| ಅವಿನಾಶ ಮೂಡಂಬಿಕಾನ
ಬೆಂಗಳೂರು:ಪ್ರೀತಿಸಿ ಕೈ ಕೊಟ್ಟ ಪ್ರಿಯಕರನನ್ನು ಸಿಲುಕಿಸಲು ಹೆಣೆದ ಬ್ಲ್ಯಾಕ್​ಮೇಲ್​ ಬಲೆಗೆ ತಾನೇ ಬಿದ್ದ ಯುವತಿ ಪೇಚಿಗೆ ಸಿಲುಕಿದ್ದಾಳೆ. ಡೇಟಿಂಗ್ ವೇಳೆ ಫೇಸ್​ಬುಕ್ ಪಾಸ್​ವರ್ಡ್ ಕೊಟ್ಟ ಪ್ರಿಯಕರ ಪ್ರೇಯಸಿಯ ಕಿರುಕುಳದಿಂದ ಪಜೀತಿಗೊಳಗಾಗಿದ್ದಾನೆ.
ವಿವಾಹವಾಗುವಂತೆ ಬೆದರಿಕೆ
ಜಗಳವಾಗಿ ಬೇರೆಬೇರೆಯಾಗಿದ್ದರೂ ವಿವಾಹವಾಗುವಂತೆ ಯುವತಿ ಪೀಡಿಸುತ್ತಿದ್ದಳು. ಇದಕ್ಕೊಪ್ಪದಿದ್ದಾಗ ಆತನನ್ನು ಹೇಗಾದರೂ ಮಾಡಿ ಪೊಲೀಸರ ಕೈಗೆ ಸಿಲುಕಿಸಿ ಬುದ್ದಿಕಲಿಸಬೇಕು ಎಂದು ಸಂಚು ರೂಪಿಸಿದಳು. ಈ ಹಿಂದೆ ಪ್ರವಾಸಕ್ಕೆ ಹೋಗಿದ್ದಾಗ ತೆಗೆದಿದ್ದಿ ಇಬ್ಬರ ಖಾಸಗಿ ಫೋಟೊವನ್ನು ತನ್ನ ಫೇಸ್​ಬುಕ್ ಖಾತೆಗೆ ಕಳುಹಿಸಿಕೊಂಡು ಆತ ಬ್ಲ್ಯಾಕ್​ಮೇಲ್​ ಮಾಡುತ್ತಿರುವಂತೆ ಬಿಂಬಿಸಿಕೊಂಡಳು. ತನ್ನ ಹಲವು ಫೋಟೊಗಳನ್ನು ಆತನ ಕುಟುಂಬಸ್ಥರಿಗೂ ಕಳಿಸಿದಳು. ವಿವಾಹವಾಗದಿದ್ದರೆ, ಖಾಸಗಿ ಫೋಟೊ ಕಳುಹಿಸಿ ಬ್ಲ್ಯಾಕ್​ಮೇಲ್​ ಮಾಡುತ್ತಿರುವುದಾಗಿ ಸುಳ್ಳು ಕೇಸ್ ದಾಖಲಿಸುತ್ತೇನೆ ಎಂದು ಪ್ರಿಯಕರನಿಗೆ ಕರೆ ಮಾಡಿ ಬೆದರಿಸಿದಳು. ಇಷ್ಟಾದಾರೂ ಆತ ಜಗ್ಗದಿದ್ದಾಗ, ಪರಿಹಾರ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇದೀಗ ಯುವತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪರಿಹಾರ ಕೇಂದ್ರದ ಸಿಬ್ಬಂದಿ ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆ ಪರಿಹಾರ ಕೌಟುಂಬಿಕ ಸಲಹಾ ಕೇಂದ್ರಕ್ಕೆ ಬಂದಿದ್ದ ಉತ್ತರ ಭಾರತ ಮೂಲದ 27 ವರ್ಷದ ಯುವತಿ, ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಳು. ತನ್ನ ಖಾಸಗಿ ಫೋಟೊಗಳನ್ನು ಫೇಸ್​ಬುಕ್​ನಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾನೆ. ವಿವಾಹವಾಗುವಂತೆ ಒತ್ತಾಯಿಸಿದರೆ ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿದ್ದಳು. ಆತನ ವಿರುದ್ಧ ದೂರು ದಾಖಲಿಸಿಕೊಂಡ ‘ಪರಿಹಾರ’ ಕೇಂದ್ರದ ಸಿಬ್ಬಂದಿ, ಆತನನ್ನೂ ಕರೆಸಿ ವಿಚಾರಣೆ ನಡೆಸಿದಾಗ ಯುವತಿಯ ಬಣ್ಣ ಬಯಲಾಗಿದೆ.
ಪ್ರಕರಣ ವಿವರ:ಯುವತಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಪೇಯಿಂಗ್ ಗೆಸ್ಟ್ ಕೇಂದ್ರದಲ್ಲಿ ಸ್ನೇಹಿತೆಯರ ಜತೆ ವಾಸಿಸುತ್ತಿದ್ದಳು. ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಖಾಸಗಿ ಕಂಪನಿ ಉದ್ಯೋಗಿ ಯುವಕನ ಪರಿಚಯವಾಗಿತ್ತು. ಆತನೂ ಉತ್ತರ ಭಾರತ ಮೂಲದವನಾಗಿದ್ದು ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಪರಿಚಯವಾದ ಬಳಿಕ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪ್ರತಿದಿನ ಚಾಟ್ ಮಾಡುತ್ತಿದ್ದರು.
ಈ ನಡುವೆ ಆತನನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ಗೆ ಬರುವಂತೆ ಸೂಚಿಸಿದ್ದ ಯುವತಿ ಪ್ರೇಮ ನಿವೇದನೆ ಮಾಡಿದ್ದಳು. ಅದಕ್ಕೊಪ್ಪದ ಯುವಕ ಸಮಯಾವಕಾಶ ಕೇಳಿದ್ದ. ಕೆಲ ದಿನಗಳ ನಂತರ ಒಪ್ಪಿಕೊಂಡಿದ್ದ. ನಂತರ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದರು. ರಜಾದಿನಗಳಲ್ಲಿ ವಿವಿಧೆಡೆ ಪ್ರವಾಸ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೊವನ್ನು ಫೇಸ್​ಬುಕ್​ಗೆ ಅಪ್​ಲೋಡ್ ಮಾಡುವ ನೆಪದಲ್ಲಿ ಯುವತಿ ಆತನ ಫೇಸ್​ಬುಕ್ ಪಾಸ್​ವರ್ಡ್ ಪಡೆದಿದ್ದಳು.
ಪ್ರತಿದಿನ ಆತನ ಫೇಸ್ ಬುಕ್ ಪೇಜ್​ನಲ್ಲಿ ಹಲವಾರು ಫೋಟೊಗಳನ್ನು ಅಪ್​ಲೋಡ್ ಮಾಡುತ್ತಿದ್ದಳು. ಆಕೆಯನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಆಕ್ಷೇಪ ಎತ್ತಿರಲಿಲ್ಲ. ತನ್ನ ಎಲ್ಲ ವೈಯಕ್ತಿಕ ಮಾಹಿತಿಯನ್ನು ಆಕೆಯೊಂದಿಗೆ ಹಂಚಿಕೊಂಡಿದ್ದ. ಆದರೆ, ದಿನ ಕಳೆಯುತ್ತಿದ್ದಂತೆ ಆತ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪದೇಪದೆ ಕರೆ ಮಾಡಿ ತಾನಿದ್ದಲ್ಲಿಗೆ ಬರುವಂತೆ ಕಿರುಕುಳ ಕೊಡುತ್ತಿದ್ದಳು. ತಾನು ಹೇಳಿದಂತೆ ಕೇಳಬೇಕು ಎನ್ನುತ್ತಿದ್ದಳು. ಇದಾದ ಕೆಲ ದಿನಗಳ ಬಳಿಕ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದು ಇಬ್ಬರೂ ಬೇರೆಯಾಗಿದ್ದರು.
ಬೆಂಗಳೂರಿನಲ್ಲಿ ಭಾನುವಾರ 23 ಜನರಿಗೆ ಪಾಸಿಟಿವ್: 12 ಸೋಂಕಿತರಿಗೆ ಸಂಪರ್ಕವೇ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
