ಚಿಕ್ಕಬಳ್ಳಾಪುರ:‘ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ -ಹಾಡಹಗಲೇ ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣ’ಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯೂಸ್​ಗಾಗಿ ಮನೆಗೆ ಬೆಂಕಿ ಹಚ್ಚುವಂತೆ ಪ್ರೇರೇಪಿಸಿದ್ದು ಯೂಟ್ಯೂಬ್ ಚಾನಲ್​ವೊಂದರ ವರದಿಗಾರ ಎಂಬ ಆತಂಕಕಾರಿ ಅಂಶ ತನಿಖೆ ವೇಳೆ ಬಯಲಾಗಿದೆ.
ಬಾಗೇಪಲ್ಲಿ ತಾಲೂಕು ಯಗವ ಮದ್ದಲಖಾನೆಯಲ್ಲಿ ಹರೀಶ್ ಮತ್ತು ಸಿರೀಶಾ ಲವ್​ ಸ್ಟೋರಿ ದುರಂತ ಅಂತ್ಯ ಕಂಡಿದೆ. ಪ್ರಿಯಕರನ ಜತೆ ಮದುವೆ ಆಗಲು ಪಾಲಕರು ಒಪ್ಪುತ್ತಿಲ್ಲ ಎಂದು ಮನನೊಂದ ಸಿರೀಶಾ ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದಳು. ಮಗಳ ಸಾವಿನ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದ ಆಕೆಯ ತಂದೆ ವೆಂಕಟೇಶ್​ ಕಳೆದ ಶುಕ್ರವಾರ (ಜು.25) ರಾತ್ರಿ ಹರೀಶ್​ನನ್ನು ಚಾಕುವಿನಿಂದ ಇರಿದು ಕೊಂದಿದ್ದರು. ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಸ್ಥರಿಗೆ ಮತ್ತಷ್ಟು ದ್ವೇಷದ ಕಿಡಿ ಹೊತ್ತಿಸಿದ್ದು, ಯೂಟ್ಯೂಬ್ ಚಾನಲ್​ವೊಂದರ ವರದಿಗಾರ ನರೇಂದ್ರ. ‘ಹೆಣ್ಣು ಮಕ್ಕಳು ಹೊಡೆದರೆ ಕೇಸ್​ ಆಗಲ್ಲ’ ಎಂದು ಅವರನ್ನು ಹುರಿದುಂಬಿಸಿದ ನರೇಂದ್ರ, ವೆಂಕಟೇಶ್​ ಮನೆಗೆ ಬೆಂಕಿ ಹಚ್ಚುವಂತೆ ಪ್ರೇರೇಪಿಸಿ ಹುಚ್ಚಾಟ ಮೆರೆದಿದ್ದಾನೆ. ಇದೆಲ್ಲವೂ ಆತ ಮಾಡಿದ್ದು ಸುದ್ದಿಗಾಗಿ ಅಂತೆ!
ಇದನ್ನೂ ಓದಿರಿತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!
ವರ್ಷದ ಹಿಂದೆ ಎರಡೂ ಕುಂಟುಂಬಗಳ ದ್ವೇಷಾಗ್ನಿ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯೂಟ್ಯೂಬ್ ಚಾನಲ್​ನ ವರದಿಗಾರನೊಬ್ಬ ಖಾಸಗಿ ಚಾನಲ್​
ಹೆಸರಿನಲ್ಲಿ ಸುದ್ದಿ ಮಾಡುವುದಾಗಿ ಬಿಂಬಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾನೆ.
ಹರೀಶ್ ಕೊಲೆ ಆರೋಪದಡಿ ಸಿರೀಶಾಳ ತಂದೆ ವೆಂಕಟೇಶ್​ ಮತ್ತು ಸಂಬಂಧಿ ಗಣೇಶ್ ಇಬ್ಬರನ್ನೂ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಗನ ಸಾವಿಂದ ಕಂಗೆಟ್ಟ ಹರೀಶ್​ ಸಂಬಂಧಿಕರು ಶನಿವಾರ(ಜು.26) ವೆಂಕಟೇಶ್ ಮನೆ ಮುಂದೆ ಗಲಾಟೆ ಮಾಡಿ ಬಾಗಿಲು ಹಾಗೂ ಕಿಟಕಿ ಗಾಜುಗಳನ್ನು ಹೊಡೆದು ಆಕ್ರೋಶ ಹೊರಹಾಕಿದ್ದರು. ಆ ಮನೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದರು. ಮನೆಯ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ 15 ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ‘ಬೆಂಕಿ ಹಚ್ಚುವಂತೆ ಪ್ರೇರೇಪಿಸಿದ್ದೇ ನರೇಂದ್ರ’ ಎಂಬ ಸತ್ಯವನ್ನ ಬಾಯ್ಬಿಟ್ಟಿದ್ದಾರೆ.
‘ಬಾಗೇಪಲ್ಲಿ ನ್ಯೂಸ್​’ ಎಂಬ ಯೂಟ್ಯೂಬ್​ ಚಾನೆಲ್​ ನಡೆಸಿಕೊಂಡಿದ್ದ ನರೇಂದ್ರ ಕೈಗೆ ಸಿಕ್ಕ ವಿಡಿಯೋವನ್ನೆಲ್ಲ ಅಪ್ಲೋ​ಲೋಡ್ ಮಾಡುತ್ತಿದ್ದ ಎನ್ನಲಾಗಿದೆ. ನ್ಯೂಸ್​ಗಾಗಿ ಬೆಂಕಿ ಹಚ್ಚಿಸಿದ ತಪ್ಪಿಗೆ ಜೈಲು ಸೇರಿದ್ದಾನೆ.
ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
