ಮಂಡ್ಯ:ಆತನಿಗೆ ಇನ್ನೂ ಸರಿಯಾಗಿ ಮೀಸೆ ಚಿಗುರದ ವಯಸ್ಸು. ಅದಾಗಲೇ ರೌಡಿ ಶೀಟರ್ ಪಟ್ಟ ಕಟ್ಟಿಕೊಂಡಿದ್ದ. ಈ ನಡುವೆ ಪ್ರೀತಿಯ ಬಲೆಗೆ ಬಿದ್ದಿದಾತ, ಅದೇ ವಿಚಾರಕ್ಕೆ ಶುಕ್ರವಾರ ಸಂಜೆ ಹೆಣವಾಗಿದ್ದಾನೆ. ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಮಾರಕಾಸ್ತ್ರಗಳು ಮತ್ತೆ ಝಳಪಿಸಿವೆ. ಮೀಸೆ ಚಿಗುರುವ ಮುನ್ನವೇ ರೌಡಿ ಶೀಟರ್ ಪಟ್ಟಿ ಸೇರಿದ್ದ ಯುವಕನೊಬ್ಬನನ್ನು ಜನನಿಬಿಡ ಪ್ರದೇಶದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. 20 ವರ್ಷದ ಸುಮಂತ್ ಅಲಿಯಾಸ್ ಕುಳ್ಳಿ ಕೊಲೆಯಾದ ಯುವಕ. ಮಂಡ್ಯದ ಬಸವನಗುಡಿಯ 4ನೇ ಕ್ರಾಸ್​ನಲ್ಲಿ ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ಸುಮಂತ್​, ಸ್ವರ್ಣಸಂದ್ರ ಬಡಾವಣೆಯ ನಿವಾಸಿ ದುಂಡು ಮಾದು ಎಂಬುವರ ಪುತ್ರ. ತಂದೆ ಹಾಲು ವ್ಯಾಪಾರಿಯಾಗಿದ್ದು, ಹಸುಗಳಿರುವ ಮನೆಗಳಲ್ಲಿ ಹಾಲು ಹಾಕಿಸಿಕೊಂಡು, ಬಳಿಕ ಜನರಿಗೆ ಮಾರಾಟ ಮಾಡ್ತಿದ್ರು. ಶುಕ್ರವಾರ ಸಂಜೆ ಸುಮಂತ್ ಮನೆಯೊಂದರಲ್ಲಿ ಹಾಲು ಹಾಕಿಸಿಕೊಳ್ಳುತ್ತಿದ್ದ ವೇಳೆ ಪಲ್ಸರ್ ಬೈಕ್​ನಲ್ಲಿ ಬಂದ ಮೂವರು ಯುವಕರು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿ ಓಡಲಾರಂಭಿಸಿದ ಸುಮಂತ್​ನನ್ನು 50 ಮೀಟರ್ ದೂರದವರೆಗೆ ಅಟ್ಟಾಡಿಸಿಕೊಂಡು ಹೋಗಿ ಲಾಂಗ್​ನಿಂದ ತಲೆಯ ಭಾಗಕ್ಕೆ ಹೊಡೆದು ಹತ್ಯೆ ಮಾಡಿದ್ದಾರೆ. ಅಲ್ಲಿಂದ ಎಸ್ಕೇಪ್ ಆಗಿರುವ ದುಷ್ಕರ್ಮಿಗಳು ಪಕ್ಕದ ರಸ್ತೆಯಲ್ಲಿ ಸ್ಕೂಟರ್​ನಲ್ಲಿ (ಹೋಂಡಾ ಆಕ್ಟೀವಾ) ಬರುತ್ತಿದ್ದ ಯುವತಿಗೆ ಲಾಂಗ್​ ತೋರಿಸಿ ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇದನ್ನೂ ಓದಿ:VIDEO| ಉಚಿತ ಶಾಪಿಂಗ್​ ಮಾಡಲು ಬಾಲಕನಿಗೆ ಐದೇ ಸೆಕೆಂಡ್​: ಆತನ ಆಯ್ಕೆಗೆ ಶಹಭಾಷ್​ ಎಂದ ನೆಟ್ಟಿಗರು!
ಮೃತ ಸುಮಂತ್ ಕೊಲೆ ಯತ್ನ ಪ್ರಕರಣದಲ್ಲಿ ಕೆಲವು ತಿಂಗಳ ಹಿಂದಷ್ಟೇ ರೌಡಿ ಶೀಟರ್ ಪಟ್ಟಿ ಸೇರಿದ್ದ. ಈ ನಡುವೆ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇತ್ತೀಚೆಗೆ ಆ ಹುಡುಗಿ ಮನೆ ಬಿಟ್ಟು ಈತನ ಜೊತೆಗೆ ಬಂದಿದ್ದಳು. ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ಮಾಡಿ ಹುಡುಗಿಯನ್ನು ಆಕೆಯ ಮನೆಗೆ ಕಳುಹಿಸಲಾಗಿತ್ತು. ಅದೇ ದ್ವೇಷದ ಮೇಲೆ ಹುಡುಗಿಯ ಸಹೋದರ ಇಬ್ಬರು ಯುವಕರನ್ನು ಕಟ್ಟಿಕೊಂಡು ಬಂದು ಕೊಲೆ ಮಾಡಿದ್ದಾನೆಂದು ಸುಮಂತ್ ತಂದೆ ದುಂಡು ಮಾದು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳದ ತಂಡ ಕೂಡ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣಾ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದು, ಹಳೇ ದ್ವೇಷ, ಪ್ರೇಮ ಪ್ರಕರಣ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕ್ರಿಶ್ಚಿಯನ್​ ಬಾಲಕಿ ಅಪಹರಿಸಿದ ಪಾಕ್​ ವ್ಯಕ್ತಿ: ಮದ್ವೆಯಾದ ಬಾಲಕಿ ಎರಡೇ ದಿನದಲ್ಲಿ ಯುವತಿಯಾದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + five =
Remember me
