ಬೆಂಗಳೂರು:ಸಹೋದರರಿಬ್ಬರ ಲವ್ ಜಿಹಾದ್ ಜೊತೆ ಲವ್-ಸೆಕ್ಸ್ ದೋಖಾಗೆ ಯುವತಿಯೊಬ್ಬಳು ಸಿಲುಕಿ, ಮೊದಲು ಅಣ್ಣ, ಬಳಿಕ ತಮ್ಮನಿಂದಲೂ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಅಣ್ತಮ್ಮರ ಕೀಚಕ ಕೃತ್ಯಕ್ಕೆ ಬಲಿಯಾಗಿ ನರಕಯಾತನೆ ಅನುಭವಿಸಿದ ಸಂತ್ರಸ್ತೆ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಸಹೋದರರಿಬ್ಬರು ಅತ್ಯಾಚಾರ ಎಸಗಿದ್ದಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಬಲವಂತ ಮಾಡುತ್ತಿದ್ದಾರೆ ಎಂದು 19 ವರ್ಷದ ಯುವತಿಯೊಬ್ಬಳು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಶಬೀರ್ ಅಹಮದ್ (28) ಮತ್ತು ಈತನ ತಮ್ಮ ಮೊಹಮದ್ ರಿಲ್ವಾನ್ ಆರೋಪಿಗಳು. ಶಬೀರ್​ನಿಂದ ಮೋಸಕ್ಕೊಳಗಾದ ಸಂತ್ರಸ್ತೆ ಬಳಿ ಬಂದ ಮೊಹಮರ್​ ರಿಲ್ವಾನ್. “ನನ್ನ ಅಣ್ಣ ನಿನಗೆ ಮೋಸ ಮಾಡಿದ್ದಾನೆ. ಇನ್ಮುಂದೆ ಆತ ನಿನ್ನ ತಂಟೆಗೆ ಬರಲ್ಲ..” ಎಂದೇಳಿ ಆಕೆಯ ವಿಶ್ವಾಸ ಗಿಟ್ಟಿಸಿಕೊಂಡು ಲವ್ವಿ-ಡವ್ವಿ ಶುರು ಮಾಡಿದ್ದ. ಅಲ್ಲದೆ, ಸಂತ್ರಸ್ತೆಯನ್ನು ಮದುವೆ ಆಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡು ಇದೀಗ ತನ್ನ ವರಸೆ ಬದಲಿಸಿದ್ದಾನೆ.
ಏನಿದು ಘಟನೆ?:ಸಿ.ಕೆ.ಅಚ್ಚುಕಟ್ಟು ನಿವಾಸಿಯಾಗಿರುವ ಸಂತ್ರಸ್ತ ಯುವತಿ 2018ರಲ್ಲಿ ನಗರದ ಸ್ಪಾವೊಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲಿಗೆ ಆಗಾಗ ಬರುತ್ತಿದ್ದ ಶಬೀರ್ ಆಕೆಯನ್ನು ಪರಿಚಯಿಸಿಕೊಂಡು, ತಾನು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್​ನ ಮಾಲೀಕನೆಂದು ನಂಬಿಸಿದ್ದ. ನಂತರ ಯುವತಿಯನ್ನು ಬ್ರಿಗೇಡ್ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ಸ್ವಾಗತಕಾರಿಣಿ ನೌಕರಿಗೆ ಸೇರಿಸಿದ್ದ. ಕೆಲ ಸಮಯದ ಬಳಿಕ ಯುವತಿಗೆ ಕರೆ ಮಾಡಿದ ಶಬೀರ್, ಉದ್ಯೋಗದ ವಿಚಾರವಾಗಿ ಮಾತನಾಡಬೇಕು ಎಂದು ಬ್ರಿಗೇಡ್ ರಸ್ತೆಯಲ್ಲಿರುವ ಓಯೋ ಟೌನ್​ಹೌಸ್​ಗೆ ಯುವತಿಯನ್ನು ಕರೆಸಿಕೊಂಡಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ‘ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೆಲಸದಿಂದ ತೆಗೆಸುತ್ತೇನೆ. ನಿನ್ನ ಪಾಲಕರನ್ನು ಬದುಕಲು ಬಿಡಲ್ಲ. ನಿನ್ನ ಮೇಲೆ ಆ್ಯಸಿಡ್ ಹಾಕುವೆ’ ಎಂದು ಬೆದರಿಸಿದ್ದ. ಇದೇ ರೀತಿ ಬೆದರಿಸಿ 2019ರವರೆಗೆ ನನ್ನ ಮೇಲೆ ಶಬೀರ್ 4 ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.ಇದನ್ನೂ ಓದಿರಿಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!
ತಮ್ಮನಿಂದಲೂ ಅತ್ಯಾಚಾರ:ನಾನು ಕೆಲಸ ಮಾಡುತ್ತಿದ್ದ ಹೋಟೆಲ್​ನಲ್ಲಿ ಉಸ್ತುವಾರಿ ಆಗಿದ್ದ ಶಬೀರ್​ನ ಸಹೋದರ ಮೊಹಮದ್ ರಿಲ್ವಾನ್ 2019ರ ಫೆಬ್ರವರಿಯಲ್ಲಿ ನನ್ನ ಬಳಿ ಬಂದು, ‘ನಿನಗೆ ನನ್ನ ಅಣ್ಣ ಅನ್ಯಾಯ ಮಾಡಿದ್ದಾನೆ. ಆತ ಇನ್ಮುಂದೆ ನಿನ್ನ ತಂಟೆಗೆ ಬರುವುದಿಲ್ಲ’ ಎಂದು ಆಶ್ವಾಸನೆ ಕೊಟ್ಟು ಸ್ನೇಹ ಬೆಳೆಸಿಕೊಂಡಿದ್ದ. ಅಲ್ಲದೆ ನನ್ನ ಬಳಿ ಪ್ರೇಮ ನಿವೇದನೆ ಮಾಡಿ ಮದುವೆ ಆಗುವುದಾಗಿ ನಂಬಿಸಿ ಆತನೂ ಹಲವು ಬಾರಿ ಅತ್ಯಾಚಾರ ಎಸಗಿದ. ಪದೇಪದೆ ನನ್ನ ಮನೆಗೆ ಬಂದು ನನ್ನ ಪಾಲಕರ ಬಳಿ ನಯವಾಗಿ ಮಾತನಾಡಿ ಅವರ ವಿಶ್ವಾಸ ಗಿಟ್ಟಿಸಿಕೊಳ್ಳಲೂ ಯತ್ನಿಸಿ ಹಾಗೂ ನನ್ನನ್ನು ಮದುವೆ ಆಗುವುದಾಗಿ ಹೇಳಿ 1.50 ಲಕ್ಷ ರೂ. ಸಾಲ ಪಡೆದಿದ್ದ. ಪಾಲಕರಿಗೆ ಇಷ್ಟ ಇಲ್ಲದಿದ್ದರೂ ನನ್ನ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿದ್ದರು. ಕಳೆದ ನ.20ರಂದು ಆರ್.ಟಿ.ನಗರದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಅದರಂತೆ 2021ರ ಜ.21ರಂದು ವಿವಾಹ ನಿಶ್ಚಯವಾಗಿ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಲಾಗಿತ್ತು. ಆದರೆ, ಇದೀಗ ಆತ ನಾಪತ್ತೆಯಾಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.ಇದನ್ನೂ ಓದಿರಿಬೆಳ್ಳಂಬೆಳಗ್ಗೆ ಭೀಕರ ಅಫಘಾತ, ಬೈಕ್​ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ಮತಾಂತರಕ್ಕೆ ಒತ್ತಾಯ:ನೀನು ದುಬೈಗೆ ಬಂದರೆ ನಿನಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದಿದ್ದ ರಿಲ್ವಾನ್, ನನ್ನ ಪಾಸ್​ಪೋರ್ಟ್, ಫೋಟೋಗಳು ಹಾಗೂ ಹಾಳೆಗಳ ಮೇಲೆ ಸಹಿ ಹಾಕಿಸಿಕೊಂಡಿದ್ದ. ಬಳಿಕ ಏಕಾಏಕಿ, ನೀನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಬಲವಂತ ಮಾಡಿದ್ದ. ಸಾಲದ್ದಕ್ಕೆ ನನ್ನ ಹಣೆಯಲ್ಲಿದ್ದ ಕುಂಕುಮವನ್ನು ಬಲವಂತವಾಗಿ ಅಳಿಸಿದ್ದ. ಇಷ್ಟೆಲ್ಲಾ ಆದ ನಂತರ ಇದೀಗ ಆರೋಪಿ ರಿಲ್ವಾನ್, ಮೊಬೈಲ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಪರಿಚಿತರ ಬಳಿ ವಿಚಾರಿಸಿದಾಗ ಆತನಿಗೆ ಕಳೆದ ಸೆ.14ರಂದು ಬೇರೆ ಹುಡುಗಿ ಜತೆ ವಿವಾಹವಾಗಿದೆ ಎಂಬುದು ತಿಳಿದು ಬಂದಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆರೋಪಿ ಶಬೀರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ತಮ್ಮ ಮೊಹಮದ್​ ರಿಲ್ವಾನ್​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
