ಬೆಂಗಳೂರು:ನಗರದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್​ಗೆಂದು ಬಂದಿದ್ದ ಪ್ರೇಮಿಗಳಿಬ್ಬರು ಬಹುಮಹಡಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದು, ಅವರಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಯುವಕ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಯುವಕ ಆಂಧ್ರಪ್ರದೇಶ ಮೂಲದ ಕ್ರಿಸ್​ ಪೀಟರ್, ಯುವತಿ ಲಿಯಾ ಬೆಂಗಳೂರಿನ ಕಾಕ್ಸ್​​ ಟೌನ್​ ನಿವಾಸಿ. ಯುವಕ ಹೈದರಾಬಾದ್ ಮೂಲದವನಾಗಿದ್ದು, ಕುಟುಂಬದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಚ್ಎಎಲ್​ 2ನೇ ಹಂತದ ನಿವಾಸಿ ಆಗಿರುವ ಈತ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಯುವಕ-ಯುವತಿ ಇಬ್ಬರೂ ಕ್ಲಾಸ್​ಮೇಟ್.ಇವರು ಬ್ರಿಗೇಡ್ ರಸ್ತೆಯಲ್ಲಿನ ಫಿಫ್ತ್ ಅವೆನ್ಯೂ ಕಟ್ಟಡದಿಂದ ಅಕಸ್ಮಾತ್​ ಆಗಿ ಕೆಳಕ್ಕೆ ಬಿದ್ದಿದ್ದಾರೆ. ಸಂಜೆ ಸ್ನೇಹಿತನ ಬರ್ತ್​ಡೇ ಪಾರ್ಟಿ ಇದ್ದು ಅದಕ್ಕೆಂದು ಬಂದಿದ್ದೆವು ಎಂದಿರುವ ಯುವಕ, ಯುವತಿ ತನ್ನ ಪ್ರೇಯಸಿ ಎಂಬುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ.
ಇಂದು ಮಧ್ಯಾಹ್ನ ಏಳೆಂಟು ಸ್ನೇಹಿತರೊಂದಿಗೆ ಇವರು ಬ್ರಿಗೇಡ್ ರಸ್ತೆಗೆ ಬಂದಿದ್ದರು. ಸ್ನೇಹಿತರು ಶಾಪಿಂಗ್ ಕಾಂಪ್ಲೆಕ್ಸ್ ಮುಂಭಾಗ ನಿಂತುಕೊಂಡಿದ್ದಾಗ ಪ್ರೇಮಿಗಳಿಬ್ಬರು ಎರಡನೇ ಮಹಡಿಗೆ ಹೋಗಿದ್ದರು. ಈ ವೇಳೆ ಮೇಲಿನಿಂದ ಹೊರಕ್ಕೆ ಪ್ಯಾಸೇಜ್​ನಲ್ಲಿ ಬಿದ್ದಿದ್ದು, ಅವಳೊಂದಿಗೆ ಯುವಕ ಕೂಡ ಬಿದ್ದಿದ್ದ. ಮೇಲಿನ ಕಿಟಕಿಯ ಗಾಜು ಕೆಳಕ್ಕೆ ಬಿದ್ದಿದ್ದು, ಅವರು ಗಾಜಿಗೆ ಒರಗಿದಾಗ ಅದು ಕಳಚಿ ಬಿದ್ದ ಕಾರಣ ಕೆಳಕ್ಕೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಪ್ರಕರಣ ಸಂಬಂಧ ಯುವತಿಯ ಪಾಲಕರು ಆಕಸ್ಮಿಕ ಸಾವು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು‌ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಿದ್ದಾರೆ.
ಪೆಟ್ರೋಲ್​-ಡೀಸೆಲ್ ಬೆಲೆ ಇಳಿಕೆ, ಅಡುಗೆ ಅನಿಲಕ್ಕೆ 200 ರೂ. ಸಬ್ಸಿಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
