ಬಾಗಲಕೋಟೆ:ಹುನಗುಂದದ ಬೇವಿನಮಟ್ಟಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ದುರ್ಮರಣಕ್ಕೀಡಾಗಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಚಂದ್ರಶೇಖರ ಬುಟ್ಟಾ(22), ನವೀನ್ ಸಾಕಾ( 20), ಚೆನ್ನಬಸವ ಅಂಜಿ(22), ಬಸವರಾಜ ಭಂಡಾರಿ (33) ಮೃತ ದುರ್ದೈವಿಗಳು. ಮೃತರೆಲ್ಲರೂ ಇಳಕಲ್​ನವರು.ಬರ್ತ್ ಡೇ ಆಚರಣೆಗೆಂದು ಇವರೆಲ್ಲರೂ ಇಳಕಲ್​ನಿಂದ ಗುಳೇದಗುಡ್ಡಕ್ಕೆ ಕಾರಿನಲ್ಲಿ ಹೋಗಿದ್ದರು. ಬರ್ತ್​ ಡೇ ಸಂಭ್ರಮಾಚರಣೆಯ ಖುಷಿಯಲ್ಲೇ ವಾಪಸ್​ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಮಾರ್ಗಮಧ್ಯೆ ಬೇವಿನಮಟ್ಟಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ವಿಜಯಕುಮಾರ್ ಬಂಡಿ ಗಂಭೀರ ಗಾಯಗೊಂಡಿದ್ದಾನೆ. ಈತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಲಾರಿ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
