ಬೆಂಗಳೂರು:ವರ್ಷದಿಂದ ವರ್ಷಕ್ಕೆ ಹದಿಹರೆಯ ಸಮೂಹ ಮದ್ಯ ವ್ಯಸನಕ್ಕೆ ಸಿಲುಕುತ್ತಿರುವ ನಡುವೆಯೇ ಎಣ್ಣೆ ಖರೀದಿಸುವ ವಯಸ್ಸಿನ ಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲಾಗಿದೆ.
21 ವರ್ಷಗಿಂತ ಕೆಳಗಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಸಡಿಲಿಸಿ ವಯಸ್ಸಿನ ಮಿತಿಯನ್ನು 18ಕ್ಕೆ ಇಳಿಸಲು ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಬಕಾರಿ ನಿಯಮಗಳಿಗೆ ತಿದ್ದಪಡಿ ತರಲು ಇಲಾಖೆ ಸಿದ್ಧಪಡಿಸಿರುವ ಕರಡು ಪತ್ರಿಯಲ್ಲಿ ಇದನ್ನು ಸೇರಿಸಲಾಗಿದೆ. ಹೊಸದಾಗಿ ಅಬಕಾರಿ ನೀತಿ ತಿದ್ದುಪಡಿಯಲ್ಲಿ ಮಾಡುತ್ತಿರುವ ಇಲಾಖೆ ಮದ್ಯ ಖರೀದಿದಾರನ ವಯಸ್ಸಿನ ಮಿತಿ ಸಡಿಲಿಸುವ ಉಲ್ಲೇಖ ತಿದ್ದುಪಡಿ ಕರಡುನಲ್ಲಿದೆ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪಿಗೆ ಕೊಟ್ಟರೆ ಇನ್ನುಮುಂದೆ 18 ವರ್ಷ ತುಂಬಿರುವವರು ಮದ್ಯದಂಗಡಿಗಳಲ್ಲಿ ರಾಜಾರೋಷವಾಗಿ ತೆರಳಿ ಮದ್ಯ ಖರೀದಿಸಿ ಸೇವಿಸಬಹುದು.
ವರ್ಷದಿಂದ ವರ್ಷಕ್ಕೆ ಕುಡುಕರ ಸಂಖ್ಯೆ ಹೆಚ್ಚಳ ಒಂದೆಡೆಯಾದರೆ ಇಲಾಖೆಯಿಂದ ರಾಜ್ಯ ಸರ್ಕಾರದ ಖಜಾನೆಗೆ ಹರಿದು ಬರುತ್ತಿರುವ ಆದಾಯ ದುಪ್ಪಟಾಗುತ್ತಿದೆ. ಬಿಯರ್ ದರ ಹೆಚ್ಚು ಇರುವ ಹಿನ್ನೆಲೆಯಲ್ಲಿ ಕುಡುಕರು ಕಡಿಮೆ ಬೆಲೆ ಎನ್ನುವ ಕಾರಣಕ್ಕೆ ವಿಸ್ಕಿ ಕುಡಿಯುತ್ತಿದ್ದಾರೆ. ಮದ್ಯ ಮಾರಾಟದಲ್ಲಿ ಬಿಯರ್‌ಕ್ಕಿಂತ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್) ಮುಂದಿದೆ. ಈ ಹಿನ್ನೆಲೆಯಲ್ಲಿ ಕುಡಿಯವರ ಸಂಖ್ಯೆ ಆಧಾರದಲ್ಲಿ ನೋಡಿದರೆ ಬಿಯರ್‌ಗಿಂತ ವಿಸ್ಕಿ ಕುಡಿಯುವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, 18 ವರ್ಷ ತುಂಬಿರುವವರಿಗ ಮದ್ಯ ಖರೀದಿಸಲು ಅನುಮತಿ ಕೊಟ್ಟರೆ ಸರ್ಕಾರದ ಬೊಕ್ಕಸಕ್ಕೆ ಇನ್ನಷ್ಟು ಆದಾಯ ಹರಿದು ಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − three =
Remember me
