ಬೆಂಗಳೂರು:2021ರ ಜ.15ರ ಬೆಳ್ಳಂಬೆಳಗ್ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ಲಾರಿ ಮತ್ತು ಮಿನಿಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವೈದ್ಯೆ ಸೇರಿ ಪ್ರತಿಷ್ಠಿತ ಕುಟುಂಬಗಳ ಮಹಿಳೆಯರು ಮೃತಪಟ್ಟ ಸುದ್ದಿ ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಬರಸಿಡಿಲಿನಂತೆ ಎರಗಿತ್ತು.
ದಾವಣಗೆರೆ ನಗರದ ಸೇಂಟ್​ ಪಾಲ್ಸ್​ ಕಾನ್ವೆಂಟ್​ ಶಾಲೆಯ 1989ರ ಸಾಲಿನ ವಿದ್ಯಾರ್ಥಿಗಳಾಗಿದ್ದ ಇವರು ಬಾಲ್ಯದ ಗೆಳತಿಯರು. ಸಂಕ್ರಾಂತಿ ಹಬ್ಬದ ಖುಷಿಯ ನಡುವೆ ಗೋವಾ ಪ್ರವಾಸಕ್ಕೆ ಹೊರಟಿದ್ದರು. ಪ್ರವಾಸಕ್ಕೆಂದು ಟಿಟಿ ವಾಹನ ಹತ್ತುತ್ತಿದ್ದಂತೆ ಬಾಲ್ಯದ ಸ್ನೇಹಿತೆಯರೆಲ್ಲರೂ ಮೊಬೈಲ್​ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ‘ಗೋ ಗೋವಾ ವಿಥ್​ ಸ್ಕೂಲ್​ ಬುಡ್ಡೀಸ್​’ ಎಂದು ಹಾಕಿಕೊಂಡಿದ್ದರು. ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಇದೇ. ಇದೀಗ ಸಾವಿಗೂ ಮುನ್ನ ಆ ಸ್ನೇಹಿತೆಯರ ಸುಂದರ ಕ್ಷಣಗಳು ಹೇಗಿತ್ತು? ಎಂಬುದರ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತರ ಮಕ್ಕಳೇ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ ಎನ್ನಲಾಗಿದ್ದು, ಇದನ್ನು ನೋಡಿದ ಎಂಥವರಿಗೂ ಕಣ್ಣಲ್ಲಿ ನೀರು ಬರದೆ ಇರದು.
ಬಾಲ್ಯ ಸ್ನೇಹಿತೆಯರು ಜೀವಂತವಾಗಿದ್ದಾಗ ಒಟ್ಟಾಗಿ ಕಳೆದ ಆ ಸುಂದರ ಕ್ಷಣಗಳ ದೃಶ್ಯದ ತುಣುಕಿಗೆಕೂಗಿ ಕೂಗಿ ಕರೆಯುತ್ತಿರೋಕಣ್ಣ ಹನಿಯ ಧನಿ ಕೇಳದೆಮಂಡಿ ಊರಿ ಮರಗುತ್ತಿರೋಮನದ ನೋವು ಮನ ಮುಟ್ಟದೆಕೈಯ ಮುಗಿವೆನಾ ಹೇಗಾದರೂನೀ ನನ್ನ ಜೊತೆಯೆ ಇರುಬಿಟ್ಟೋಗ್ಬೇಡಾ ನನ್ನಾ ಬಿಟ್ಟೋಗ್ಬೇಡಾ…ಬಿಟ್ಟೋಗ್ಬೇಡಾ ನನ್ನಾ ಬಿಟ್ಟೋಗ್ಬೇಡಾ…ಈ ಹಾಡನ್ನು ಹಿನ್ನೆಲೆಯಾಗಿ ಬಳಸಲಾಗಿದೆ. ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ.
ಅಪಘಾತದಲ್ಲಿ ದಾವಣಗೆರೆಯ ಪ್ರೀತಿ ರವಿಕುಮಾರ್​(46), ಪರಂಜ್ಯೋತಿ ಶಶಿಧರ ಹೂಂಚೂರ (47), ವಷಿರ್ತಾ ವೀರೇಶ (46), ಮಂಜುಳಾ ನಟೇಶ್​ ಜಿ.ಬಿ. (47), ರಾಜೇಶ್ವರಿ ಶಿವಕುಮಾರ ಬಂಡಮ್ಮನವರ (46), ಡಾ. ವೀಣಾ ಪ್ರಕಾಶ ಮಟ್ಟಿಹಳ್ಳಿ (47), ಕ್ಷೀರಾ ಸುರೇಶಬಾಬು ಪೊರಾಳ (21), ಹೇಮಲತಾ ಕೆ. ಉರ್ಫ್​ ಮಾನಸಿ (48) ಸೇರಿ 9 ಮಂದಿ ಮಹಿಳೆಯರು, ಮಿನಿ ಬಸ್​ ಚಾಲಕ ರಾಣೆಬೆನ್ನೂರು ಮೂಲದ ರಾಜು ಸೋಮಪ್ಪಾ ಗೋರಬಣ್ಣವರ (38), ಕ್ಲೀನರ್​ ಮಲ್ಲಿಕಾರ್ಜುನ ಉಡಗಟ್ಟಿ (27) ಮೃತಪಟ್ಟಿದ್ದರು. ಅಪಘಾತದ ರಭಸಕ್ಕೆ ಮಿನಿಬಸ್​ ನಜ್ಜುಗುಜ್ಜಾಗಿದ್ದರಿಂದ ಪ್ರಯಾಣಿಕರ ಮುಖ, ಮೃತದೇಹ ಗುರುತು ಸಿಗದಂತಾಗಿತ್ತು.
ನನ್ನ ಮನೆಗೆ ನುಗ್ಗಿ ಬಲವಂತವಾಗಿ ಮಗಳಿಗೆ ತಾಳಿ ಕಟ್ಟೇಬಿಟ್ಟ: ಪ್ಲೀಸ್​.. ನನ್ನ ಮಗಳನ್ನು ಕಾಪಾಡಿ…

ಶವಗಳ ಮೇಲೆಯೇ ಓಡಾಡಿದ ಜನ… ಬೆಚ್ಚಿಬೀಳಿಸುತ್ತೆ ಶಿವಮೊಗ್ಗದಲ್ಲಿನ ಸ್ಫೋಟದ ಭೀಕರತೆ

ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 11 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − fourteen =
Remember me
