ಬಾಗಲಕೋಟೆ:ಲಾರಿ ಮತ್ತು ಬಸ್​ ನಡುವೆ ನಡೆದ ಡಿಕ್ಕಿಯಲ್ಲಿ ಬಸ್​ಗೆ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಮಹಿಳೆಯರಿಬ್ಬರು ಬೆಂಕಿ ತಗುಲಿ ಸುಟ್ಟು ಹೋಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆ ಯಾದವಾಡ ಗ್ರಾಮದ ಈರವ್ವ ಗಾಣಿಗೇರ (70), ಅಣ್ಣವ್ವ ಗಾಣಿಗೇರ (58) ಸಾವಿಗೀಡಾದ ದುರ್ದೈವಿಗಳು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಉತ್ತೂರು ಬಳಿ ಈ ಅಪಘಾತ ಸಂಭವಿಸಿದೆ. ಮುಧೋಳ-ಯಾದವಾಡ ರಸ್ತೆಯಲ್ಲಿನ ಉತ್ತೂರು ಫ್ಯಾಕ್ಟರಿ ಬಳಿ ಲಾರಿ ಹಾಗೂ ಮದುವೆಗೆ ಹೋಗಿದ್ದವರಿದ್ದ ಲಕ್ಸುರಿ ಬಸ್​ ಡಿಕ್ಕಿಯಾಗಿವೆ. ಬಸ್​ನಲ್ಲಿದ್ದವರು ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಮದುವೆಗೆ ಹೋಗಿದ್ದರು. ಚಮಕೇರಿಯಿಂದ ಯಾದವಾಡ ಗ್ರಾಮಕ್ಕೆ ಅವರು ಮರಳುತ್ತಿದ್ದಾಗ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
ಲಾರಿ-ಬಸ್​ ಡಿಕ್ಕಿ; ಹೊತ್ತಿ ಉರಿದ ಬಸ್​, ಬೆಂಕಿ ತಗುಲಿ ಇಬ್ಬರು ಸಾವು..ವಿವರಗಳಿಗೆhttps://t.co/YaFZZbZDD9ನೋಡಿ..pic.twitter.com/4PHMLZpnBp
— Vijayavani (@VVani4U)March 3, 2021

ಓವರ್​ಟೇಕ್ ವೇಳೆ ಲಾರಿ-ಬಸ್​ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ನಿಯಂತ್ರಣ ತಪ್ಪಿದ ಲಕ್ಸುರಿ ಬಸ್ ಪಕ್ಕದಲ್ಲಿನ ಹೊಲಕ್ಕೆ ಇಳಿದಿದೆ. ಅಲ್ಲದೆ ಪಲ್ಟಿಯಾಗಿ ಟ್ರಾನ್ಸ್​ಫಾರ್ಮರ್ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ ವಿದ್ಯುತ್​ ತಂತಿ ತುಂಡಾಗಿ ಬಸ್​ ಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್​ ಆಗಿ ಬಸ್​ಗೆ ಬೆಂಕಿ ತಗುಲಿ ಹೊತ್ತಿಕೊಂಡು ಉರಿದಿದೆ. ಬಸ್​ನಲ್ಲಿದ್ದ ಹಲವರು ತಕ್ಷಣ ಜಿಗಿದು, ಹೊರಗೋಡಿ ಬಂದರೂ ಇಬ್ಬರು ಮಹಿಳೆಯರು ತಪ್ಪಿಸಿಕೊಳ್ಳಲಾಗದೆ ಅಗ್ನಿಜ್ವಾಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಎಸ್​ಪಿ ಲೋಕೇಶ್​ ಜಗಲಾಸರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…

ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
