹಣ ಪಡೆಯುವ ವೇಳೆ ಸಾಕ್ಷಿ ಸಮೇತ ಬಂಧಿಸಿದ್ದಾರೆ.
‘ಕಾಂತಾರ’ಕ್ಕೆ ಮತ್ತೊಂದು ಸಂಭ್ರಮ: ವಿವಾದದ ನಡುವೆಯೂ ನಂ.1 ಸ್ಥಾನ; ಏನದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + ten =
Remember me
