ಚಿತ್ರದುರ್ಗ:ಅಂತರ್ಜಾತಿ ವಿವಾಹವಾದ ಪ್ರೇಮಿಗಳಿಬ್ಬರಿಗೆ ಪಾಲಕರಿಂದ ಬೆದರಿಕೆ ಹಿನ್ನೆಲೆಯಲ್ಲಿ ಇಬ್ಬರು ರಕ್ಷಣೆ ಕೋರಿ ಚಿತ್ರದುರ್ಗದ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರಿದ್ದಾರೆ.
ಮೊಳಕಾಲ್ಮೂರು ತಾಲ್ಲೂಕಿನ ಬಿಜೆ ಕೆರೆಯ ಹರೀಶ್ ಹಾಗೂ ಕೊಂಡ್ಲಹಳ್ಳಿ ಮೂಲದ ಹರ್ಷಿತಾ ಇಬ್ಬರು 4 ವರ್ಷಗಳ ಕಾಲ ಪ್ರೀತಿಸಿ ಹರ್ಷಿತಾ ಪಾಲಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದಾರೆ. ಹರ್ಷಿತಾ ಎಂಎಸ್​ಸಿ ವ್ಯಾಸಂಗ ಮಾಡುತ್ತಿದ್ದರೆ, ಹರೀಶ್​ ಐಟಿಐ ಮಾಡಿದ್ದಾರೆ.
ಇಬ್ಬರು ಅನ್ಯ ಜಾತಿಗೆ ಸೇರಿದ್ದು, ಇಬ್ಬರ ಮದುವೆಗೆ ಯುವತಿಯ ಪಾಲಕರು ವಿರೋಧ ವ್ಯಕ್ತಡಿಸಿದ್ದಾರೆ. ಆದಾಗ್ಯೂ, ಚಿತ್ರದುರ್ಗ ಹೊರವಲಯದ ದೇವಸ್ಥಾನದಲ್ಲಿ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಮದುವೆಯ ಬಳಿಕವೂ ಇಬ್ಬರನ್ನು ದೂರ ಮಾಡಲು ಪಾಲಕರು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾಲಕರ ಬೆದರಿಕೆಯ ಕುರಿತು ಹರ್ಷಿತಾ ಪತ್ರ ಬರೆದು ಓದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ನಿನ್ನೆ (ನ.2) ಹರೀಶ್​ ಮತ್ತು ಹರ್ಷಿತಾ ಚಿತ್ರದುರ್ಗದ ಪೊಲೀಸ್​ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿ, ತಮ್ಮ ಅಳಲನ್ನು ತೋಡಿಕೊಂಡು ರಕ್ಷಣೆ ಕೋರಿದ್ದಾರೆ.
ಸೂಕ್ತ ರಕ್ಷಣೆಯನ್ನು ನೀಡುವುದಾಗಿ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಅವರು ನವದಂಪತಿಗೆ ಭರವಸೆ ನೀಡಿ, ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಭೂಮಿಯ ಒಳಗಿದೆ ಥಿಯಾ ಗ್ರಹದ ಅವಶೇಷಗಳು! ಇದರ ಘರ್ಷಣೆಯಿಂದಲೇ ಚಂದ್ರನ ರಚನೆ

ಶ್ರೀಕೃಷ್ಣನ ಆಶೀರ್ವಾದವಿದ್ದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ: ರಾಜಕೀಯ ಪ್ರವೇಶದ ಸುಳಿವು ನೀಡಿದ ಕಂಗನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
