ಮಂಗಳೂರು:ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಮಹಿಳೆಯೊಬ್ಬಳು ಇದೀಗ ಸರಿಯಾದ ನೆಲೆಯಿಲ್ಲದೇ ಲಾಡ್ಜ್ ಪಾಲಾಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ಬೆಳಕಿಗೆ ಬಂದಿದೆ.
ಕೇರಳ ಕಣ್ಣೂರಿನ ಪ್ರತಿಷ್ಠಿತ ಕುಟುಂಬದ ವಿವಾಹಿತ ಮಹಿಳೆ ಶಾಂತಿ ಜೂಬಿಗೂ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಬ್ರಾಹಿಂ ಖಲೀಲ್​ಗೂ ಫೇಸ್​ಬುಕ್ ಮೂಲಕ ಪರಿಚಯವಾಗಿತ್ತು. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆ ವಿಚಾರ ಪ್ರಸ್ತಾಪವಾದಾಗ ವಿವಾಹಕ್ಕೂ ಮುನ್ನ ಮತಾಂತರ ಆಗಬೇಕೆಂಬ ಷರತ್ತನ್ನು ಖಲೀಲ್​ ವಿಧಿಸಿದ ಆರೋಪವಿದೆ.
ಅದರಂತೆಯೇ 2017ರಲ್ಲಿ ಶಾಂತಿ ಜೂಬಿ ಪತಿಯನ್ನು ಬಿಟ್ಟು, ಇಬ್ರಾಹಿಂ ಖಲೀಲ್ ಜತೆ ನಿಖಾ ಆಗಿದ್ದಳು. ಬೆಂಗಳೂರಿನಲ್ಲಿ ಇಬ್ಬರ ನಿಖಾ ನೆರವೇರಿತ್ತು. ಮತಾಂತರ ಬಳಿಕ ಶಾಂತಿ ಜೂಬಿ ಆಸಿಯಾ ಆಗಿ ಹೆಸರು ಬದಲಾಯಿಸಿಕೊಂಡಳು. ಬೆಂಗಳೂರಿನಲ್ಲೇ ಆಸಿಯಾ ವಾಸವಿದ್ದಳು. ಖಲೀಲ್​ ಸಹ ಬಂದು ಹೋಗುತ್ತಿದ್ದ. ಆಸಿಯಾ ಕೂಡ ಸುಳ್ಯಕ್ಕೆ ಹೋಗಿ ಬರುತ್ತಿದ್ದಳು. ಆರಂಭದಲ್ಲಿ ಸಂಸಾರದ ಬಂಡಿ ಸುಖವಾಗೇ ಸಾಗುತ್ತಿತ್ತು. ಆದರೆ, ಕಳೆದ ಏಳೆಂಟು ತಿಂಗಳಿಂದ ಪತಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ:ಟ್ರಕ್​-ಬಸ್​ ನಡುವೆ ಭೀಕರ ಅಪಘಾತ: 37 ಮಂದಿ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು!
ಖಲೀಲ್​ ಮನೆಯವರನ್ನು ಕೇಳಿದರೆ ಆತನನ್ನು ಬಿಟ್ಟುಬಿಡು ಎಂದು ಬೆದರಿಕೆ ಹಾಕುತ್ತಿದ್ದಾರೆಂದು ಆಸಿಯಾ ದೂರಿದ್ದಾರೆ. ಆತನನ್ನು ನಂಬಿ ಬೆಂಗಳೂರಿನ ವಿಜಯನಗರದಲ್ಲಿ ನಾಲ್ಕೈದು ಕೋಟಿ ಬೆಲೆಬಾಳುವ ಮನೆ, ತವರಿನ ಎಲ್ಲ ಆಸ್ತಿಯನ್ನು ಶಾಂತಿ ನೀಡಿದ್ದಳು. ಇತ್ತ ಖಲೀಲ್ ಮನೆಯವರು ಸಹ ಆಸಿಯಾಳನ್ನು ಹೊರಹಾಕಿದ್ದಾರೆ. ಸದ್ಯ ಲಾಕ್​ಡೌನ್​ನಿಂದ ಸುಳ್ಯದ ಲಾಡ್ಜ್​ನಲ್ಲಿ ವಾಸವಿದ್ದಾರೆ.
ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆ ಮೊರೆ ಹೋದ್ರು ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು ಆಸಿಯಾ, ಶುಕ್ರವಾರದವರೆಗೂ ನೋಡಿ ಆಮೇಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ಮಾನವ ಹಕ್ಕು ಸಂಘಟನೆಯ ಮೊರೆ ಹೋಗಿದ್ದು, ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.(ದಿಗ್ವಿಜಯ ನ್ಯೂಸ್​)
ಜಿರಳೆಗಳು ತುಂಬಿದ್ದ ಮನೇಲಿ ಮಗನನ್ನು ಬಂಧಿಸಿ ಫ್ರೆಂಡ್ಸ್​ ಭೇಟಿಗೆ ಹೋದಳು: 8 ದಿನದ ಬಳಿಕ ಬಂದವಳಿಗೆ ಶಾಕ್​!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 + eleven =
Remember me
