ಉಡುಪಿ:ಜಿಲ್ಲೆಯಲ್ಲಿ ಲವ್​ ಜಿಹಾದ್​ ಪ್ರಕರಣ ನಡೆದಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈಗಷ್ಟೇ 18 ವರ್ಷ ತುಂಬಿದ ಯುವತಿಯನ್ನು ಪುಸಲಾಯಿಸಿ ಮುಸ್ಲಿಂ ಯುವಕ ಕರೆದೊಯ್ದಿದ್ದಾನೆ. ಇದು ಲವ್​ ಜಿಹಾದ್​ ಪ್ರಕರಣ ಎಂದು ಹಿಂದು ಸಂಟನೆಗಳು ಆರೋಪಿಸಿವೆ.
ಮಲ್ಪೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಹಿಂದು ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಪ್ರಕರಣವೀಗ ಲವ್​ ಜಿಹಾದ್​ ತಿರುವು ಪಡೆದುಕೊಂಡಿದೆ.

ಇದನ್ನೂ ಓದಿರಿಕರೊನಾ ಹಿನ್ನೆಲೆ ಒಂದು ವರ್ಷ ಶಾಲೆ ಬಂದ್!
ಪದವಿ ಶಿಕ್ಷಣಕ್ಕಾಗಿ ಬ್ರಹ್ಮಾವರ ಪರಿಸರದ ಯುವತಿಯೊಬ್ಬಳು ಉಡುಪಿಗೆ ಪ್ರತಿನಿತ್ಯ ಕಾಲೇಜಿಗೆ ಬರುತ್ತಿದ್ದಾಗ ಸಂತೆಕಟ್ಟೆ ನಿವಾಸಿ ಬಸ್​ ಚಾಲಕನ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆಯಾಗಲು ನಿರ್ಧರಿಸಿದ್ದರೂ, ಯುವತಿಗೆ ವಯಸ್ಸು 18 ತುಂಬದಿರುವುದು ಅಡ್ಡಿಯಾಗಿತ್ತು. 18 ಭತಿರ್ಯಾಗುತ್ತಿದ್ದಂತೆ ಯುವತಿ ಮತ್ತು ಯುವಕ ಮನೆಯವರಿಗೆ ತಿಳಿಯದಂತೆ ಉಡುಪಿ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಕಚೇರಿಯ ನೋಟಿಸ್​ ಬೋರ್ಡ್​ನಲ್ಲಿ ಪುತ್ರಿಯ ಫೋಟೋ ಗಮನಿಸಿದ ಪಾಲಕರು ಆಕೆಗೆ ಬುದ್ಧಿಮಾತು ಹೇಳಿ ಯುವಕನಿಂದ ದೂರ ಮಾಡಲು ಯತ್ನಿಸಿದ್ದಾರೆ.
ಇದನ್ನೂ ಓದಿರಿಬಿಎಸ್​ವೈ ಹೆಸರಲ್ಲಿ ಚೌಡಿಗೆ ಕುರಿ-ಕೋಳಿ ಬಲಿ ಕೊಟ್ಟರೇ ಶಾಸಕ?
ಈ ನಡುವೆ, ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಯುವಕ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಆಗ ಯುವತಿಯ ಮನೆಯವರನ್ನು ಕರೆಸಿದ ಪೊಲೀಸರು ಯುವತಿಯ ಅಭಿಪ್ರಾಯ ಕೇಳಿದಾಗ, “ನಾನು ಮನೆಯವರ ಜತೆ ಹೋಗುತ್ತೇನೆ’ ಎಂದಿದ್ದಳು. 40 ಸಾವಿರ ರೂ. ವಿಚಾರಕ್ಕೆ ಸಂಬಂಧಪಟ್ಟಂತೆ ಬಸ್​ ಡ್ರೈವರ್​ ಮೋಸ ಮಾಡಿದ್ದಾಗಿಯೂ ಠಾಣೆಯಲ್ಲಿ ಹೇಳಿಕೆ ನೀಡಿದ್ದಳು. ವಿವಾಹ ನೋಂದಣಿಗೆ ಸಾಕ್ಷಿ ಹಾಕಿದ್ದ ಮೂವರು ಸಾಕ್ಷಿದಾರರ ವಿರುದ್ಧ ಹೇಳಿಕೆ ನೀಡಿದ ಬಳಿಕ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿತ್ತು.

ಇದನ್ನೂ ಓದಿರಿರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?
ಇದಾದ ನಂತರ ಸಂಬಂಧಿಕರ ಮನೆಯಲ್ಲಿದ್ದ ಯುವತಿ ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ನಾಪತ್ತೆಯಾದ ಯುವತಿಯನ್ನು ಹುಡುಕುತ್ತಿದ್ದೇವೆ, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮಲ್ಪೆ ಪೊಲೀಸರು “ವಿಜಯವಾಣಿ’ಗೆ ತಿಳಿಸಿದ್ದಾರೆ.
ಯುವಕನನ್ನು ಸಂಪಕಿರ್ಸಿದಾಗ “ನನಗೆ ಯುವತಿ ಬಗ್ಗೆ ಏನೂ ಗೊತ್ತಿಲ್ಲ, ನಾನು ಹಾಸನದಲ್ಲಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾನೆ. ಇದೊಂದು ವ್ಯವಸ್ಥಿತ ಲವ್​ ಜಿಹಾದ್​ ಪ್ರಕರಣವಾಗಿದ್ದು, ಆಕೆಯನ್ನು ಬೆದರಿಸಿ ಯುವಕ ಕರೆಸಿಕೊಂಡಿದ್ದಾನೆ. ಪೊಲೀಸರು ತನಿಖೆ ಚುರುಕುಗೊಳಿಸಬೇಕು ಎಂಬುದು ಹಿಂದು ಸಂಟನೆಗಳ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್​ ಬೈಲೂರು ತಿಳಿಸಿದ್ದಾರೆ.

ಇದನ್ನೂ ಓದಿರಿನಗರ ನಕ್ಸಲರು ಮತ್ತು ಜಿಹಾದಿಗಳ ಹಿಂದೆ ಹೋದ ಹಿಂದೂ ಯುವತಿಯ ದುರಂತ ಕಥೆ ಇದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
