ಬೆಂಗಳೂರು:15 ವರ್ಷ ಹಳೆಯ ವಾಣಿಜ್ಯ ವಾಹನಗಳಿಗೆ ನಿಷೇಧ ಹೇರಲು ಕ್ರಮವನ್ನು ಹಿಂಪಡೆಯುವುದು ಸೇರಿ ಪ್ರಮುಖ ಬೇಡಿಕೆಗಳನ್ನು ಮುಂದಿನ 30 ದಿನಗಳೊಳಗೆ ಈಡೇರಿಸದಿದ್ದರೆ ಮೇ.10ರಂದು ರಾಜ್ಯಾದ್ಯಂತ ಮುಷ್ಕರ ಮಾಡುವುದಾಗಿ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ಎಚ್ಚರಿಸಿದ್ದಾರೆ.
ಶುಕ್ರವಾರ ಪ್ರೆಸ್​ಕ್ಲಬ್​ನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇದೀಗ 15 ವರ್ಷದ ಹಳೆಯ ವಾಣಿಜ್ಯ ವಾಹನಗಳನ್ನು ಸಂಚರಿಸದಂತೆ ನಿಷೇಧ ಹೇರಲು ನಿರ್ಧರಿಸಿದೆ. ಅಂತಹ ವಾಹನಗಳ ಸ್ಯ್ಕ್ರಾಪಿಂಗ್ ಕುರಿತು ಮರು ನೋಂದಣಿ ಹಾಗೂ ವಾಹನ ದೃಢೀಕರಣ ಶುಲ್ಕಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ನಮಗೆ ರಾಜ್ಯದ ಸಾರಿಗೆ ಇಲಾಖೆಯಿಂದ ಇದುವರೆಗೂ ಈ ಬಗ್ಗೆ ಯಾವುದೇ ಮಾಹಿತಿಯೂ ಬಂದಿಲ್ಲ. ಕೇಂದ್ರ ಸರ್ಕಾರ 15 ವರ್ಷದ ಹಳೆಯ ವಾಹನಗಳನ್ನು ಸ್ಯ್ಕ್ರಾಪಿಂಗ್ ಮಾಡುವ ಕಾರಣದಿಂದಲೇ ಉದ್ದೇಶಪೂರ್ವಕವಾಗಿ ಈ ಫಿಟ್ನೆಸ್ ನೆಪದಲ್ಲಿ ಶುಲ್ಕ ಹೆಚ್ಚಳ ಮಾಡಲಾಗಿದೆ. ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ. ಅನವಶ್ಯಕವಾಗಿ ಒಂದೇ ಲಾರಿಯನ್ನು ಹೊಂದಿರುವ ಬಡ ಲಾರಿ ಮಾಲೀಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
800 ರೂ.ನಿಂದ 15 ಸಾವಿರ ರೂ.:ಎಫ್​ಸಿ ಮಾಡಿಸಲು ಇದ್ದ ಶುಲ್ಕವನ್ನ 800 ರಿಂದ 15 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 2 ತಿಂಗಳಿಗೊಮ್ಮೆ ಮಾಲಿನ್ಯ ಕುರಿತ ದೃಢೀಕರಣ ಪತ್ರವನ್ನೂ ಪಡೆಯಬೇಕಾಗುತ್ತದೆ. ಹೀಗಿರುವಾಗ ಈ ಪ್ರಸ್ತಾವನೆ ಸೂಕ್ತವಲ್ಲ. ಫಿಟ್ನೆಸ್ ಶುಲ್ಕಗಳು ರಾಜ್ಯ ಖಜಾನೆಗೆ ಒಳಪಟ್ಟ ವಿಷಯವಾದ್ದರಿಂದ ರಾಜ್ಯದಲ್ಲಿ ಜಾರಿಗೊಳಿಸುವ ನಿರ್ಧಾರ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿರುತ್ತದೆ ಎಂದು ಜಿ.ಆರ್ ಷಣ್ಮುಗಪ್ಪ ಹೇಳಿದರು.
ಬಾರ್ಡರ್ ಚೆಕ್​ಪೋಸ್ಟ್ ರದ್ದುಮಾಡಿ:ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ. ಆನ್​ಲೈನ್ ಸೇವೆ ಜಾರಿಗೊಳಿಸಿದ ಮೇಲೆ ಬಾರ್ಡರ್ ಚೆಕ್​ಪೋಸ್ಟ್​ಗಳಿಗೆ ಯಾವುದೇ ಕೆಲಸ ಇರುವುದಿಲ್ಲ. ತಪಾಸಣಾ ನೆಪದಲ್ಲಿ ವಾಹನ ತಡೆದು ಅಧಿಕಾರಿಗಳು ಕಿರುಕುಳ ಕೊಡುತ್ತಾರೆ. ಹೀಗಾಗಿ ಬಾರ್ಡರ್ ಚೆಕ್​ಪೋಸ್ಟ್ ರದ್ದುಗೊಳಿಸಿದರೆ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಮರಳನ್ನು ಸಾಗಾಣೆ ಮಾಡಲು ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶ್ವಥ್​ಹೇಳಿದರು.
ದಿನಕ್ಕೆ 2 ಕೋಟಿ ರೂ. ಟೋಲ್ ಸಂಗ್ರಹ:ರಾಜ್ಯದಲ್ಲಿರುವ 46 ಟೋಲ್​ಗಳಲ್ಲಿ ಅವಧಿ ಮುಗಿದಿರೋ ಟೋಲ್​ಗಳನ್ನ ರದ್ದು ಮಾಡಬೇಕು ಎಂದು ಷಣ್ಮುಗಪ್ಪ ಆಗ್ರಹಿಸಿದರು. 1650 ಕೋಟಿ ರೂ. ವೆಚ್ಚ ಮಾಡಿ ನೈಸ್ ರಸ್ತೆ ನಿರ್ವಿುಸಲಾಗಿದೆ. ನೈಸ್ ರಸ್ತೆಯಲ್ಲಿ ಪ್ರತಿ ದಿನ 2 ಕೋಟಿ ಟೋಲ್ ಸಂಗ್ರಹವಾಗುತ್ತಿದೆ. ಕಳೆದ 10 ವರ್ಷಗಳಿಂದ ಟೋಲ್ ಸಂಗ್ರಹವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
