ಕಲಬುರಗಿ:ಯಡ್ರಾಮಿ ಪಟ್ಟಣ ಹೊರವಲಯದ ಹಳ್ಳದ ಮರವೊಂದರಲ್ಲಿ ಯುವಕ ಮತ್ತು ಯುವತಿಯ ಶವಗಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಾನಶಿವನಗಿ ಗ್ರಾಮದ ಪರಶುರಾಮ ಪೂಜಾರಿ(23) ಮತ್ತು ಭಾಗ್ಯಶ್ರೀ(19) ಮೃತ ದುರ್ದೈವಿಗಳು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆಗೆ ಮನೆಯವರು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೂ ಪ್ರೇಮಿಗಳು ಸಾವಿನ ಮನೆಯ ಕದ ತಟ್ಟಿದ್ದೇಕೆ?ಇದನ್ನೂ ಓದಿರಿಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ​!
ಫೆ.11ರಂದು ಪರಶುರಾಮ ಪೂಜಾರಿ ಮತ್ತು ಭಾಗ್ಯಶ್ರೀ ನಾಪತ್ತೆಯಾಗಿದ್ದರು. ನಿನ್ನೆ(ಫೆ.15) ಸಂಜೆ ಯಡ್ರಾಮಿ ಪಟ್ಟಣ ಹೊರವಲಯದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತದೇಹಗಳು ಕೊಳೆತ ಸ್ಥಿತಿಯಲ್ಲಿವೆ.
ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗ. ಮನೆಯ ಹಿರಿಯರು ಚರ್ಚಿಸಿ, ಆದಷ್ಟು ಬೇಗ ನಿಶ್ಚಿತಾರ್ಥ ಮಾಡುತ್ತೇವೆ. ಮದುವೆಯನ್ನ ಸ್ವಲ್ಪ ತಡವಾಗಿ ಮಾಡಿದರಾಯ್ತು ಎಂದು ನಿರ್ಧರಿಸಿದ್ದರು‌. ಆದರೆ, ಮದುವೆ ತಡ ಮಾಡುವ ನೆಪದಲ್ಲಿ ನಮ್ಮಿಬ್ಬರನ್ನೂ ದೂರ ಮಾಡುವ ಉದ್ದೇಶ ಅಡಗಿದೆ ಎಂದು ಅನುಮಾನಗೊಂಡ ಪ್ರೇಮಿಗಳಿಬ್ಬರು ಫೆ.11ರಂದು ಮನೆ ಬಿಟ್ಟು ಹೋಗಿದ್ದರು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ‌.
ಮನೆಯಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಬೇಸರಗೊಂಡ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮತ್ತು ತನಿಖೆ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರಿ ಗುಡುಗುಸಹಿತ ಮಳೆ ಸಾಧ್ಯತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
