ಆಲೂರು:ತಾಲೂಕಿನ ಸೊಪ್ಪಿನ ಹಳ್ಳಿಯಲ್ಲಿ ಬುಧವಾರ ಸವರ್ಣೀಯ ವ್ಯಕ್ತಿಯೊಬ್ಬ ದಲಿತ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದು, ಆರೋಪಿಯ ಅಣ್ಣನ ಮಗಳನ್ನು ಪ್ರೀತಿಸಿದ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಗ್ರಾಮದ ಮಧು (23) ಎಂಬಾತನನ್ನು ಅದೇ ಊರಿನ ರೂಪೇಶ್ ಎಂಬಾತ ಬುಧವಾರ ಮಧ್ಯಾಹ್ನ ತನ್ನ ಸಿಂಗಲ್ ಬ್ಯಾರಲ್ ತೋಟ ಬಂದೂಕಿನಿಂದ ಗುಂಡು ಹಾರಿಸಿ ಹತೈಗೈದಿದ್ದಾನೆ. ಮಧು ರೂಪೇಶನ ಅಣ್ಣನ ಮಗಳನ್ನು ಪ್ರೀತಿಸಿದ್ದ. ಯುವತಿ ಕಡೆಯವರು ಪೋಕ್ಸೋ ಕಾಯ್ದೆಯಡಿ ದೂರು ನೀಡಿದ್ದರಿಂದ ಪೊಲೀಸರಿಂದ ಬಂಧನಕ್ಕೊಳ ಗಾಗಿದ್ದ ಮಧು, ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ.
ಈ ನಡುವೆ, ಬೆಂಗಳೂರಿನಲ್ಲಿ ಲಾಕ್​ಡೌನ್ ಘೊಷಣೆಯಾದ್ದರಿಂದ ಮಂಗಳವಾರ ಊರಿಗೆ ಮರಳಿದ್ದ ಮಧು, ಬುಧವಾರ ಮಧ್ಯಾಹ್ನ ಭೈರಾಪುರಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎದುರಾದ ರೂಪೇಶ್, ಆತನೊಂದಿಗೆ ಜಗಳ ಮಾಡುತ್ತ ಗುಂಡು ಹಾರಿಸಿದ್ದಾನೆ. ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ವಣವಾಗಿದೆ.
ಹುಟ್ಟೂರಿನ ಹೆಮ್ಮೆಯ ಲಾಭ ಪಡೆಯಲು ಡ್ರೋನ್ ಪ್ರತಾಪ್ ಪ್ರಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
