ಬೆಂಗಳೂರು:ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದಾಗಿ ಬಲ ಪಡೆದ ಬೆನ್ನಲ್ಲೇ, ಆರು ವರ್ಷಗಳ ತರುವಾಯ ಕರ್ನಾಟಕದಲ್ಲಿ ಲೋಕಾಯುಕ್ತ ಕಾರ್ಯಾಚರಣೆ ಮತ್ತೆ ಶುರುವಾಗಿದೆ. ಎಸಿಬಿಯಿಂದ ಕೇಸ್​ಗಳ ಕಡತಗಳು ವರ್ಗಾವಣೆಯಾದ ಮೊದಲ ದಿನವೇ, ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಅವರ ಆಪ್ತ ಸಹಾಯಕ ಉಮೇಶ್ ಬಂಧನವಾಗಿದೆ. ಇಷ್ಟು ದಿನ ದೂರುಗಳು ಬಂದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಲೋಕಾಯುಕ್ತಕ್ಕೀಗ ಹಿಂದಿನ ಶಕ್ತಿ ಮರಳಿದೆ.
2016ರ ಮಾ.14ರಂದು ಎಸಿಬಿ ಸ್ಥಾಪನೆಯಾಗಿ, ಮಾ.19ಕ್ಕೆ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಹಿಂಪಡೆಯಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ನಾಮ್ೇವಾಸ್ತೆ ಎಂಬಂತೆ ಲೋಕಾಯುಕ್ತ ಅಸ್ತಿತ್ವದಲ್ಲಿತ್ತು. ಆದರೆ, ಎಸಿಬಿಯನ್ನು ರದ್ದುಪಡಿಸಿದ್ದ ಹೈಕೋರ್ಟ್ ಲೋಕಾಯುಕ್ತ ಮರುಸ್ಥಾಪನೆಗೆ ಆದೇಶಿಸಿತ್ತು. ಅದರಂತೆ, ಈಗಾಗಲೇ ಎಸಿಬಿಯಲ್ಲಿದ್ದ 141 ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳನ್ನು ಲೋಕಾಯುಕ್ತಕ್ಕೆ ಈಗಾಗಲೆ ವರ್ಗಾವಣೆ ಮಾಡಲಾಗಿದೆ. ಜತೆಗೆ ಎಸಿಬಿಯಲ್ಲಿದ್ದ ಎಲ್ಲ ಕೇಸ್​ಗಳ ಕಡತಗಳೂ ಸೋಮವಾರ ಸಂಜೆ ವೇಳೆಗೆ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿವೆ. ಲಂಚಕ್ಕೆ ಕೈಯೊಡ್ಡಿದ ಬಿಬಿಎಂಪಿ ಜಂಟಿ ಆಯುಕ್ತ ಹಾಗೂ ಆಪ್ತ ಸಹಾಯಕನನ್ನು ರೆಡ್​ಹ್ಯಾಂಡಾಗಿ ಸೆರೆಹಿಡಿಯುವ ಮುಖೇನ ಅಧಿಕೃತವಾಗಿ ಕಾರ್ಯಾರಂಭಿಸಿದ ಮೊದಲ ದಿನವೇ ಲೋಕಾಯುಕ್ತ ಮತ್ತೆ ಫೀಲ್ಡಿಗಿಳಿದಿದೆ ಎಂದು ಭ್ರಷ್ಟರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದಲ್ಲಿ ಸೋಮವಾರ ಮಹತ್ವದ ಸಭೆ ನಡೆದಿದೆ. ಸಭೆಯಲ್ಲಿ ಉಪ ಲೋಕಾಯುಕ್ತ, ಲೋಕಾಯುಕ್ತ ಕಾರ್ಯದರ್ಶಿಗಳು, ರಿಜಿಸ್ಟ್ರಾರ್, ಎಸ್​ಪಿಗಳು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು. ಲೋಕಾಯುಕ್ತ ಬಲವರ್ಧನೆ ಬಗ್ಗೆ ರ್ಚಚಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಇದ್ದರೆ ಕಾರ್ಯನಿರ್ವಹಣೆ ಸರಾಗವಾಗಲಿದೆ. ಕಡತಗಳನ್ನು ಮುಂದಿಟ್ಟುಕೊಂಡರೆ ಸಾಕಾಗುವುದಿಲ್ಲ ಅವುಗಳ ತನಿಖೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಇಲ್ಲದಿದ್ದರೆ ತನಿಖೆಯ ತೀಕ್ಷ್ಣತೆ ಮೊನಚು ಕಳೆದುಕೊಳ್ಳುತ್ತದೆ. ಹೀಗಾಗಿ ಲೋಕಾಯುಕ್ತಕ್ಕೆ ಬೇಕಾಗಿರುವ ಅಗತ್ಯ ಸಿಬ್ಬಂದಿ ಮತ್ತು ಅವಶ್ಯಕತೆಗಳ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಣಯ ಮಾಡಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ‘ವಿಜಯವಾಣಿ’ಗೆ ತಿಳಿಸಿದರು.
ಎಸಿಬಿ ಹುದ್ದೆಗಳು:ಎಸಿಬಿಯಲ್ಲಿ ಎಡಿಜಿಪಿ ಸೇರಿ 322 ಹುದ್ದೆಗಳಿವೆ. ಒಬ್ಬರು ಐಜಿಪಿ, 10 ಎಸ್ಪಿಗಳು, 35 ಹೆಚ್ಚುವರಿ ಎಸ್ಪಿಗಳು, 75 ಇನ್​ಸ್ಪೆಕ್ಟರ್​ಗಳು ಮತ್ತು 200 ಕಾನ್​ಸ್ಟೆಬಲ್ ಹಾಗೂ ಹೆಡ್ ಕಾನ್​ಸ್ಟೆಬಲ್​ಗಳ ಹುದ್ದೆಗಳಿವೆ. ಸದ್ಯ ಕೆಳಹಂತದ ಸಿಬ್ಬಂದಿ ಮಾತ್ರ ಲೋಕಾಯುಕ್ತಕ್ಕೆ ನಿಯೋಜಿಸಿದ್ದು, ಮೇಲಿನ ಹಂತದ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯೂ ಶೀಘ್ರ ಆರಂಭವಾಗಲಿದೆ.
ಕಾರ್ಯನಿರ್ವಹಣೆಗೆ 26 ಅಂಶ:ದಾಳಿ, ತನಿಖೆ ನಂತರ ವಿಚಾರಣೆ ನಡೆಸಬೇಕು. ಶಿಸ್ತುಕ್ರಮಕ್ಕೆ ಶಿಫಾರಸು ಮಾಡಬೇಕು. ಲೋಕಾಯುಕ್ತದಲ್ಲಿರುವ ಪೊಲೀಸರಿಗೆ ನಗರ ಮತ್ತು ಜಿಲ್ಲೆ ಮಟ್ಟದಲ್ಲಿರುವ ಹಲವಾರು ಕೆಲಸಗಳನ್ನು ವಹಿಸಬೇಕು. ಲೋಕಾಯುಕ್ತ ಸಂಸ್ಥೆಯ ಪೊಲೀಸ್ ವಿಭಾಗವು ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ 26 ಅಂಶಗಳನ್ನು ಒಳಗೊಂಡ ಮಾರ್ಗಸೂಚಿ ಹೊರಡಿಸಲಾಗಿದೆ. ಸರ್ಕಾರ ಶಿಫಾರಸು ಮಾಡಿರುವ ನರೇಗಾ ಅಕ್ರಮ ಪ್ರಕರಣ ಸೇರಿ ಸಾವಿರಾರು ಪ್ರಕರಣ ತನಿಖಾ ಹಂತದಲ್ಲಿವೆ. ಅವುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seven + 13 =
Remember me
