ಹಾಸನ:ರಾಜ್ಯಾದ್ಯಂತ ಭೀಕರ ಅಪಘಾತಗಳ ಸುದ್ದಿ ಒಂದಾದ ಮೇಲೊಂದು ಕೇಳಿ ಬರುತ್ತಲೇ ಇರುತ್ತವೆ. ಇಂದು ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಅಬಕಾರಿ ಅಧಿಕಾರಿಯೊಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಈ ಅಪಘಾತ ಸಂಭವಿಸಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಹೊರವಲಯದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕಂಟೇನರ್ ಲಾರಿಯೊಂದಕ್ಕೆ ಕಾರು ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದೆ. ಕಾರು ಅಪ್ಪಳಿಸಿದ ರಭಸಕ್ಕೆ ಅದರ ಮುಂಭಾಗ ಪೂರ್ತಿ ಜಖಂ ಆಗಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದವರು ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಎಂಬ ಗುರುತು ಸಿಕ್ಕಿದೆ. ಇವರಲ್ಲಿ ಒಬ್ಬರು ಅಬಕಾರಿ ಅಧಿಕಾರಿಯಾಗಿದ್ದು, ಉಳಿದವರು ಟೆಕ್ಕಿಗಳಾಗಿದ್ದರು. ನಾಲ್ವರೂ ಸ್ನೇಹಿತರಾಗಿದ್ದು, ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದು, ಮಾರ್ಗಮಧ್ಯೆ ಲಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಚನ್ನರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿತ್ರನಟ ಮಯೂರ್​ ಪಟೇಲ್​ಗೆ​ ಕೊಲೆ ಬೆದರಿಕೆ!; ಸೈಟ್ ಖರೀದಿ ವಿಚಾರ ತಕರಾರು…

ಸೇತುವೆ ಮೇಲೆ ರಸ್ತೆಗುಂಡಿಯಲ್ಲಿ ಸಿಲುಕಿಕೊಂಡ ಬಸ್​ ಚಕ್ರ, ಸ್ವಲ್ಪದರಲ್ಲೇ ತಪ್ಪಿತು ಭಾರಿ ಅನಾಹುತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − ten =
Remember me
