ಕೋಲಾರ:ಶಾಸಕ ಎಸ್.ಎನ್.ನಾರಾಯಣಸ್ವಾಮಿಗೆ ಇದೀಗ ಬಿಜೆಪಿಯ ಪರಾಜಿತ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಸವಾಲ್ ಎಸೆದಿದ್ದಾರೆ. ಆರೋಪ ಸಾಬೀತು ಮಾಡಿದಲ್ಲಿ ನಗರದ ಕುವೆಂಪು ವೃತ್ತದಲ್ಲಿ ನೇಣು ಹಾಕಿಕೊಂಡು ಸಾಯುವುದಾಗಿ ಹೇಳಿಕೆ ನೀಡಿದ್ದಾರೆ.
ಹೇಳಿಕೆ ನೀಡುವ ಸಂದರ್ಭದಲ್ಲಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಎಂ.ನಾರಾಯಣಸ್ವಾಮಿ “ನಾನು ಜೆಡಿಎಸ್ ನೊಂದಿಗೆ ಶಾಮೀಲಾಗಿದ್ದೇನೆ ಎಂದು ಆರೋಪ ಮಾಡಿದ್ದರು. ಹೋಟೆಲ್​ನಲ್ಲಿ ಡೀಲ್ ನಡೆದಿದೆ ಎಂದು ಗಂಭೀರ ಆರೋಪ ಎಸ್.ಎನ್.ನಾರಾಯಣಸ್ವಾಮಿ ಹೊರಿಸಿದ್ದರು.
ಇದನ್ನೂ ಓದಿ:ಅಪ್ಪಾಜಿಗೌಡ್ರ ಮಾತಿಗೆ ವೇದಿಕೆಯಲ್ಲೇ ಸಚಿವ ನಾರಾಯಣಸ್ವಾಮಿ ಆಕ್ಷೇಪ! ಯಾಕೆ ಈ ರೀತಿ ಹೇಳ್ತೀರಿ? ಎಂದು ತರಾಟೆ
ಎಸ್.ಎನ್.ನಾರಾಯಣಸ್ವಾಮಿ ಸ್ವಾಮಿ ನನ್ನ ವಿರುದ್ದ ಆರೋಪ ಸಾಭೀತುಪಡಿಸಿದ್ದಲ್ಲಿ ನಾನು ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದಲ್ಲಿ ನೇಣು ಹಾಕಿಕೊಂಡು ಸಾಯುವೆ ಸಾಬೀತುಪಡಿಸದೆ ಇದ್ದಲ್ಲಿ ಅವರೇನು ಮಾಡುತ್ತಾರೆಂದು ತಿಳಿಸಲಿ.
ಇದನ್ನೂ ಓದಿ:ಕೇಂದ್ರಕ್ಕೆ ಕಳುಹಿಸಿದರೆ ಮೀಸಲು ಅನುಮೋದನೆ ಖಚಿತ ಎಂದ ನಾರಾಯಣಸ್ವಾಮಿ
ನಾನು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರಿಗೆ ನೋಟೀಸ್ ಕಳಿಸುವುದರೊಂದಿಗೆ ಕಾನೂನು ಹೋರಾಟ ಮಾಡುತ್ತೇನೆ. ಅವರ ಐಟಿ ಇಡಿ ದಾಳಿ ಮುಚ್ಚಿ ಹಾಕುವ ಸಲುವಾಗಿ ನನ್ನ ಮೇಲೆ ಆರೋಪ ಮಾಡಿದ್ದರು. ನಾನು ಈಗಾಗಲೇ ಚುನಾವಣಾ ಕಣದಿಂದ ಹಿಂದೆ ಸರಿಯಲು ಸಂಪನ್ಮೂಲ ಕೊರತೆಯೇ ಕಾರಣ ಎಂದು ಹೇಳಿದ್ದೇನೆ. ಹೀಗಾಗಿ ಕ್ಷೇತ್ರದ ಜನತೆಯ ದೃಷ್ಟಿಯಲ್ಲಿ ಖಳನಾಯಕನಾಗಿದ್ದೇನೆ. ಅವರು ನಾನು ದುಡ್ಡನ್ನ ಲಪಟಾಯಿಸಿದ್ದೇನೆ ಎಂದು ಆರೋಪಿಸಿದ್ದರು. ಮನೆ ದೇವರ ಸಾಕ್ಷಿ, ಆತ್ಮ ಸಾಕ್ಷಿಯಾಗಿ ಹಾಗೆ ಮಾಡಿಲ್ಲ. ಇದು ನನ್ನ ಸ್ವಯಂಕೃತ ಅಪರಾಧ.
ನನಗೆ ಯಾರ್ಯಾರು ತೊಂದರೆ ಮಾಡಿದ್ರು, ಮೋಸ ಮಾಡಿದ್ದರು ಎಂದು ಜನರಿಗೆ ತಿಳಿಯುತ್ತದೆ. ಅದೇ ಜನರ ಎದುರು ನಾನು ಒಳ್ಳೆಯವನಾಗುವ ಸಮಯ ಸಮೀಪವಿದೆ. ಕ್ಷೇತ್ರದ ಜನತೆಯಲ್ಲಿ ಕೈ ಮುಗಿದು ಹೇಳುವೆ ತಲೆ ತಗ್ಗಿಸುವಂತಹ ಕೆಲಸ ನಾನು ಯಾವತ್ತೂ ಮಾಡಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
