ಮೈಸೂರು:ಇತ್ತೀಚಿಗಷ್ಟೇ ಕಾಲೇಜು ಮೆಟ್ಟಿಲು ಹತ್ತಿದ್ದ ಅಪ್ರಾಪ್ತರಿಬ್ಬರು ಪ್ರೀತಿ ಬಲೆಗೆ ಸಿಲುಕಿದ್ದು, ಪೋಷಕರು ಅಡ್ಡಿಯಾಗುತ್ತಿದ್ದಂತೆ ಸಾವಲ್ಲೇ ಒಂದಾಗಲು ನಿರ್ಧರಿಸಿ ಕತ್ತು ಕೊಯ್ದುಕೊಂಡಿದ್ದಾರೆ!
ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದ ಬಾಲಕಿ ಮನೆ ಮುಂದೆ ಕತ್ತುಕೊಯ್ದುಕೊಂಡ ಪ್ರೇಮಿಗಳಿಬ್ಬರೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಸ್ಥಳ್ಕಕ್ಕೆ ಬಂದ ಪೊಲೀಸರು ಪ್ರೇಮಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪ್ರಾಪ್ತ ಪ್ರೇಮಿಗಳು ಹುಲ್ಲಹಳ್ಳಿಯ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು. ಪ್ರಥಮ ಪಿಯುಸಿಯಲ್ಲೇ ಪ್ರೀತಿಯ ಬಲೆಗೆ ಬಿದ್ದ ಇವರದ್ದು ಅಂತರ್ಜಾತಿ.ಇದನ್ನೂ ಓದಿರಿಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!
ಅಂತರ್ಜಾತಿ ಆಗಿದ್ದರಿಂದ ಪೋಷಕರು ಅವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಒಂದು ತಿಂಗಳ ಹಿಂದೆಯೇ ಅಪ್ರಾಪ್ತ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದರು. ಕೊನೆಗೆ ಅವರಿಬ್ಬರನ್ನೂ ಹುಡುಕಿ ಕರೆತಂದ ಎರಡೂ ಕುಟುಂಬಸ್ಥರು ನ್ಯಾಯ ಪಂಚಾಯಿತಿ ಮಾಡಿದ್ದರು. ಇಬ್ಬರೂ ಮತ್ತೆ ಒಟ್ಟಿಗೆ ಸೇರಬಾರದು, ಜತೆಯಲ್ಲಿ ಓಡಾಡಬಾರದು ಎಂದು ತಾಕೀತು ಮಾಡಿದ್ದರು. ಆದರೆ, ತಿಂಗಳಿನಿಂದಲೂ ಫೋನ್ ಮೂಲಕ ಸಂಪರ್ಕದಲ್ಲಿದ್ದ ಪ್ರೇಮಿಗಳು, ತಮ್ಮ ಪ್ರೀತಿಗೆ ಪೋಷಕರು ಅಡ್ಡಿ ಆಗುತ್ತಿರುವ ಬಗ್ಗೆ ಬೇಸರಗೊಂಡು ಸಾಯುವ ಮಟ್ಟಕ್ಕೆ ಹೋಗಿದ್ದಾರೆ.
ಇಂದು ಪ್ರೇಯಸಿ ಮನೆ ಬಳಿಗೆ ಪ್ರಿಯಕರ ಬಂದಿದ್ದಾನೆ. ಬಳಿಕ ಇಬ್ಬರೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಪ್ರೇಮಿಗಳನ್ನು ಪೊಲೀಸರು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಅಪ್ರಾಪ್ತ ಪ್ರೇಮಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣದ ಎನ್‌ಸಿಆರ್ ದಾಖಲಾಗಿದೆ.
ಪ್ರತಾಪ್​ ಸಿಂಹಗೆ ಸಿದ್ದರಾಮಯ್ಯ ‘ಬಾಸ್​’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 3 =
Remember me
