ಬೆಂಗಳೂರು:ರಾಜಗೋಪಾಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಹಾಡಹಗಲೇ ನವವಿವಾಹಿತನೊಬ್ಬ ತನ್ನ ಪತ್ನಿಯ ಕುಟುಂಬಸ್ಥರಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ.
ತುಮಕೂರು ಜಿಲ್ಲೆಯ ಹುಲಿಯೂರು ಗ್ರಾಮದ ಚೇತನ್ (25) ಕೊಲೆಯಾದವ. ಎರಡು ತಿಂಗಳ ಹಿಂದಷ್ಟೇ ಭೂಮಿಕಾ ಜತೆ ಮದುವೆ ಆಗಿದ್ದ ಚೇತನ್​, ಮದ್ವೆ ಬಳಿಕ ಬೆಂಗಳೂರಿನ ಲಗ್ಗೆರೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಚೇತನ್ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಬರ್ತ್​ ಡೇ ಸಂಭ್ರಮದಲ್ಲಿದ್ದ ಚೇತನ್​ ಇಂದು ತನ್ನ ಪತ್ನಿಯ ಅಣ್ಣ ಮತ್ತು ಚಿಕ್ಕಪ್ಪನಿಂದಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?ಇದನ್ನೂ ಓದಿರಿಕೊಳೆತ ಸ್ಥಿತಿಯಲ್ಲಿ ಪ್ರೇಮಿಗಳ ಶವ ಮರದಲ್ಲೇ ನೇತಾಡುತ್ತಿತ್ತು! ಬೆಚ್ಚಿಬಿದ್ದ ಸ್ಥಳೀಯರು
ಭೂಮಿಕಾ ಮತ್ತು ಚೇತನ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ​ಆದರೆ ಮನೆಯವರ ಬಲವಂತಕ್ಕೆ ವಿಜಯ್ ಎಂಬಾತನೊಂದಿಗೆ ಭೂಮಿಕಾ ಸಪ್ತಪದಿ ತುಳಿದಿದ್ದಳು. ಚಿಕ್ಕಪ್ಪ ನಂಜುಂಡೇಗೌಡ ಮತ್ತು ಅಣ್ಣ ಆಕಾಶ್ ಸೇರಿ ಭೂಮಿಕಾಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಮದುವೆಯಾದ ಒಂದು ವಾರಕ್ಕೆ ವಿಜಯ್‌ನನ್ನು ಬಿಟ್ಟು ಚೇತನ್ ಜೊತೆ ಭೂಮಿಕಾ ಬಂದಿದ್ದಳು.
ಮೊದಲನೇ ಗಂಡನನ್ನ ಬಿಟ್ಟು ಚೇತನ್ ಜೊತೆ ಎರಡು ತಿಂಗಳ ಹಿಂದಷ್ಟೆ ಭೂಮಿಕಾ ಮದುವೆಯಾಗಿದ್ದಳು. ಇದಕ್ಕೆ ಭೂಮಿಕಾಳ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ತನ್ನ ತಂಗಿ ಬೇರೊಬ್ಬನನ್ನು ಮದ್ವೆ ಆಗಿದ್ದರೂ ಆಕೆಯನ್ನ ಕರೆದೊಯ್ದು ಮದ್ವೇ ಆಗಿ ಮರ್ಯಾದೆ ಕಳೆದಿದ್ದಾನೆ ಎಂದು ಆಕಾಶ್​ಗೆ ಚೇತನ್​ ಮೇಲೆ ಸಿಟ್ಟಿತ್ತು. ಇದೇ ಕಾರಣಕ್ಕೆ ತನ್ನ ಚಿಕ್ಕಪ್ಪನ ಜೊತೆ ಸೇರಿ ಕೊಲೆಗೆ ಆಕಾಶ್ ಪ್ಲಾನ್ ಮಾಡಿದ್ದ.
ಇಂದು ಚೇತನ್​ ಬರ್ತ್​ ಡೇ ಇತ್ತು. ಚೇತನ್​ಗೆ ವಿಶ್​ ಮಾಡೋ ನೆಪದಲ್ಲಿ ಭೂಮಿಕಾಳ ಅಣ್ಣ ಆಕಾಶ್​ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಮತ್ತೊಬ್ಬ ದೀಪಕ್ ಬಂದಿದ್ದರು. ಜತೆಗೆ ಕೇಕ್​ ಅನ್ನೂ ತಂದಿದ್ದರು. ಅಣ್ಣ, ಚಿಕ್ಕಪ್ಪ ಬಂದ ಖುಷಿಯಲ್ಲಿದ್ದ ಭೂಮಿಕಾಗೆ ಇವರೇ ತನ್ನ ಪ್ರಿಯಕರನ ಹಂತಕರಾಗ್ತಾರೆ ಎಂದು ಗೊತ್ತಿರಲಿಲ್ಲ. ಏನೋ ನೆಪ ಮಾಡಿ ಭೂಮಿಕಾಳನ್ನು ಹೊರ ಕಳುಹಿಸಿದ ಆರೋಪಿಗಳು ಚೇತನ್​ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಹತ್ತು ಆನೆ ಬೇಕಾದ್ರು ಸಾಕ್ತೀನಿ.. ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ.. ಏನು ಮಾಡಲಿ?: ಪ್ರಜ್ವಲ್​ ರೇವಣ್ಣ

ಗ್ರಾಪಂ ಸದಸ್ಯೆ ಮಗನ ಕಗ್ಗೊಲೆ: ಮನೆ ಬಾಗಿಲಿಗೆ ಬಂದ ಸೋತ ಅಭ್ಯರ್ಥಿ ಗುಂಪಿನಿಂದಲೇ ಕೃತ್ಯ

ನಾಯಿ ಮೇಲೆ ಅತ್ಯಾಚಾರ! ಬೆಚ್ಚಿಬೀಳಿಸುತ್ತೆ ಮೈಸೂರಲ್ಲಿ ಕಾಮುಕನ ಪೈಶಾಚಿಕ ಕೃತ್ಯ

ಇಲ್ಲಿನ ಜನ ಓಟು ಹಾಕೋದು ಬಿಜೆಪಿಗೆ, ಮೊದ್ಲು ಅವ್ರ ಸಮಸ್ಯೆ ಬಗೆಹರಿಸಿ… ಸಚಿವರಿಗೆ ಪ್ರಜ್ವಲ್​ ರೇವಣ್ಣ ಕ್ಲಾಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
