ಶಿವಮೊಗ್ಗ:ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕಲಬುರಗಿಯಲ್ಲಿ ಚುನಾವಣೆಯ ಪಾಂಚಜನ್ಯ ಮೊಳಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಎರಡನೇ ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಸೋಮವಾರ ಶಿವಮೊಗ್ಗದಲ್ಲಿ ನಡೆಯುತ್ತಿರುವ ಭಾರತ ಸಂಕಲ್ಪ ಸಮಾವೇಶದಲ್ಲಿ ಮೋದಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ:ಅಫ್ಘಾನಿಸ್ತಾನ ಮೇಲೆ ಪಾಕ್​ ವಾಯುದಾಳಿ: 8 ಜನರು ದಾರುಣ ಸಾವು
ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಜನರ ಗುಂಪಿನ ನಡುವಿನಿಂದ ತೆರೆದ ವಾಹನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬೀಸುತ್ತಾ ಮುಖ್ಯವೇದಿಕೆಗೆ ಬಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಮೋದಿ ಆಗಮಿಸುತ್ತಿದ್ದಂತೆ ಲಕ್ಷಾಂತರ ಮಂದಿ ಎದ್ದು ನಿಂತು ಮೋದಿಗೆ ಜೈಕಾರ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ತೆರೆದ ವಾಹನದಲ್ಲಿ ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿವೈ ರಾಘವೇಂದ್ರ, ದಾವಣಗೆರೆ ಲೋಕಸಭಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಜೊತೆಗೆ ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ವೇದಿಕೆಗೆ ಆಗಮಿಸಿದರು.  ಮೋದಿ ಅಕ್ಕಪಕ್ಕದಲ್ಲಿ ನಿಂತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಜನರಿಗೆ ನಮಸ್ಕರಿಸಿದರು.
ಈ ವೇಳೆ ಕಾರ್ಯಕರ್ತರ ಜಯ ಘೋಷ, ಮೋದಿ ಮೋದಿ ಘೋಷಣೆ, ಬಾರತ್ ಮಾತಾ ಕಿ ಜೈಕಾರದಿಂದ ಸಭೆ ಝೇಂಕರಿಸಿತ್ತು.ಈ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಘಟಾನಘಟಿ ರಾಜ್ಯ ಬಿಜೆಪಿ ನಾಯಕರ ಉಪಸ್ಥಿತರಿದ್ದಾರೆ. ಇದರ ಜೊತೆಗೆ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ ಸಿ ಎನ್ ಮಂಜುನಾಥ್, ದಾವಣಗೆರೆ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್, ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಉಪಸ್ಥಿತಿರಿದ್ದಾರೆ.
ಸಭೆಯಲ್ಲಿ ನೆರೆದ ಭಾರೀ ಸಂಖ್ಯೆಯ ಬಿಜೆಪಿ ಬೆಂಬಲಿಗರು ಕೇಸರಿ ಶಾಲು, ಟೋಪಿ ಬೀಸಿ ಜಯಘೋಷದ ಮೂಲಕ ಸ್ವಾಗತಿಸಿದರು.ಈ ವೇಳೆ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡುವ ಡಿ.ಜೆ ಸಂಗೀತದ ಅಬ್ಬರ ಸಭೆಯಲ್ಲಿ ಅನುರಣಿಸಿತು. ಪ್ರಧಾನ ವೇದಿಕೆಯ ಹಿಂಬದಿಯ ಪರದೆಯಲ್ಲಿ ಮೋದಿ ಸಾಧನೆಗಳ ಕುರಿತಾದ ವಿಡಿಯೊ ಪ್ರದರ್ಶನಗೊಂಡಿತು.
ಬಾಯ್‌ಫ್ರೆಂಡ್‌ಗಿಂತ ಶ್ರೀಮಂತೆ ಸ್ಮೃತಿ ಮಂದಾನ: ಇವ್ರಿಗೆ ‘ಬಾಯ್ ಫ್ರೆಂಡ್’ ಇದಾನಾ ಎಂದ್ರು ಆರ್‌ಸಿಬಿ ಫ್ಯಾನ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
