ಹುಬ್ಬಳ್ಳಿ:ಗಣೇಶ ಚತುರ್ಥಿ ಮುಗಿದರೂ ಎಲ್ಲೆಡೆ ಹಬ್ಬದ ಸಡಗರ ಇನ್ನೂ ಹಾಗೇ ಇದೆ. ಕರೊನಾ ಆತಂಕದ ನಡುವೆಯೂ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಮನೆಯೊಂದರಲ್ಲಿ ಇಟ್ಟಿದ್ದ ಗಣೇಶನನ್ನು ವಿಸರ್ಜನೆ ಮಾಡಿ ವಾಪಸ್​ ಬಂದ ಬಳಿಕ ಆ ಮನೆಯಲ್ಲಿ ಪವಾಡವೊಂದು ನಡೆದಿದೆ ಎಂಬ ಸುದ್ದಿ ಹರಡಿದ್ದು, ಭಕ್ತರು ಇದು ವಿನಾಯಕನ ಪವಾಡ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ಕುಸುಗಲ್ಲ್ ಗ್ರಾಮದ ಶಂಕರಗೌಡ ಪಾಟೀಲ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ವಿಸರ್ಜನೆ ನಂತರ ಪವಾಡ ನಡೆದಿದೆ ಎನ್ನಲಾಗುತ್ತಿದ್ದು. ಅದಕ್ಕೆ ಸಾಕ್ಷೀಕರಿಸುವ ವಿಡಿಯೋ ಕೂಡ ಹರಿದಾಡುತ್ತಿದೆ. ಆ ಮನೆಯಲ್ಲಿ ಮಹಿಳೆಯರಿಗೆ ಉಡಿ ತುಂಬುತ್ತಿರುವ ಸಮಯದಲ್ಲಿ ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ತನ್ನಷ್ಟಕ್ಕೆ ತಾನೇ ಅಲುಗಾಡಿದೆ. ಅಲ್ಲದೆ ಸ್ವಲ್ಪ ಮೇಲಕ್ಕೂ ಬಂದು ಮತ್ತೆ ಆ ಜಾಗದಲ್ಲೇ ಇದೆ!
ಇದನ್ನೂ ಓದಿರಿPHOTO GALLERY| ರಾಜ್ಯದ ಸಮಸ್ತ ಜಿಲ್ಲೆಗಳ ಹೆಸರಿನಲ್ಲಿ ಗಣೇಶ ಚಿತ್ರ ಬರೆದ ಕಲಾವಿದ: ಮಿಸ್​ ಮಾಡ್ದೆ ನೋಡಿ!
ಮನೆಯಿಂದ ಗಣೇಶನನ್ನು ಹೊರ ಒಯ್ಯುತ್ತಿದ್ದಂತೆ ನಡೆದ ಪವಾಡಕ್ಕೆ ಹುಬ್ಬಳ್ಳಿ ಜನತೆ ಬೆರಗಾಗಿದ್ದಾರೆ. ಇದು ಗಣೇಶನ ಮಹಿಮೆ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ಅಲುಗಾಡಿ, ತನ್ನಷ್ಟಕ್ಕೆ ತಾನೇ ಮೇಲೆ ಎದ್ದ ಚಿತ್ರಣವನ್ನು ಅಲ್ಲೇ ಇದ್ದ ಕೆಲವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ವೈರಲ್​ ಆಗಿದೆ. ಗಾಳಿಗೆ ವೀಳ್ಯದೆಲೆ ಅಲುಗಾಡಿರಬೇಕು ಎಂಬ ಮಾತು ಕೇಳಿಬಂದರೂ ಆ ಎಲೆ ಮೇಲೆ ಕೊಬ್ಬರಿ ಮತ್ತು ಹೂವನ್ನೂ ಇಡಲಾಗಿತ್ತು. ಆದರೂ ಆ ಎಲೆ ಅಲುಗಾಡಿದೆ. ಇದರ ಪಕ್ಕದಲ್ಲೇ ಇದ್ದ ಬೇರೆ ವೀಳ್ಯದೆಲೆ ಒಂಚೂರು ಕದಲಿಲ್ಲ. ಇದು ಗಣೇಶನ ಪವಾಡವೇ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
https://www.facebook.com/VVani4U/videos/359902465010567
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 14 =
Remember me
