ಬೆಂಗಳೂರು:ವಿವಾಹಿತ ಮಹಿಳೆಯನ್ನು ಪ್ರೀತ್ಸೆ..ಪ್ರೀತ್ಸೆ.. ಎಂದು ಪೀಡಿಸುತ್ತಿದ್ದ ಸಹೋದ್ಯೋಗಿ ಯುವಕ ದುರಂತ ಅಂತ್ಯಕಂಡಿದ್ದು, ಈ ಸಂಬಂಧ 6 ಮಂದಿ ಪೊಲೀಸರ ಬಂಧನಕ್ಕೊಳಪಟ್ಟಿದ್ದಾರೆ.
ಲಿಂಗರಾಜಪುರದ ನಿವಾಸಿ ಬಾಲಾಜಿ ಪತ್ನಿಯ ಹಿಂದೆ ಬಿದ್ದಿದ್ದ ನ್ಯೂತಿಪ್ಪಸಂದ್ರದ ರಾಜದೊರೈ (25) ಬರ್ಬರವಾಗಿ ಕೊಲೆಯಾದವ. 2 ವರ್ಷದ ಹಿಂದೆ ಸಂತ್ರಸ್ತೆ ಜತೆ ಬಾಲಾಜಿ ವಿವಾಹವಾಗಿದ್ದು, ಲಿಂಗರಾಜಪುರದಲ್ಲಿ ದಂಪತಿ ನೆಲೆಸಿದ್ದರು. ಚಾಕೋಲೆಟ್​ ಪೂರೈಕೆ ವಾಹನದ ಚಾಲಕನಾಗಿ ಬಾಲಾಜಿ ಹಾಗೂ ಪತ್ನಿ ಜೆ.ಬಿ. ನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಅಂಗಡಿಯಲ್ಲಿ ರಾಜದೊರೈ ಕೂಡ ಕೆಲಸಕ್ಕಿದ್ದ. ಕೆಲ ದಿನಗಳಿಂದ ಬಾಲಾಜಿ ಪತ್ನಿಯ ಹಿಂದೆ ಬಿದ್ದಿದ್ದ ರಾಜದೊರೈ, “ನಾನು ನಿನ್ನನ್ನು ಪ್ರೀತಿಸುತ್ತೇನೆ. ನನ್ನನ್ನು ಮದುವೆ ಆಗ” ಎಂದು ಪ್ರೇಮ ನಿವೇದನೆ ಮಾಡಿಕೊಂಡಿದ್ದ. ತನಗೆ ಮದುವೆ ಆಗಿರುವುದಾಗಿ ಆಕೆ ಹೇಳಿದರೂ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನಂತೆ.
ರಾಜದೊರೈನ ಕಾಟಕ್ಕೆ ಬೇಸತ್ತ ಮಹಿಳೆ, ಈ ವಿಚಾರವನ್ನು ತನ್ನ ಪತಿ ಬಳಿ ಹೇಳಿಕೊಂಡಿದ್ದಳು. ಪತ್ನಿಯ ಸಹವಾಸಕ್ಕೆ ಬಾರದಂತೆ ರಾಜದೊರೈಗೆ ಬಾಲಾಜಿ ಎಚ್ಚರಿಕೆ ಕೂಡ ಕೊಟ್ಟಿದ್ದ. ಆದರೂ ರಾಜದೊರೈನ ಕಾಟ ತಪ್ಪಿರಲಿಲ್ಲ. ಇದರಿಂದ ಕುಪಿತಗೊಂಡ ಬಾಲಾಜಿ, ತನ್ನ ಸ್ನೇಹಿತರ ಜತೆ ಸೇರಿ ರಾಜದೊರೈ ಕೊಲೆಗೆ ಸಂಚು ರೂಪಿಸಿದ್ದ.
ಅದರಂತೆ ನ.29ರಂದು ಲಿಂಗರಾಜಪುರದ ಮನೆಯಲ್ಲಿ ಮದ್ಯದ ಪಾರ್ಟಿ ಮಾಡುವ ನೆಪದಲ್ಲಿ ರಾಜದೊರೈನನ್ನು ಕರೆಸಿದ್ದರು. ಆತನಿಗೆ ಕಂಠಮಟ್ಟ ಮದ್ಯ ಕುಡಿಸಿ ಕೊಲೆ ಮಾಡಿ ಮರುದಿನ ಶವವನ್ನು ಮೂಟೆಕಟ್ಟಿ ರಾಮಮೂತಿರ್ನಗರದ ಸರ್ವಿಸ್​​ ರಸ್ತೆಯಲ್ಲಿ ಎಸೆದು ತಮಿಳುನಾಡಿಗೆ ಪರಾರಿಯಾಗಿದ್ದರು.
ಮನೆಯಿಂದ ಹೊರಹೋದ ಮಗ ವಾಪಸ್​ ಬಂದಿಲ್ಲ ಎಂದು ಕಂಗಾಲಾದ ರಾಜದೊರೈನ ಪಾಲಕರು ಜೆ.ಬಿ. ನಗರ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ವೇಳೆ ನ.29ರ ಸಂಜೆ ಆಟೋದಲ್ಲಿ ರಾಜದೊರೈನನ್ನು ಲಿಂಗರಾಜಪುರಕ್ಕೆ ಬಾಲಾಜಿ ಕರೆದೊಯ್ದ ಸಂಗತಿ ಗೊತ್ತಾಯಿತು. ಈ ಬಗ್ಗೆ ಬಾಣಸವಾಡಿ ಪೊಲೀಸರಿಗೆ ಜೆ.ಬಿ.ನಗರ ಪೊಲೀಸರು ತಿಳಿಸಿದ್ದರು.
ಅಂತೆಯೇ ತನಿಖೆ ಕೈಗೆತ್ತಿಕೊಂಡ ಸಬ್​ಇನ್​ಸ್ಪೆಕ್ಟರ್​ ಮುರಳಿ ನೇತೃತ್ವದ ತಂಡ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಬಾಲಾಜಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಪ್ರಕರಣ ಬಯಲಾಗಿದೆ. ಕೊಲೆ ಕೇಸ್​ನಲ್ಲಿ ಬಾಲಾಜಿ ಮತ್ತು ಆಮುರ್ಗಂ ಸೇರಿದಂತೆ 6 ಮಂದಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
‘ಹಣ ಕೊಟ್ಟೆ, ಮನೆ ಮಾಡಿ ಕೊಟ್ಟೆ, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸು… ಎಂದ ನಗರಸಭೆ ಮಾಜಿ ಸದಸ್ಯ’

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
