ಬೆಂಗಳೂರು:ಕರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಮೂಹ ಸಾರಿಗೆಯಲ್ಲಿ ದೀರ್ಘಾಕಾಲ ಪ್ರಯಾಣ ಮಾಡಿದರೆ ಸೋಂಕಿಗೆ ಒಳಗಾಗಬೇಕಾದೀತು ಜೋಕೆ! ಕೋವಿಡ್-19 ಕಣ್ಗಾವಲು ಪಡೆ ಇಂತಹದೊಂದು ಎಚ್ಚರಿಕೆ ನೀಡಿದೆ. ಸೋಂಕಿತ ವ್ಯಕ್ತಿಯೊಂದಿಗೆ 6 ಗಂಟೆಗಳಿಗೂ ಹೆಚ್ಚು ಸಮಯ, 3 ಅಡಿಗಿಂತ ಹತ್ತಿರ ಕುಳಿತು ಪ್ರಯಾಣ ಮಾಡಿದವರಿಗೆ ಸೋಂಕು ನಿಶ್ಚಿತ. ಈಗಾಗಲೇ ಹೊರ ರಾಜ್ಯ, ಜಿಲ್ಲೆಯಿಂದ ಜಿಲ್ಲೆಗೆ ಪ್ರಯಾಣ ಮಾಡಿರುವ ಸಾವಿರಾರು ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದಾಗಿ ಕಣ್ಗಾವಲು ಪಡೆ ತಿಳಿಸಿದೆ. ಪ್ರಯಾಣದ ವೇಳೆ ಎಚ್ಚರ ತಪ್ಪಿದರೆ ಅಪಾಯ ನಿಶ್ಚಿತ ಎಂದು ಹೇಳಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರಲ್ಲಿ ಹಲವರು ಸೋಂಕಿಗೆ ಒಳಗಾಗಿರುವುದು ಈ ಎಚ್ಚರಿಕೆಗೆ ನಿದರ್ಶನವಾಗಿದೆ.
ಇದಲ್ಲದೆ ಸೋಂಕಿತರ ಬಟ್ಟೆ, ಲೆನಿನ್ಸ್, ಪಾತ್ರೆಗಳನ್ನು ಮುಟ್ಟುವುದು, ಅವುಗಳನ್ನು ಸ್ವಚ್ಛಗೊಳಿಸುವುದು, ಅವರ ದೇಹದ ದ್ರವ್ಯ (ಮೂಗಿನ ದ್ರವ, ರಕ್ತ, ವಾಂತಿ, ಎಂಜಲು, ಮಲ, ಮೂತ್ರ) ಸೋಂಕಿದರೆ ಹಾಗೂ ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುವುದರಿಂದಲೂ ಸೋಂಕು ಹರಡುತ್ತದೆ. ಹೀಗಾಗಿ ಸುರಕ್ಷತೆ ವಹಿಸದೆ ಸೋಂಕಿತರ ನೇರ ಸಂಪರ್ಕಕ್ಕೆ ಹೋಗುವುದು ಅಪಾಯಕಾರಿ ಎಂದು ಎಚ್ಚರಿಸಲಾಗಿದೆ.
ವೃದ್ಯರ ಸಲಹೆ:ತುರ್ತು ಸಂದರ್ಭ ಹೊರತುಪಡಿಸಿ ಅನಗತ್ಯವಾಗಿ ಪ್ರಯಾಣ ಮಾಡಬೇಡಿ. ಪ್ರಯಾಣದ ವೇಳೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ. ಸಾಧ್ಯವಾದರೆ ಧರಿಸಿದ ಬಟ್ಟೆ ಮೇಲೆ ಡಿಸ್​ಇನ್ಪೆಕ್ಟೆಡ್ ದ್ರವಣ ಸಿಂಪಡಿಸಿಕೊಳ್ಳಿ. 3 ಅಡಿಗೂ ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳಿರಿ. ಪ್ರಯಾಣ ಮಾಡಿ ಮನೆಗೆ ತೆರಳಿದ ಕೂಡಲೇ ಸ್ನಾನ ಮಾಡಿ, ಬಟ್ಟೆಗಳನ್ನು ಬಿಸಿನೀರಿನಲ್ಲಿ ಅದ್ದಿ ಸ್ಚಚ್ಛಗೊಳಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೋವಿಡ್-19 ಶಿಷ್ಠಾಚಾರ:ನಿಯಮದ ಪ್ರಕಾರ, ಹೆಚ್ಚು ಅಪಾಯಕಾರಿ ಸಂಪರ್ಕ (ಪ್ರಾಥಮಿಕ) ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು. ಕಡಿಮೆ ಅಪಾಯಕಾರಿ ಸಂಪರ್ಕ (ದ್ವಿತೀಯ)ಗಳನ್ನು ಕಣ್ಗಾವಲಿನಲ್ಲಿಟ್ಟಿರಬೇಕು. ರೋಗ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆಗೆ ಒಳಪಡಿಸಬೇಕಿದೆ. ಯಾವುದೇ ಸೋಂಕಿತ ಹಾಗೂ ಶಂಕಿತ ಕಣ್ಗಾವಲು ಸಮಯ 28 ದಿನಗಳಾಗಿರುತ್ತದೆ (ಮೊದಲ 14 ದಿನ ಮನೆ/ ಆಸ್ಪತ್ರೆ/ ಸಾಂಸ್ಥಿಕ, ನಂತರದ 14 ದಿನ ವೈಯಕ್ತಿಕ ವರದಿ ಮಾಡುವ ಕ್ವಾರಂಟೈನ್) ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದುವರೆಗೂ ನಾನು ಹಾರಿಸಿದ್ದು ಕಾಗೆಯಲ್ಲ ಎಂದ ಡ್ರೋನ್ ಪ್ರತಾಪ್…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
