ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಪ್ರಾಸಿಕ್ಯೂಷನ್ ಸುಳಿಗೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಬೆನ್ನಹಿಂದೆ ಇಡೀ ಕಾಂಗ್ರೆಸ್ಸೇ ನಿಂತಿದ್ದರೂತೆರೆ ಹಿಂದೆ ಮಾತ್ರ ಬೇರೆಯದ್ದೇ ಲೆಕ್ಕಾಚಾರ ನಡೆಯುತ್ತಿದೆ. ಯಾವುದೇ ಹಂತದಲ್ಲೂ ಅಪಸ್ವರ ಏಳದಂತೆ ಕಾಂಗ್ರೆಸ್ ಹೈ ಕಮಾಂಡ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆ ದಿದ್ದರೂ ನಾಯಕತ್ವ ಬದಲಾವಣೆ ಸಂದರ್ಭ ಸೃಷ್ಟಿಯಾದಲ್ಲಿ ಅವಕಾಶ ಪಡೆಯಲು ಸಿಎಂ ಸ್ಥಾನದ ಆಕಾಂಕ್ಷಿಗಳು ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಮುಡಾ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾದಾಗಿನಿಂದಲೂ ಕಾಂಗ್ರೆಸ್​ನಲ್ಲಿ ಚಡಪಡಿಕೆ ಶುರುವಾಗಿತ್ತು. ದೂರಿಗೆ ಸಂಬಂಧಿಸಿದ ಸಾಕ್ಷ್ಯವೇ ಇಲ್ಲ, ತನಿಖಾ ವರದಿಗಳಲ್ಲಿ ಸಿಎಂ ಹೆಸರಿಲ್ಲ, ಹೀಗಾಗಿ ಈ ಅರ್ಜಿಗೆ ಮಹತ್ವ ಇಲ್ಲ ತಮಗೆ ತಾವೇ ಸಮಾಧಾನ ಪಟ್ಟುಕೊಂಡಿದ್ದ ಕಾಂಗ್ರೆಸ್ ಪಾಳಯ ರಾಜ್ಯಪಾಲರು ನೋಟಿಸ್ ಕೊಟ್ಟ ಬಳಿಕ ಕಂಪಿಸಿತ್ತು. ನೋಟಿಸ್ ಕೊಟ್ಟರೇನಂತೆ ಅಭಿಯೋಜನೆಗೆ ಅನುಮತಿ ಕೊಡಲು ಸಾಧ್ಯವೇ ಇಲ್ಲ ಎಂದು ವಾದಿಸಿದ್ದರು. ಈ ನಿರೀಕ್ಷೆ ಸುಳ್ಳಾಗಿಸಿ ಗವರ್ನರ್ ಬಿಟ್ಟಿರುವ ಪ್ರಾಸಿಕ್ಯೂಷನ್ ಅಸ್ತ್ರ ಕೈಪಡೆಯನ್ನು ಕಂಗಾಲಾಗಿಸಿದೆ.
ಈ ನಡುವೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಾವೆಲ್ಲ ಸಿದ್ದರಾಮಯ್ಯ ಬೆನ್ನಿಗಿದ್ದೇವೆ ಎಂದು ಸಂಪುಟ ಸದಸ್ಯರೆಲ್ಲ ದೆಹಲಿ ನಾಯಕರ ಕಿವಿಗೆ ಮುಟ್ಟುವಂತೆ ಗಟ್ಟಿ ದನಿಯಲ್ಲಿ ಸಾರಿ ಸಾರಿ ಹೇಳುತ್ತಿದ್ದಾರೆ. ಇಷ್ಟರ ನಡುವೆಯೂ ಮುಂದಿನ ಬೆಳವಣಿಗೆ ಊಹಿಸಿ ಸಿಎಂ ಯಾರಾಗಬಹುದೆಂಬ ಚರ್ಚೆ ತೀವ್ರಗೊಂಡಿದೆ. ಪ್ರಬಲ ಆಕಾಂಕ್ಷಿಗಳು ಮಾನಸಿಕವಾಗಿ ಸಿದ್ಧಗೊಳ್ಳುತ್ತಿದ್ದಾರೆ. ಅವರ ಆಪ್ತರು ಕೂಡ ಮುಂದೆ ಸಿಗಬಹುದಾದ ಅವಕಾಶ ಬಳಸಿಕೊಳ್ಳುವಂತೆ ಒತ್ತಡವನ್ನೂ ಹೇರುತ್ತಿದ್ದಾರೆ.
ಒಂದೇ ಲೆಕ್ಕಾಚಾರ:ರಾಜ್ಯಪಾಲರ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿ ಹಿಡಿದು ತನಿಖೆಗೆ ಅವಕಾಶ ನೀಡಿದ್ದೇ ಆದಲ್ಲಿ, ರಾಜಕೀಯ ಚಟುವಟಿಕೆ ಬಿರುಸುಗೊಳ್ಳಲಿದೆ. ಅಲ್ಲಿಯವರೆಗೂ ಸಿಎಂ ಬೆಂಬಲಕ್ಕೆ ಗಟ್ಟಿಯಾಗಿ ನಿಲ್ಲಲು ಎಲ್ಲ ಮುಂಚೂಣಿ ನಾಯಕರು ತೀರ್ವನಿಸಿದ್ದಾರೆ. ಈಗಲೇ ಪ್ರಯತ್ನ ಆರಂಭಿಸಿದರೆ ಬೇರೆ ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ದನಿಯನ್ನು ಅದುಮಿ ಹಿಡಿದಿದ್ದಾರೆ.
ಗವರ್ನರ್ ವಿರುದ್ಧ ನಿರ್ಣಯ:ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂದು ದನಿ ಎತ್ತಲು ಕಾಂಗ್ರೆಸ್ ಐಎನ್​ಡಿಐಎ ಒಕ್ಕೂಟದ ಸದಸ್ಯರನ್ನು ಕೋರಿದೆ. ಆ ಮೂಲಕ ದೇಶದುದ್ದಗಲಕ್ಕೂ ಈ ವಿಷಯ ಕೊಂಡೊಯ್ಯಲು ಎಐಸಿಸಿ ನಾಯಕರು ಮುಂದಾಗಿದ್ದಾರೆ. ಆ.23ರ ಬಳಿಕ ಈ ಪ್ರಯತ್ನಕ್ಕೆ ಒಂದು ರೂಪ ಸಿಗಲಿದೆ. ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಅಂದಹಾಗೆ ಆ.22ರಂದು ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಸ್ವಯಂ ಪ್ರೇರಿತ ನಿರ್ಣಯ ಕೈಗೊಳ್ಳಬೇಕೆಂದು ಸಿಎಂ ಆಪ್ತ ಶಾಸಕರು ಬಯಸಿದ್ದಾರೆ.
ಶೀಘ್ರ ಹೊಸ ಸಾರಥಿ:ಪ್ರದೇಶ ಕಾಂಗ್ರೆಸ್ ಸಮಿತಿಗೆ ಶೀಘ್ರವೇ ಹೊಸ ಸಾರಥಿ ನೊಗ ಹೊರಲಿದ್ದಾರೆಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಹೆಸರು ಮುಂಚೂಣಿಯಲ್ಲಿದ್ದು, ಸಚಿವ ಶರಣ್ ಪ್ರಕಾಶ್ ಪಾಟೀಲ್ ಹೆಸರೂ ಸಹ ಕೇಳಿಬಂದಿದೆ. ಎಐಸಿಸಿ ಮಟ್ಟದಲ್ಲಿ ಈಗಾಗಲೇ ಅಭಿಪ್ರಾಯ ಸಂಗ್ರಹ ಕೂಡ ಮುಗಿದಿದ್ದು, ರಾಜ್ಯದಲ್ಲಿ ಮುಡಾ ವಾತಾವರಣ ತಿಳಿಗೊಳ್ಳುತ್ತಿದ್ದಂತೆ ಹೊಸ ಸಾರಥಿ ಹೆಸರು ಘೋಷಣೆ ಮಾಡಲು ಪಕ್ಷ ನಿರ್ಧರಿಸಿದೆ.
ಪಕ್ಷ ನಿಷ್ಠರಾದ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಸಂಘಟನೆ ಕೆಲಸವನ್ನೂ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದವರಾಗಿದ್ದು, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ ಅವರಿಗೆ ಜವಾಬ್ದಾರಿ ನೀಡಬೇಕೆಂದು ಹೆಚ್ಚಿನ ಹಿರಿಯ ಮುಖಂಡರು ಅಭಿಪ್ರಾಯ ನೀಡಿದ್ದಾರೆ. ಇನ್ನು ಸಚಿವ ಶರಣ್ ಪ್ರಕಾಶ್ ಅವರು ಸಚಿವ ಮಲ್ಲಿಕಾರ್ಜುನ ಖರ್ಗೆ ಅತ್ಯಾಪ್ತ ವಲಯದಲ್ಲಿದ್ದಾರೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾವಧಾನಿ. ಇದೇ ಕಾರಣಕ್ಕೆ ಅವರಿಗೆ ಅವಕಾಶ ಸಿಗುತ್ತದೆ ಎಂದೂ ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾರ್:ಕಳೆಗುಂದಿದ್ದ ಪಕ್ಷವನ್ನು ಚುರುಕುಗೊಳಿಸಿ, ವಿಧಾನಸಭೆ ಚುನಾವಣೆಯಲ್ಲಿ ತನು, ಮನ, ಧನ ಧಾರೆ ಎರೆದು ಸಿಎಂ ಸ್ಥಾನಕ್ಕೆ ಕಾಯುತ್ತಿದ್ದಾರೆ
ಮಲ್ಲಿಕಾರ್ಜುನ ಖರ್ಗೆ:ಎಐಸಿಸಿ ಅಧ್ಯಕ್ಷರಿಗೆ ಒಮ್ಮೆಯೂ ಸಿಎಂ ಆಗಲಿಲ್ಲ ಎಂಬ ಚಿಂತೆಯಿದೆ. ದಲಿತ ಸಿಎಂ ಕೊರಗು ನೀಗಿಸಲು ಅಪರೂಪದ ಅವಕಾಶ
ಪರಮೇಶ್ವರ್:ದಲಿತ ಸಿಎಂ ರೇಸ್​ನಲ್ಲಿ ಖರ್ಗೆ ಬಳಿಕ ಎರಡನೇ ಆಯ್ಕೆ. ಪಕ್ಷಕ್ಕಾಗಿ ದುಡಿಮೆ, ಪ್ರಮುಖ ಖಾತೆ ನಿಭಾಯಿಸಿದ ಅನುಭವವಿದೆ. ಸಿಎಂ ಸ್ಥಾನದ ಆಸೆಯೂ ಇದೆ
ಸತೀಶ್ ಜಾರಕಿಹೊಳಿ:ಸಿದ್ದರಾಮಯ್ಯ ಬಳಿಕ ಹಿಂದುಳಿದ ವರ್ಗದ ನಾಯಕನಾಗಿ ಹೊರಹೊಮ್ಮುವ ಗುರಿಯೊಂದಿಗೆ ಶಾಸಕರ ವಿಶ್ವಾಸ ಗಳಿಸುವ ಯತ್ನ ಆರಂಭಿಸಿದ್ದಾರೆ
ಎಂ.ಬಿ.ಪಾಟೀಲ:ಲಿಂಗಾಯತರನ್ನು ಪುನಃ ಕಾಂಗ್ರೆಸ್​ಗೆ ಕರೆತರುವ ಜತೆಯಲ್ಲೇ ಉತ್ತರ ಕರ್ನಾಟಕ ಭಾಗದ ಕೂಗಿಗೆ ದನಿಯಾಗುವ ಅವಕಾಶ
1992ರ ಅಜ್ಮೀರ್ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಮಂದಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − nine =
Remember me
