ಮೈಸೂರು:ಹತ್ತು ದಿನದ ಹಿಂದೆ ಜೀವಂತ ವ್ಯಕ್ತಿಯ ಕೈಕಾಲು ಕಟ್ಟಿ ನಾಲೆಗೆ ಎಸೆದು ಕೊಲೆ ಮಾಡಿದ್ದ ನಿಗೂಢ ರಹಸ್ಯ ಬಯಲಾಗಿದೆ. ಪ್ರಿಯತಮೆಯ ಆದೇಶ ಪಾಲಿಸಿ ಕೊಲೆಗೈದ ಪ್ರಿಯಕರ, ಈತನ ಸ್ನೇಹಿತ ಮತ್ತು ಆಕೆಯೂ ಜೈಲು ಪಾಲಾಗಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಡಿಸೆಂಬರ್ 16ರಂದು ಅಡಹಳ್ಳಿ ಗ್ರಾಮದ ಕಬಿನಿ ಬಲದಂಡೆ ನಾಲೆಯಲ್ಲಿ ಕೊಳೆತ ಹಾಗೂ ಕೈಕಾಲುಗಳನ್ನು ಕಟ್ಟಿದ ಸ್ಥಿತಿಯಲ್ಲಿ ಶಿವರಾಜ್​(29) ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ತನಿಖೆ ನಡೆಸಿದ್ದು, ಶಿವರಾಜ್​ನನ್ನ ಮುಗಿಸಲು ಆದೇಶ ಕೊಟ್ಟದ್ದೇ ಈತನ ಪತ್ನಿ ಎಂಬ ಸ್ಫೋಟಕ ಸತ್ಯ ಬಯಲಾಗಿದೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಶಿವರಾಜ್​ನನ್ನ ಮುಗಿಸಿದ್ದ ಪತ್ನಿ ಸೌಮ್ಯಾ(24), ಈಕೆಯ ಪ್ರಿಯಕರ ಯೋಗೀಶ್ ಹಾಗೂ ಸ್ನೇಹಿತ ಚೆಲುವರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಸೌಮ್ಯಾಳೊಂದಿಗೆ ಶಿವರಾಜ್​ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದ. ಈ ನಡುವೆ ಶುಂಠಿ ಕೆಲಸಕ್ಕೆ ಪ್ರತಿದಿನ ಆಟೋದಲ್ಲಿ ತೆರಳುತ್ತಿದ್ದ ಸೌಮ್ಯಾಗೆ ಆಟೋ ಡ್ರೈವರ್ ಯೋಗೀಶ್ ಜತೆ ಸಲುಗೆ ಬೆಳೆದಿತ್ತು. ಇದು ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಈ ವಿಷಯ ತಿಳಿದ ಶಿವರಾಜ್, ಪತ್ನಿ ಜತೆಗೆ ಗಲಾಟೆ ಮಾಡಿದ್ದ. ಅಲ್ಲದೆ ಶುಂಠಿ ಕೀಳುವ ಕೆಲಸಕ್ಕೆ ಹೋಗದಂತೆಯೂ ತಾಕೀತು ಮಾಡಿದ್ದ.ಪ್ರಿಯಕರನಿಂದ ದೂರವಾಗುವ ಆತಂಕದಲ್ಲಿದ್ದ ಸೌಮ್ಯಾ, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತನ್ನ ಪತಿಯನ್ನೇ ಮುಗಿಸುವಂತೆ ಪ್ರಿಯಕರನಿಗೆ ಆದೇಶ ಮಾಡಿದ್ದಳು. ಪ್ರಿಯತಮೆಯ ಆದೇಶಕ್ಕೆ ತಲೆಬಾಗಿದ ಪ್ರಿಯಕರ, ತನ್ನ ಸ್ನೇಹಿತ ಚೆಲುವರಾಜ್ ನೆರವು ಪಡೆದು ಕೊಲೆಗೆ ಸಂಚು ರೂಪಿಸಿದ್ದ.
ಅದರಂತೆ ಡಿ.7ರಂದು ಶಿವರಾಜ್​ಗೆ ಕಂಠಪೂರ್ತಿ ಕುಡಿಸಿ ಕೈಕಾಲುಗಳನ್ನು ಕಟ್ಟಿ ಜೀವಂತವಾಗಿ ನಾಲೆಗೆ ಎಸೆದಿದ್ದರು. ಡಿ.15ರಂದು ನಾಲೆಯಲ್ಲಿ ಶಿವರಾಜ್ ಮೃತದೇಹ ತೇಲಿಬಂದಿತ್ತು. ಶಿವರಾಜ್ ನಾಪತ್ತೆಯಾಗಿ ಒಂದು ವಾರ ಕಳೆದರೂ ನಾಪತ್ತೆ ಕೇಸ್​ ಕೂಡ ಪತ್ನಿ ದಾಖಲಿಸಿರಲಿಲ್ಲ. ಇದೇ ಸುಳಿವಿನ ಆಧಾರದ ಮೇಲೆ ನಂಜನಗೂಡು ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ ಮತ್ತು ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿತ್ತು. ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದವ ಪಂಚಾಯಿತಿ ಆವರಣದಲ್ಲೇ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
