ಬೆಂಗಳೂರು:ಕೈ ಮೇಲಿದ್ದ ‘ಓಂ’ ಟ್ಯಾಟೂವನ್ನು ಆಪರೇಷನ್ ಮಾಡಿಸಿ ತೆಗೆಸಿ ಹಾಕು. ಇನ್ನುಮುಂದೆ ದೇವಸ್ಥಾನಕ್ಕೆ ಕೈ ಮುಗಿದರೆ ಜೀವ ತೆಗೆಯುತ್ತೇನೆ..! ಇದು ಲವ್ ಜಿಹಾದ್​ಗೆ ಒಳಗಾದ ಯುವತಿಗೆ ಆರೋಪಿಗಳು ಚಿತ್ರಹಿಂಸೆ ಕೊಡುತ್ತಿದ್ದ ನೋವಿನ ಸಂಗತಿಗಳು.
ಸಂಸದೆ ಶೋಭಾ ಕರಂದಾಜ್ಲೆ ಅವರು ಕಾಸರಗೋಡಿನ ಸಂತ್ರಸ್ತೆಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಕಚೇರಿಗೆ ಕರೆದೊಯ್ದು ದೂರು ನೀಡಿದ್ದರು. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕೇರಳದ ಮಲಪು್ಪರಂನ ರಿಷಭ್, ಎಲೆಕ್ಟ್ರಾನಿಕ್ ಸಿಟಿಯ ಅನ್ಸಾರ್ ಮತ್ತು ಈತನ ಪತ್ನಿಯ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಲವ್ ಜಿಹಾದ್​ಗೆ ಒಳಗಾದ ಸಂತ್ರಸ್ತೆ, ತನ್ನ ಅಳಲನ್ನು ವಿವರವಾಗಿ ಉಲ್ಲೇಖಿಸಿದ್ದಾರೆ. ಇನ್​ಸ್ಟಾಗ್ರಾಮ್ಲ್ಲಿ ಪರಿಚಯನಾದ ರಿಷಭ್, ಮಂಗಳೂರಿಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸಿದ್ದ. ಡಿ.12ರಂದು ಸ್ನೇಹಿತ ಅನ್ಸಾರ್ ಮನೆಯಲ್ಲಿ 4 ದಿನ ಇರಿಸಿ ಮದುವೆ ಆಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ.
ಮದುವೆಗೂ ಮುನ್ನ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಬೇಕು. ಅದಕ್ಕೂ ಮೊದಲು ನಿನ್ನ ಕೈ ಮೇಲಿರುವ ‘ಓಂ’ ಟ್ಯಾಟೂವನ್ನು ಆಪರೇಷನ್ ಮಾಡಿಸಿ ತೆಗೆಸಬೇಕಾಗಿದೆ. ಹಣೆಯಲ್ಲಿ ಕುಂಕುಮ ಇಟ್ಟುಕೊಳ್ಳಬೇಡ. ಇದನ್ನೆಲ್ಲ ಒಪ್ಪಿದರೆ ಮಾತ್ರ ಇಸ್ಲಾಂಗೆ ಮತಾಂತರ ಆಗಿ ಇಬ್ಬರು ಒಟ್ಟಿಗೆ ಇರಲು ಸಾಧ್ಯವೆಂದು ರಿಷಭ್ ತಿಳಿಸಿದ್ದಾನೆ.
ಅದಕ್ಕೆ ಯುವತಿ ಒಪ್ಪಿಕೊಳ್ಳದೆ ಇದ್ದಾಗ ಆಕೆ ಕೆನ್ನೆಗೆ ಹೊಡೆದು, ಹೆಲ್ಮೆಟ್​ನಿಂದ ತಲೆಗೆ ಹಲ್ಲೆ ನಡೆಸಿ ಚಿತ್ರ ಹಿಂಸೆ ಕೊಟ್ಟಿದ್ದಾನೆ. ಮತಾಂತರಕ್ಕೆ ಒಪ್ಪದೆ ಇದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಒಡ್ಡಿದ್ದಾನೆ. ಮನೆಯ ಪಕ್ಕದಲ್ಲಿದ್ದ ದೇವಸ್ಥಾನಕ್ಕೆ ಸಂತ್ರಸ್ತೆ ಕೈ ಮುಗಿದಾಗ, ತಲೆ ಕೆಟ್ಟಿದಿಯಾ..? ಇನ್ನೊಮ್ಮೆ ದೇವರಿಗೆ ಕೈ ಮುಗಿಯುವುದನ್ನು ನೋಡಿದರೆ ನಿನ್ನ ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ. ನಿನ್ನ ತಂದೆಯನ್ನು ಬಿಟ್ಟು ತಾಯಿ, ಅಕ್ಕ, ತಮ್ಮನನ್ನು ಸಹ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಬೇಕು. ಇಲ್ಲವಾದರೆ,ಜೀವ ಸಹಿತ ಬಿಡುವುದಿಲ್ಲ ಎಂದು ಹೆದರಿಸಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒತ್ತಾಯದಿಂದ ಗಾಂಜಾ ಸೇದಿಸಿದರು:ಎಲೆಕ್ಟ್ರಾನಿಕ್ ಸಿಟಿಯ ದೊಡ್ಡನಾಗಮಂಗಲ ಸಮೀಪದ ಮುನಿರೆಡ್ಡಿ ಲೇಔಟ್​ನಲ್ಲಿ ಅನ್ಸಾರ್ ಮನೆಯಲ್ಲಿ 4 ದಿನಗಳ ಕಾಲ ಸಂತ್ರಸ್ತೆಯನ್ನು ಆರೋಪಿ ಇರಿಸಿದ್ದ. ಬೀಡಿಯಲ್ಲಿ ಗಾಂಜಾ ಸೇರಿಸಿ ಒತ್ತಾಯದಿಂದ ಸಂತ್ರಸ್ತೆಗೆ ಸೇದಿಸಿ ರಿಷಭ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಆಶ್ರಯ ಕೊಟ್ಟವನ ಸೆರೆ:ಮುನಿರೆಡ್ಡಿಪಾಳ್ಯ ಆರೋಪಿ ಅನ್ಸಾರ್ ಅಲಿಯಾಸ್ ಅನ್ವರ್(30) ಎಂಬಾತನನ್ನು ಬಂಧಿಸಲಾಗಿದೆ. ಅಕ್ವೇರಿಯಮ್ ಮಾರಾಟ ಮಾಡುತ್ತಿದ್ದ ಅನ್ಸಾರ್, ಆರೋಪಿ ರಿಷಭ್ ಕರೆತಂದಿದ್ದ ಸಂತ್ರಸ್ತೆಯನ್ನು ಮನೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ. ಆಕೆಯ ಮೇಲೆ ಅನ್ಸಾರ್, ಲೈಂಗಿಕ ದೌರ್ಜನ್ಯ ಎಸಗಿಲ್ಲ. ಆದರೆ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿ ಕಿರುಕುಳ ಕೊಟ್ಟಿರುವುದು ಸಾಬೀತಾಗಿದೆ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಯಾವ ಸೆಕ್ಷನ್​ನಡಿ ಕೇಸ್ ದಾಖಲು
ಮದುವೆ ಆಗುವುದಾಗಿ ನಂಬಿಸಿ ವಂಚನೆ, ಹಿಂದು ಧರ್ಮದಿಂದ ಮುಸ್ಲಿಂಗೆ ಮತಾಂತರಕ್ಕೆ ಒತ್ತಾಯ, ಹಿಂದು ಧರ್ಮಕ್ಕೆ ಅಪಮಾನ, ಧಕ್ಕೆ ಉಂಟು ಮಾಡಿರುವುದು. ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ಸಂತ್ರಸ್ತೆ ಕುಟುಂಬಕ್ಕೆ ಜೀವ ಬೆದರಿಕೆ, ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್​ಐಆರ್ ದಾಖಲಿಸಿರುವುದಾಗಿ ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
