ಕೋಲಾರ:ಮನಮೆಚ್ಚಿದ ಹುಡುಗಿ ಸಿಗಲಿಲ್ಲ ಎಂದು ನೊಂದುಕೊಂಡ 23 ವರ್ಷದ ಯುವಕನೊಬ್ಬಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಆತ ಸಾವಿಗೂ ಮುನ್ನ ಸ್ನೇಹಿತರಿಗೆ ಕಳುಹಿಸಿದ್ದ ವಿಡಿಯೋ ಸಂಭಾಷಣೆ ವೈರಲ್​ ಆಗಿದೆ.
ಮುಷ್ಟೂರು ಗ್ರಾಮದ ಶಿವರಾಜ್ ಮೃತ ದುರ್ದೈವಿ. ನಂಗಲಿಯ ಹೇರ್ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್​ ಬುಧವಾರ ತಡರಾತ್ರಿ ಯುವಕ ಹಳೆಕುಪ್ಪದಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಮೊಬೈಲ್​ನಲ್ಲಿ ವಿಡಿಯೋ ಸಂಭಾಷಣೆ ರೆಕಾರ್ಡ್​ ಮಾಡಿದ್ದ ಶಿವರಾಜ್​ ಅದನ್ನು ಸ್ನೇಹಿತರಿಗೆ ವಾಟ್ಸ್​ಆ್ಯಪ್​ ಮಾಡಿದ್ದ.ಇದನ್ನೂ ಓದಿರಿಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!
ಶಿವರಾಜ್​ ಸಾವಿಗೂ ಮುನ್ನ ಮಾಡಿದ್ದ ಎರಡು ವಿಡಿಯೋದಲ್ಲಿ ‘ಸಿಂಧು, ಭಾರ್ಗವಿ, ಶ್ವೇತಾ, ಸುಕೃತ್ ಮತ್ತು ಸುನೀಲ್… ನಾನು ತುಂಬಾ ತಪ್ಪು ಮಾಡುತ್ತಿರುವೆ. ನನ್ನನ್ನು ಕ್ಷಮಿಸಿ, ನೀವು ಬಂದು ನನ್ನ ಶವದ ಮೇಲೆ ಮಣ್ಣು ಹಾಕಿ… ಇದೇ ನನ್ನ ಕೋರಿಕೆ’ ಎಂದಿದ್ದಾನೆ. ಇದು ತೆಲುಗು ಭಾಷೆಯಲ್ಲಿದೆ.
‘ನಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿರುವೆ. ಅವಳನ್ನು ಮದುವೆ ಮಾಡಿಕೊಳ್ಳಲು ಆಕೆಯ ತಂದೆಯನ್ನು ನನ್ನ ಕಡೆಯ ದೊಡ್ಡವರು ಕೇಳಿದರು. ಆಗ ಅವರು ”ನಿನಗೆ ಯಾರೂ ಇಲ್ಲ. ನನ್ನ ಮಗಳನ್ನು ಸಾಕಲು ನಿನ್ನ ಬಳಿ ಹಣವಿಲ್ಲ” ಎಂದು ನಿರಾಕರಿಸಿಬಿಟ್ಟರು. ಮತ್ತೊಮ್ಮೆ ಹೋಗಿ ಕೇಳಿದರೂ ಮದುವೆ ಮಾಡಿಕೊಡಲು ಒಪ್ಪಲಿಲ್ಲ. ನಾನು ಬಡವ. ಹಾಗಾಗಿ ನಾನು ಪ್ರೀತಿಸಿದ ಹುಡುಗಿಯನ್ನು ಮದುವೆ ಆಕೋಕೆ ಆಗ್ತಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ…’ ಎಂದು ಕಣ್ಣೀರಿಟ್ಟಿದ್ದಾನೆ. ಅಷ್ಟೇ ಅಲ್ಲ ಪ್ರಿಯತಮೆಗೆ ‘ಐ ಲವ್‌ ಯೂ’ ಎಂದೂ ಹೇಳಿದ್ದಾನೆ.ಇದನ್ನೂ ಓದಿರಿಮಹಿಳಾ ಸಹೋದ್ಯೋಗಿಗಳ ಅಶ್ಲೀಲ ದೃಶ್ಯವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರೇಯಸಿ! ಮುಂದೇನಾಯ್ತು?
ಈ ಸಂಭಾಷಣೆಯ ವಿಡಿಯೋವನ್ನು ಗೆಳೆಯರಿಗೆ ವಾಟ್ಸ್ಆಪ್​ ಮೂಲಕ ಕಳುಹಿಸಿ ನೇಣಿಗೆ ಕೊರಳೊಡ್ಡಿದ್ದಾನೆ. ಆದರೆ ಈ ಸಂಬಂಧ ಪೊಲೀಸ್​ ಕೇಸ್​ ದಾಖಲಾಗಿಲ್ಲ. ಯುವಕನ ಆತ್ಮಹತ್ಯೆ ಪೊಲೀಸರಿಗೆ ತಿಳಿಯುವ ಮೊದಲೇ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿದ್ದಾರೆ. ಸುದ್ದಿ ತಿಳಿದು ಬಂದ ಪೊಲೀಸರಿಗೆ ಮೃತನ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಕೇಸ್​ ದಾಖಲಾಗಿಲ್ಲ ಎನ್ನಲಾಗಿದೆ.
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + eleven =
Remember me
