ಚಿಕ್ಕಬಳ್ಳಾಪುರ:ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಂಡು ಸುಖ-ದುಃಖದಲ್ಲೂ ಒಟ್ಟಾಗಿ ನಡೆಯಬೇಕು ಎಂದು ನೂರಾರು ಕನಸುಗಳನ್ನೂ ಕಟ್ಟಿಕೊಂಡಿದ್ದರು. ಆದರೀಗ ಅವರಿಬ್ಬರೂ ದುರಂತ ಅಂತ್ಯ ಕಂಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸೇನಹಳ್ಳಿಯ 25 ವರ್ಷದ ಯುವಕ ಶಶಿಕುಮಾರ್ ಮತ್ತು 24 ವರ್ಷದ ಅನಿತಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ಕುಟುಂಬಸ್ಥರು ಆಕೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡುವ ತಯಾರಿಯಲ್ಲಿದ್ದರು. ತನ್ನ ಪ್ರೀತಿ ಬಗ್ಗೆ ಹೇಳಿಕೊಳ್ಳಲೂ ಆಗದೆ, ಇತ್ತ ಪ್ರಯಕರನ ಬಿಟ್ಟು ಬದುಕಲೂ ಆಗದ ಅನಿತಾ ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು (ಮಂಗಳವಾರ) ಕೊನೆಯುಸಿರೆಳೆದರು.ಇದನ್ನೂ ಓದಿರಿಕೋವಿಡ್​ ವಾರ್ಡ್​ನಲ್ಲಿ ಮಿತಿಮೀರಿದ ಅವ್ಯವಸ್ಥೆ, ಸಚಿವರ ಖಡಕ್​ ವಾರ್ನಿಂಗ್​ಗೆ ಬೆಚ್ಚಿದ ಆಸ್ಪತ್ರೆಗಳು
ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಕೂಡಲೇ ಶಶಿಕುಮಾರ್ ಕೂಡ ವಿಷ ಸೇವಿಸಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಯುವಕನನ್ನು ಕರೆತರಲಾಯಿತಾದರೂ ಆತ ಬದುಕಲಿಲ್ಲ. ಯುವಕ ನಾವಿನ ಬಳಿಕವೇ ಇವರಿಬ್ಬರು ಎರಡೂ ಕುಟುಂಬಕ್ಕೆ ಪ್ರೀತಿಯ ವಿಚಾರ ಗೊತ್ತಾಗಿದೆ ಎಂದು ತಿಳಿದು ಬಂದಿದೆ. ಪ್ರೇಮಿಗಳಿಬ್ಬರ ಸಾವಿಗೆ ಚಿಕ್ಕದಾಸೇನಹಳ್ಳಿ ಗ್ರಾಮ ಕಂಬನಿ ಮಿಡಿದಿದ್ದು, ನೀರವ ಮೌನ ಆವರಿಸಿದೆ.
ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 1 =
Remember me
