ಬೆಂಗಳೂರು:ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವಕ-ಯುವತಿಗೆ ಬುದ್ಧಿವಾದ ಹೇಳಲು ಹೋದ ಸಬ್​ ಇನ್ಸ್​ಪೆಕ್ಟರ್​ ಮೇಲೆಯೇ ಖತರ್ನಾಕ್​ ಜೋಡಿ ಕಾರು ಹರಿಸಲು ಯತ್ನಿಸಿ, ಪರಾರಿಯಾದ ಘಟನೆ ನಗರದ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆ ಜ.20ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪಾರ್ಕ್​​ ಬಳಿ ಮಟ ಮಟ ಮಧ್ಯಾಹ್ನವೇ ಯುವಕ-ಯುವತಿ ಕಾರಿನ ಒಳಗಡೆ ಕಾಮಕೇಳಿ ಆರಂಭಿಸಿದ್ದರು. ಈ ವೇಳೆ ಪಾರ್ಕಿನಲ್ಲಿ ಸಾಕಷ್ಟು ಜನರಿದ್ದರು. ತಮ್ಮ ಅಶ್ಲೀಲ ವರ್ತನೆ ಅದಲ್ಲಿದ್ದವರಿಗೆ ಕಾಣಿಸುತ್ತಿದ್ದರೂ ಅದನ್ನು ಲೆಕ್ಕಿಸದೇ ಜೋಡಿ ಮೈಮರೆತಿದ್ದರು.
ಜೋಡಿ ಮೈಮರೆತಿರುವುದನ್ನು ಅಲ್ಲಿಯೇ ಕರ್ತವ್ಯದಲ್ಲಿದ್ದ ಸಬ್​ ಇನ್ಸ್​ಪೆಕ್ಟರ್​ ಮಹೇಶ್​ ಅವರು ಗಮನಿಸಿದ್ದು, ಇಬ್ಬರಿಗೂ ಬುದ್ಧಿವಾದ ಹೇಳಲೆಂದು ಕಾರಿನ ಬಳಿ ಹೋಗಿದ್ದಾರೆ. ಮೊದಲು ಕಾರಿನ ನಂಬರ್​ ಅನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಹೇಶ್​ರನ್ನು ನೋಡಿ ಜೋಡಿ, ಭಯಬಿದ್ದು ತಮ್ಮ ಅಸ್ತವ್ಯಸ್ತಗೊಂಡಿದ್ದ ತಮ್ಮ ಬಟ್ಟೆಗಳನ್ನು ಸರಿಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಪರಾರಿಯಾಗುವ ಸಮಯದಲ್ಲಿ ಎಸ್​ಐ ಮಹೇಶ್​ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಮಹೇಶ್​ ಅವರು ಕಾರಿನ ಬಾನೆಟ್​ ಹಿಡಿದುಕೊಂಡು ಒದ್ದಾಡುತ್ತಿದ್ದರೂ ಲೆಕ್ಕಿಸದ ಯುವಕ, ಕಾರು ಚಲಾಯಿಸಿದ್ದಾನೆ. ಏಕಾಏಕಿ ಕಾರನ್ನು ರಿವರ್ಸ್ ತೆಗೆದು ಮತ್ತೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಎಸ್​ಐ ಕೆಳಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಎಸ್​ಐ ಮಹೇಶ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ಮುಂದೆ ಸುಮ್ಮನಿರಲ್ಲ… ಪರ್ಸನಲ್​ ಫೋಟೋಗಳನ್ನು ಹರಿಬಿಟ್ಟು ಪವಿತ್ರಾಗೆ ವಿಜಯಲಕ್ಷ್ಮೀ ಖಡಕ್​ ಎಚ್ಚರಿಕೆ!

ಇವುಗಳನ್ನು ಸೇವಿಸಿದ್ರೆ ನಿಮ್ಮನ್ನು ಲವ್​ನಲ್ಲಿ ಬೀಳಿಸುವ, ಪ್ರೇರಣೆ, ಖುಷಿ ಕೊಡುವ ಡೋಪಮೈನ್ ಹಾರ್ಮೋನ್​ ಹೆಚ್ಚಾಗುತ್ತೆ​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − 16 =
Remember me
