ಬೆಂಗಳೂರು:ಈ ಮಹಿಳೆ ‘ಮನೆ ಬಿಟ್ಟು ಹೋಗುತ್ತಿದ್ದೇನೆ. ಇನ್ನು ಯಾರ ಕೈಗೂ ಸಿಗವುದಿಲ್ಲ’ ಎಂದು ಪತ್ರದಲ್ಲಿ ಬರೆದು ಮನೆ ಬಿಟ್ಟು ಓಡಿ ಹೋಗಿದ್ದರು. ಈ ಘಟನೆ ನಿನ್ನೆ (ಫೆ.18) ನಡೆದಿದ್ದು ಇಂದು ಬೆಳಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮನೆ ಬಿಟ್ಟು ಹೋಗಿದ್ದ ಮಹಿಳೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇತ್ತೀಚೆಗೆ ಅವರ ಪತಿ ತೀರಿದ್ದರಿಂದ 56 ವರ್ಷ ವಯಸ್ಸಿನ ತಾರಾ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಪತಿಯ ಸಾವಿನಿಂದ ಮನನೊಂದ ಮಹಿಳೆ, ನಿನ್ನೆ ಮನೆ ಬಿಟ್ಟು ಹೋಗಿದ್ದರು. ಮನೆ ಬಿಟ್ಟು ಹೋಗುವಾಗ ಇನ್ಮೇಲೆ ಯಾರಿಗೂ ಸಿಗುವುದಿಲ್ಲ ಎಂದು ಪತ್ರ ಬರೆದು ಹೋಗಿದ್ದರು.
ಈ ಬಗ್ಗೆ ಭಯಗೊಂಡು ಕೋಣನಕುಂಟೆ ಠಾಣೆಗೆ ಕುಟುಂಬಸ್ಥ ಭರತ್ ದೂರು ನೀಡಿದ್ದ. ದೂರು ಬಂದ ಕೆಲ ಗಂಟೆಗಳಲ್ಲೇ ಕೋಣನಕುಂಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಾರಾರನ್ನು ಹುಡುಕಿ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಭರತ್, ಕೋಣನಕುಂಟೆ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
Thank you so much to Konankunte PI for acting at the speed of light for a complaint yesterday. Banaswadi Police Ramachandra and Kattimani were the ones who executed it. Thank you so much to the team@CPBlr@DCPSouthBCP
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − four =
Remember me
