ಬೆಂಗಳೂರು: ಕರೊನಾ ಸೋಂಕಿನ ಹೆಸರಿನಲ್ಲಿ ಸರ್ಕಾರಗಳು ಲೂಟಿ ಹೊಡೆಯುತ್ತಿವೆ. ಬಡವರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿ ಶನಿವಾರ ಬಡವರಿಗೆ ಆಹಾರದ ಕಿಟ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರ ಘೋಷಿಸಿ ರುವುದು ಪ್ಯಾಕೇಜ್ ಅಲ್ಲ, ಅದು ಪೂರಕ ಬಜೆಟ್. ಬಡಜನರಿಗೆ ಸರ್ಕಾರದ ಸೌಲಭ್ಯ ತಲುಪಿದ್ದರೆ ಈ ರೀತಿ ಜನ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತಿರಲಿಲ್ಲ. ನೂಕುನುಗ್ಗಲಿನಲ್ಲಿ ಬಂದು ಜನ ಆಹಾರದ ಕಿಟ್ ಪಡೆದುಕೊಳ್ಳುತ್ತಿರಲಿಲ್ಲ ಎಂದರು.
ಇದನ್ನೂ ಓದಿಮೈಶುಗರ್ಸ್ ಖಾಸಗೀಕರಣ ಮಾಡದಿರಲು ಸಿಎಂ ನಿರ್ಧಾರ
ಬಡವರ ಮೂರು ಹೊತ್ತಿನ ಊಟಕ್ಕೆ 11 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಆ ದುಡ್ಡು ಎಲ್ಲಿ ಹೋಯಿತು? ಸರ್ಕಾರವನ್ನು ಟೀಕೆ ಮಾಡಿದರೆ ನನಗೆ ಏನೂ ಸಿಗುವುದಿಲ್ಲ, ಬಡಜನರಿಗೂ ಅದರಿಂದ ಏನೂ ಪ್ರಯೋಜನವಿಲ್ಲ. ಸರ್ಕಾರ ನಿಜಕ್ಕೂ ಬಡವರ ಕಷ್ಟಕ್ಕೆ ಸ್ಪಂದಿಸಿದೆಯೇ ಎಂದು ಪ್ರಶ್ನಿಸಿದರು.
ಪ್ಯಾಕೇಜ್ ಎಂದರೆ ಏನು?: ಪರಿಹಾರದ ಮೂಲಕ ಹಣ ಕೊಡುವುದೋ ಅಥವಾ ಸಾಲ ಕೊಡುವುದೋ? ಬರೀ ಪತ್ರಿಕೆಗಳಲ್ಲಿ ಪೋಸು ಕೊಟ್ಟುಕೊಂಡು ಘೋಷಣೆ ಮಾಡಿಕೊಂಡು ಸರ್ಕಾರ ನಡೆಸಬೇಡಿ. ಜನರ ಸಮಸ್ಯೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.
ತಲಾ 10 ಸಾವಿರ ರೂ. ಕೊಡಬೇಕಿತ್ತು: ಲಾಕ್​ಡೌನ್​ನಿಂದ 40 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ತಲಾ 10 ಸಾವಿರ ರೂ. ಕೊಟ್ಟಿದ್ದರೂ ಸಾಕಿತ್ತು. ರಾಜ್ಯದಲ್ಲಿ ಕೂಲಿ ಕಾರ್ವಿುಕರು, ಆಟೋಚಾಲಕರು, ಬೀದಿಬದಿ ವ್ಯಾಪಾರಿಗಳು, ಕ್ಷೌರಿಕರು ಸೇರಿ 45 ಲಕ್ಷ ಕುಟುಂಬ ಸಂಕಷ್ಟದಲ್ಲಿವೆ. ಈ ಕುಟುಂಬಗಳಿಗೆ ತಲಾ 5 ಸಾವಿರ ರೂ. ಕೊಡಬೇಕಿತ್ತು ಎಂದರು.
ಶಾಲೆಗಳ ಆರಂಭ ಅಧ್ಯಯನಕ್ಕೆ ಸಮಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + fifteen =
Remember me
