ಬೆಂಗಳೂರು: ಕರೊನಾ ಸೋಂಕು ತಡೆಗಟ್ಟಲು ಲಾಕ್​ಡೌನ್ ಘೋಷಣೆಯಾಗಿರುವ ಕಾರಣ ಅದರ ಪರಿಣಾಮ ಎಲ್​ಪಿಜಿ ಪೂರೈಕೆ ಮೇಲೆ ಆಗುವುದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ.
ರಾಜ್ಯದಲ್ಲಿ ದಿನವಿಡೀ ಎಲ್​ಪಿಜಿ ಅಡುಗೆ ಅನಿಲ ಪೂರೈಕೆಗೆ ಬೇಕಾದ ಅಗತ್ಯ ಕ್ರಮಗಳನ್ನು ಇಂಡಿಯನ್ ಆಯಿಲ್, ಬಿಪಿಸಿ, ಮತ್ತು ಎಚ್.ಪಿ.ಸಿ.ಗಳು ತೆಗೆದುಕೊಂಡಿವೆ. ವಿತರಣಾ ಕಾರ್ಯಾಚರಣೆಗಳಾದ ಎಲ್.ಪಿ.ಜಿ. ಬಲ್ಕ್ ಸ್ವೀಕೃತಿ, ಬಾಟಲಿಂಗ್ ಮತ್ತು ಅಡುಗೆ ಅನಿಲ ಸಿಲಿಂಡರ್ ಗಳ ವಿತರಣೆ ಕಾರ್ಯಗಳು ಸುಗಮವಾಗಿ ನಡೆಯುತ್ತಿದ್ದು, ವಿತರಣೆಯನ್ನು ಸಹಜವಾಗಿ ನಿರ್ವಹಿಸಲಾಗುತ್ತಿದೆ. ಅನಿಲ ಏಜೆನ್ಸಿಗಳು ಸಾಕಷ್ಟು ಪ್ರಮಾಣದ ಎಲ್.ಪಿ.ಜಿ. ಸಿಲಿಂಡರ್ ಗಳ ದಾಸ್ತಾನು ಇಟ್ಟುಕೊಂಡಿದ್ದು, ಯಾವುದೇ ತುರ್ತು ಸಂದರ್ಭದಲ್ಲೂ ಸಾರ್ವಜನಿಕರ ಬೇಡಿಕೆ ಪೂರೈಸಲು ಸಜ್ಜಾಗಿವೆ. ವಿತರಣಾ ವ್ಯವಸ್ಥೆ ಕೂಡ ಹೊಸ ಪರಿಸ್ಥಿತಿಗೆ ಸಜ್ಜಾಗಿದೆ. ರಾಜ್ಯ ಸರ್ಕಾರ ಸಹ ಎಲ್.ಪಿ.ಜಿ. ಮರು ಪೂರಣ ಮಾಡಿ ವಿತರಣೆ ಮಾಡುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿದ್ದು ಇದನ್ನು ಅವಶ್ಯಕ ವಸ್ತು ಎಂದು ಪರಿಗಣಿಸಿದೆ.
ಕರೋನಾ ಮಹಾಮಾರಿಯ ಪ್ರಸಕ್ತ ಸಂಕಷ್ಟದ ಸಮಯದಲ್ಲಿ, ಸಾರ್ವಜನಿಕರು ಚಿಂತೆ ಒಳಗಾಗಿ ಸಿಲಿಂಡರ್ ಗೆ ಬುಕ್ ಮಾಡುವ ಅಗತ್ಯ ಇರುವುದಿಲ್ಲ, ಹೀಗೆ ಮಾಡಿದರೆ, ಯಾರಿಗೆ ನಿಜವಾಗಿಯೂ ಅಗತ್ಯ ಇರುತ್ತದೋ ಅವರಿಗೆ ಸಕಾಲದಲ್ಲಿ ಅಡುಗೆ ಅನಿಲ ಲಭ್ಯವಾಗುವುದಿಲ್ಲ. ಹೀಗಾಗಿ ಎಲ್ಲ ನಾಗರಿಕರೂ ನಿಮ್ಮ ಸಾಮಾನ್ಯ ಅಗತ್ಯಕ್ಕೆ ತಕ್ಕಂತೆಯೇ ಮರುಪೂರಣದ ಸಿಲಿಂಡರ್ ಗೆ ಬುಕ್ ಮಾಡಬೇಕು ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಪೂರೈಕೆಯ ಖಾತ್ರಿ ಒದಗಿಸುತ್ತವೆ ಎಂದು ಕಂಪನಿಗಳು ಸ್ಪಷ್ಪಪಡಿಸಿವೆ.
COVID19 ಎಫೆಕ್ಟ್: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹ ರದ್ದು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × one =
Remember me
