ಶಿವಮೊಗ್ಗ:ಪ್ರೇಮಿಗಳಿಬ್ಬರು ತಮ್ಮ ಕೈಗಳನ್ನು ಒಟ್ಟಿಗೆ ವೇಲ್​ನಿಂದ ಕಟ್ಟಿಕೊಂಡು ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಶುಕ್ರವಾರ ಮಧ್ಯಾಹ್ನ ಜಿಗಿದಿದ್ದಾರೆ.ಬೈಪಾಸ್ ಸೇತುವೆ ಬಳಿ ಬಂದಿದ್ದ ಪ್ರೇಮಿಗಳು ನದಿಗೆ ಹಾರುತ್ತಿದ್ದಂತೆ ಕೈಗೆ ಕಟ್ಟಿಕೊಂಡಿದ್ದ ವೇಲ್ ಬಿಚ್ಚಿಕೊಂಡು ಅನುಷಾ ನದಿ ದಡದಲ್ಲಿ ಸಿಕ್ಕಿಬಿದ್ದಿದ್ದಾಳೆ.
ಬಳಿಕ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ಯುವಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಹುಡುಕಾಟ ಮುಂದುವರಿದಿದೆ.
ಇದನ್ನೂ ಓದಿರಿ‘ಶಾಸಕ ಜಮೀರ್ ಅಹ್ಮದ್ ಒಬ್ಬ ರಾಷ್ಟ್ರದ್ರೋಹಿ, ಕಾಂಗ್ರೆಸ್ ತಪ್ಪಿನಿಂದಲೇ ಬೆಂಗಳೂರು ಹೊತ್ತಿ ಉರಿಯಿತು…’
ಶಿವಮೊಗ್ಗ ಹೊರವಲಯದ ಕಾಕನ ಹಸೂಡಿ ಗ್ರಾಮದ ಯುವತಿ ಅನುಷಾ (19) ತುಂಗಾನದಿಗೆ ಬಿದ್ದು ಮೃತಪಟ್ಟಿದ್ದು, ಉಂಬ್ಳೆಬೈಲ್ ಸಮೀಪದ ಹುರುಳಿಹಳ್ಳಿಯ ಸಂತೋಷ್ (21) ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸಂತೋಷ್​ಗಾಗಿ ತುಂಗಾನಗರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಹುಟುಕಾಟ ಮುಂದುವರಿಸಿದ್ದಾರೆ.
ಪ್ರೇಮಿಗಳು ನದಿಗೆ ಹಾರುವ ಮುನ್ನ ತಮ್ಮ ಮೊಬೈಲ್ ಹಾಗೂ ಚಪ್ಪಲಿಗಳನ್ನು ಸೇತುವೆ ಬಳಿ ಬಿಟ್ಟಿದ್ದಾರೆ. ಅಲ್ಲೇ ಗುಲಾಬಿ ಹೂವನ್ನೂ ಇಟ್ಟಿದ್ದಾರೆ. ಇವರಿಬ್ಬರ ಪ್ರೀತಿಗೆ ಪಾಲಕರ ವಿರೋಧಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೋಟೆಲ್​ವೊಂದರಲ್ಲಿ ಸಂತೋಷ ಕೆಲಸ ಮಾಡುತ್ತಿದ್ದ. ಅನುಷಾ ಈ ವರ್ಷ ತಾನೇ ಪಿಯುಸಿ ಮುಗಿಸಿದ್ದಳು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಜೆ ಹಳ್ಳಿ ಗಲಭೆಕೋರರಿಗೆ ಸರ್ಕಾರದ ಸೌಲಭ್ಯ ಕೊಡದಿರಲು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಆಗ್ರಹ

ಕ್ರೈ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − one =
Remember me
