ಉಡುಪಿ:ಅನ್ಯ ಧರ್ಮದ ಯುವಕನ ಜತೆ ಹಿಂದು ಯುವತಿ ನಾಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಜೋಡಿಯನ್ನು ಮಲ್ಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪರಾರಿಯಾಗಿದ್ದ ಜೋಡಿ ಹಾಸನದಲ್ಲಿ ಪತ್ತೆಯಾಗಿದ್ದಾರೆ. ಯುವತಿ ನನ್ನ ಜತೆ ಇಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳಿ ಯಾಮಾರಿಸಿದ್ದ ಆರೋಪಿ ಅಝರ್​ ಇದೀಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.
ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯನ್ನು ಪುಸಲಾಯಿಸಿದ್ದ ಅಝರ್​ ವಾರದ ಹಿಂದೆ ಉಡುಪಿಯಲ್ಲಿ ವಿವಾಹ ನೋಂದಣಿಗೂ ಮುಂದಾಗಿದ್ದ. ಯುವತಿಯ ಹೆತ್ತವರಿಗೆ ತಿಳಿಯದಂತೆ ಮದುವೆಗೆ ಮುಂದಾಗಿದ್ದ. ಯುವತಿ ಮನೆಯವರ ತೀವ್ರ ವಿರೋಧದ ಕಾರಣ ಮುರಿದು ಬಿದ್ದಿತ್ತು. ನಾನು ಆತನನ್ನು ಮದುವೆಯಾಗುವುದಿಲ್ಲ ಎಂದು ಪೋಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಳು.ಇದನ್ನೂ ಓದಿ:ಸೇಫ್ ರೂಮ್​​ ರಹಸ್ಯ!: 100ಕ್ಕೂ ಹೆಚ್ಚು ಚಿನ್ನದ ಪ್ಯಾಕೆಟ್​ಗಳು ಎಸ್​ಬಿಐ ಶಾಖೆಯಿಂದ ನಿಗೂಢವಾಗಿ ನಾಪತ್ತೆ!
ಇದರ ನಡುವೆ ಎರಡ ದಿನಗಳ ಹಿಂದೆ ಅಝರ್​ ಮತ್ತು ಯುವತಿ ಏಕಾಏಕಿಯಾಗಿ ನಾಪತ್ತೆಯಾಗಿದ್ದರು. ಈ ಸಂಬಂಧ ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು. ಪ್ರಕರಣದ ಬೆನ್ನತ್ತ ಪೊಲೀಸರು ಹಾಸನದಲ್ಲಿ ಇಬ್ಬರನ್ನು ಪತ್ತೆಹಚ್ಚಿದ್ದಾರೆ. ಇಂದು ಮಧ್ಯಾಹ್ನ ಮಲ್ಪೆ ಠಾಣೆಗೆ ಕರೆತರುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಉಡುಪಿಯಲ್ಲಿ ಲವ್​ ಜಿಹಾದ್​? ಮುಸ್ಲಿಂ ಯುವಕನ ಬಲೆಗೆ ಸಿಲುಕಿದಳೇ 18ರ ಯುವತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 4 =
Remember me
