|ಕೆ.ಕೆಂಚಪ್ಪ ಮೊಳಕಾಲ್ಮೂರು
ಬಯಲುಸೀಮೆಯ ಮೊಳಕಾಲ್ಮೂರು ತಾಲೂಕಿನಲ್ಲಿ 30 ಸಾವಿರಕ್ಕೂ ಅಧಿಕ ಕುಟುಂಬಗಳು ಒಲೆ ಉರಿಸಲು ಸೌದೆ ಬಳಕೆಗೆ ವಿದಾಯ ಹೇಳಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಹೊಂದಿದ್ದಾರೆ. ಇದರಿಂದಾಗಿ ಅರಣ್ಯ ಪ್ರದೇಶದಲ್ಲಿ ಗಿಡ, ಮರಗಳ ನಾಶದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಪ್ರಾಣಿ-ಪಕ್ಷಿಗಳ ಕಲರವ ಕೇಳಲಾರಂಭಿಸಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಹಿಳೆಯರ ಆರೋಗ್ಯಕ್ಕೆ ಪೂರಕವಾಗಿ ಜಾರಿಯಾದ ಉಜ್ವಲ ಯೋಜನೆ, ಪ್ರಕೃತಿ ಸಂಪತ್ತು ಉಳಿಸಲು ದೊಡ್ಡ ಕೊಡುಗೆ ನೀಡುತ್ತಿದೆ.
ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಉಜ್ವಲ, ಎಸ್​ಸಿಪಿ-ಟಿಎಸ್​ಪಿ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 30 ಸಾವಿರಕ್ಕೂ ಅಧಿಕ ಕುಟುಂಬಗಳು ಉಚಿತ ಗ್ಯಾಸ್ ಸ್ಟೌ ಮತ್ತು ಸಿಲಿಂಡರ್ ಸೌಲಭ್ಯ ಪಡೆದಿವೆ. 739 ಚದರ ಕಿ.ಮೀ. ಸುತ್ತಳತೆಯ ತಾಲೂಕಿನ ವ್ಯಾಪ್ತಿಯಲ್ಲಿ ಬಿ.ಜಿ.ಕೆರೆ ಕಮರ ಕಾವಲು, ಮೊಳಕಾಲ್ಮೂರು ಹಿರೇಅಡವಿ, ಮಲ್ಲೂರಹಳ್ಳಿ, ಕೋನಸಾಗರ, ಮುತ್ತಿಗಾರಹಳ್ಳಿ, ಮಾರಮ್ಮನಹಳ್ಳಿ, ಬಾಂಡ್ರಾವಿ, ಮೇಗಳಕಣಿವೆ ಸಂತೇಬಂಡೆ, ಕೃಷ್ಣರಾಜಾಪುರ ಸರಹದ್ದಿನಲ್ಲಿ 15,850 ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಿದ್ದು, ಅಲ್ಲೀಗ ಹಸಿರುಕ್ಕಿದೆ. ಕಮರ, ಬೇವು, ಹೊಂಗೆ, ನೀಲಗಿರಿ, ಆಲ, ಅರಳಿ, ಹಾಸ ಸೇರಿ ಹಲವು ಜಾತಿಯ ಗಿಡ, ಮರಗಳಿವೆ. ಈಚೆಗೆ ವರುಣ ಕೂಡ ಕೃಪೆ ತೋರಿದ್ದರಿಂದ ಸಸ್ಯ ಸಂಕುಲಕ್ಕೆ ಪುರ್ನಜ್ಮನ ಬಂದಿದೆ.
ಕೃಷಿ, ಕೂಲಿಯೇ ಜೀವನಾಧಾರ:ಮೊಳಕಾಲ್ಮೂರು ಜನರಿಗೆ ಕೃಷಿ ಬಿಟ್ಟರೆ ಕೂಲಿಯೇ ಜೀವನಾಧಾರ. 91 ಗ್ರಾಮಗಳಿವೆ. 1.50 ಲಕ್ಷ ಜನಸಂಖ್ಯೆ ಹೊಂದಿದ ತಾಲೂಕಿನಲ್ಲಿ ಬಿಪಿಎಲ್-28,234, ಅಂತ್ಯೋದಯ-6,546, ಎಪಿಎಲ್-729 ಸೇರಿ 35,509 ಪಡಿತರ ಚೀಟಿದಾರರಿದ್ದಾರೆ.
ಹಳ್ಳಿಗಳಲ್ಲಿ ಸೌದೆ ಬಳಕೆ ಬಿಟ್ಟು ಸಿಲಿಂಡರ್ ಉಪಯೋಗಿಸುತ್ತಿರುವ ಕಾರಣ ಕಾಡು ನಾಶ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಇದರಿಂದ ಕಾಯ್ದಿಟ್ಟ ಅರಣ್ಯ ಪ್ರದೇಶ ಬೆಳವಣಿಗೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಜತೆಗೆ ಅಂತರ್ಜಲ ವೃದ್ಧಿಯಾಗಿದೆ. ಜನರಿಂದ ಇನ್ನೂ ಹೆಚ್ಚಿನ ಸಹಕಾರ ಸಿಕ್ಕರೆ ಸಮೃದ್ಧ ಕಾಡು ನಿರ್ವಣವಾಗಲಿದೆ.
|ನಾಗೇಂದ್ರನಾಯ್ಕಪ್ರಾದೇಶಿಕ ವಲಯ ಅರಣ್ಯಾಧಿಕಾರಿ

ಹಿಂದೆ ಎಲ್ಲದಕ್ಕೂ ಕಟ್ಟಿಗೆ ಬೇಕಿತ್ತು. ಈಗ ಆ ಸ್ಥಿತಿ ಇಲ್ಲ. ಮನೆಗೊಂದು ಗ್ಯಾಸ್ ಸಂಪರ್ಕವಿದೆ. ನಾಲ್ಕೈದು ವರ್ಷಗಳಿಂದ ಸಿಲಿಂಡರ್ ಬಳಸುತ್ತಿದ್ದೇವೆ. ಅರಣ್ಯದಲ್ಲಿ ಬೆಳೆದ ಗಿಡ- ಮರ ಕಡಿಯುತ್ತಿಲ್ಲ.
|ತಿಪ್ಪಮ್ಮಸಿದ್ದಾಪುರ

ಈಚೆಗೆ ಸಿಲಿೆಂಡರ್ ಬೆಲೆ ಏರಿಕೆ ಮಾಡಿದ್ದು ಬಡವರಿಗೆ ಬಿಸಿ ತುಪ್ಪವಾಗಿದೆ. ದರ ಕಡಿಮೆ ಮಾಡದಿದ್ದರೆ ಮತ್ತೆ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚು.
| ನಾಗಸಮುದ್ರದ ನರಸಮ್ಮ ತುಮಕೂರ್ಲಹಳ್ಳಿ ಸುಲೋಚನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
