ಬೆಂಗಳೂರು:ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಪ್ರೇಮಿಗಳ ವೈವಾಹಿಕ ಜೀವನ ದುರಂತ ಅಂತ್ಯ ಕಂಡಿದೆ. ಆತ್ಮಹತ್ಯೆಯಿಂದ ಪತ್ನಿ ಸಾವಿಗೀಡಾದ ಬೆನ್ನಿಗೇ ಪತಿಯೂ ನೇಣು ಹಾಕಿಕೊಂಡಿದ್ದಾನೆ. ಪತಿ ಪುನೀತ್ (21) ಹಾಗೂ ಹರ್ಷಿತಾ (19) ಮೃತಪಟ್ಟ ದಂಪತಿ.
ಆತ್ಮಹತ್ಯೆ ಮಾಡಿಕೊಂಡಿರುವ ಸತಿ-ಪತಿ ಇಬ್ಬರೂ ಮಾಗಡಿ ಚೆನ್ನೇನಹಳ್ಳಿ ನಿವಾಸಿಗಳಾಗಿದ್ದು, ಮದುವೆ ಬಳಿಕ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಇಂದು ಸಂಜೆ ನಾಲ್ಕು ಗಂಟೆಗೆ ಪತಿ ಪುನೀತ್ ಮನೆಗೆ ಮರಳಿದಾಗ ಪತ್ನಿ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಪುನೀತ್ ಕೂಡಲೇ ಸ್ಥಳೀಯರ ಸಹಾಯದಿಂದ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾದ ಪುನೀತ್, ನಂತರ ಮನೆಗೆ ಬಂದು ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಹರ್ಷಿತಾ ಬರೆದಿರುವ ಡೆತ್​ ನೋಟ್ ಸಿಕ್ಕಿದೆ. ನಾವು ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ನಾಲ್ಕು ತಿಂಗಳ ಹಿಂದಷ್ಟೇ ಮದುವೆಯಾಗಿದ್ದೆವು. ಆದರೆ ಮನೆಯವರ ಕಿರುಕುಳ ಹೆಚ್ಚಾಗಿದೆ ಎಂದು ಅದರಲ್ಲಿ ಬರೆಯಲಾಗಿದೆ. ಪುನೀತ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ನಾಳೆ ಅಂಬರೀಷ್ ಜನ್ಮದಿನ, ಸಂಭ್ರಮದ-ಸಾರ್ವಜನಿಕ ಆಚರಣೆ ಬೇಡ: ಸುಮಲತಾ ಅಂಬರೀಷ್ ಮನವಿ

ಸಿನಿಮಾ ತಂತ್ರಜ್ಞರ ಸಹಾಯಕ್ಕೆ ನಟಿ ಶರ್ಮಿಳಾ ಮಾಂಡ್ರೆ; ಊಟ-ತಿಂಡಿ, ದಿನಸಿ ಕಿಟ್ ವಿತರಣೆ..

ಸತ್ಯ ತಿಳಿಯುವುದು ಹೇಗೆ?; ಫ್ಯಾಕ್ಟ್​ಚೆಕ್​ಗೆ ಇಲ್ಲಿವೆ ಸುಲಭದ ಮಾರ್ಗಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
