ಬೆಂಗಳೂರು:ಯುವತಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯೊಂದಿಗೆ ಲಿವಿಂಗ್ ಟುಗೆದರ್‌ನಲ್ಲಿದ್ದು, ಅವಳು ಗರ್ಭಿಣಿಯಾಗುತ್ತಿದ್ದಂತೆ ಕೈ ಕೊಟ್ಟು ಪರಾರಿಯಾಗಿದ್ದ ಯುವಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ನಿವಾಸಿ ಅರುಣ್ (28) ಬಂಧಿತ. ಬಾಗಲಗುಂಟೆ ನಿವಾಸಿ 25 ವರ್ಷದ ಯುವತಿ, ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಳು. ಕಳೆದ 10 ತಿಂಗಳ ಹಿಂದೆ ಅಲ್ಲೇ ಕೆಲಸ ಮಾಡುತ್ತಿದ್ದ ಸ್ನೇಹಿತೆಯ ಸಹೋದರ ಆರೋಪಿ ಅರುಣ್ ಪರಿಚಯವಾಗಿತ್ತು.ಅರುಣ್ 5 ತಿಂಗಳ ಹಿಂದೆ ಯುವತಿಗೆ ಪ್ರೇಮನಿವೇದನೆ ಮಾಡಿದ್ದ. ನಂತರ ಇಬ್ಬರೂ ಲಿವಿಂಗ್ ಟುಗೆದರ್‌ನಲ್ಲಿದ್ದರು. ನಂತರ ವಿವಾಹವಾಗುವುದಾಗಿ ಯುವತಿಯನ್ನು ನಂಬಿಸಿ ಆಕೆಯಿಂದ ಹಂತ-ಹಂತವಾಗಿ 4 ಲಕ್ಷ ರೂ. ಪಡೆದುಕೊಂಡಿದ್ದ. ಈ ನಡುವೆ ಯುವತಿ ಗರ್ಭಿಣಿಯಾಗಿದ್ದಳು.
ಇದನ್ನೂ ಓದಿ:ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಶೋಕಿವಾಲಾ..!?
ಈ ವಿಚಾರ ಅರುಣ್‌ಗೆ ಗೊತ್ತಾಗುತ್ತಿದ್ದಂತೆ, ನಿನ್ನ ಜತೆ ನನಗೆ ಸಂಬಂಧವಿಲ್ಲ. ಮಗುವನ್ನು ತೆಗೆಸಿಬಿಡು, ನಾನು ನಿನ್ನನ್ನು ಪ್ರೀತಿಸುತ್ತಿಲ್ಲ. ಮದುವೆಯೂ ಆಗುವುದಿಲ್ಲ. ನೀನು ಏನು ಮಾಡುತ್ತೀಯೋ ಮಾಡಿಕೋ ಎಂದು ಹೇಳಿ ಪರಾರಿಯಾಗಿದ್ದ. ನಡೆದ ಸಂಗತಿಯನ್ನು ಸಂತ್ರಸ್ತೆ ಅರುಣ್ ಮನೆಯವರಿಗೂ ತಿಳಿಸಿದ್ದಳು.
ಇದನ್ನೂ ಓದಿ:ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!
ಆದರೆ, ಆತನ ಮನೆಯವರೇ ನನ್ನನ್ನು ಓಲೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ದು ಅಬಾರ್ಷನ್ ಮಾಡಿಸಿದ್ದಾರೆ. ನಂತರ ಕೆಲ ದಿನ ಆರೈಕೆ ಮಾಡಿ ಕಳುಹಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಸಂತ್ರಸ್ತೆ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಅರುಣ್ ವಿರುದ್ಧ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅರುಣ್‌ನನ್ನು ಬಂಧಿಸಿ, ಜೈಲಿಗೆ ತಳ್ಳಿದ್ದಾರೆ.
‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + seven =
Remember me
