ಭಾರತೀಯ ಸಂಪ್ರದಾಯದಲ್ಲಿ ದೀಪಾವಳಿಗೆ ವಿಶೇಷ ಸ್ಥಾನಮಾನ ಇದೆ. ಅದರಲ್ಲೂ ಅನೇಕ ಜನರು ಇದನ್ನು ಹೊಸ ವರ್ಷವೆಂದೇ ಪರಿಗಣಿಸುತ್ತಾರೆ. ಅಂಗಡಿ, ಮುಂಗಟ್ಟು ಹೊಂದಿರುವವರು ದೀಪಾವಳಿಗೆ ಹೊಸ ಲೆಕ್ಕ, ಖಾತೆ ಕೀರ್ದಿ ತೆರೆಯುತ್ತಾರೆ. ಜ್ಞಾನದ ಸಂಕೇತವಾಗಿರುವ ಜ್ಯೋತಿಯನ್ನು ಬೆಳಗಿಸುವ ಹಬ್ಬ ಇದು. ಅಂತೆಯೇ, ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ದೀಪಾವಳಿ ಹಬ್ಬದ ಅದ್ದೂರಿತನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ವಸ್ತುಗಳ ಖರೀದಿಗೆ ಜನರು ಮುಂದಾಗುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಮಹಾಲಕ್ಷ್ಮೀ ಸ್ವರೂಪವಾದ ವಸ್ತು, ಉಪಕರಣಗಳನ್ನು ಮನೆಗೆ ತರುವುದು; ಮನೆ, ಫ್ಲ್ಯಾಟ್, ನಿವೇಶನಗಳನ್ನು ಖರೀದಿಸುವುದು; ವಾಹನಗಳನ್ನು ಕೊಂಡುಕೊಳ್ಳುವುದು ಶುಭಕರ ಎಂಬ ತಲತಲಾಂತರದ ನಂಬಿಕೆಯಿಂದ ಹಲವರು ಅನೇಕ ದಿನಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದು, ಈಗ ಖರೀದಿಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮಾರುಕಟ್ಟೆಗಳು ಗಿಜಿಗಿಡುತ್ತಿವೆ. ಪ್ರತಿವರ್ಷದ ಪದ್ಧತಿಯಂತೆ ಅನೇಕರು ಕುಟುಂಬ ಸಮೇತರಾಗಿ ಖರೀದಿಗೆ ಆಗಮಿಸುತ್ತಿದ್ದು, ಶಹರಗಳ ರಸ್ತೆಗಳು ತುಂಬಿ ತುಳುಕುತ್ತಿವೆ.
ಖರೀದಿಯ ಸಂಭ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡದ ನಂಬರ್ 1 ಪತ್ರಿಕೆ ‘ವಿಜಯವಾಣಿ’ ಕಳೆದೊಂದು ದಶಕದಿಂದ ದಸರಾ, ದೀಪಾವಳಿ ಸಂದರ್ಭದಲ್ಲಿ ಏರ್ಪಡಿಸುತ್ತ ಬಂದಿರುವ ‘ವಿಜಯೋತ್ಸವ’ ಶಾಪಿಂಗ್ ಉತ್ಸವಕ್ಕೆ ಪ್ರಸಕ್ತ ಬಾರಿಯೂ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ. ಗ್ರಾಹಕರು ಹಾಗೂ ವ್ಯಾಪಾರಸ್ಥರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ವಿಜಯವಾಣಿಯ ವಿಜಯೋತ್ಸವದಿಂದ ಎಲ್ಲರಿಗೂ ಅನá-ಕೂಲವಾಗಿದೆ. ಗ್ರಾಹಕರಿಗೆ ಹೆಚ್ಚು ಆಫರ್​ಗಳು ಸಿಗುತ್ತಿದ್ದರೆ, ವಿಜಯೋತ್ಸವ ಪಾಲುದಾರ ಮಳಿಗೆದಾರರಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಇದೊಂದು ಪ್ರಶಸ್ತ ವೇದಿಕೆಯಾಗಿದೆ. ಹಾಗಾಗಿ ಪ್ರತಿವರ್ಷ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಕಾರು, ಬೈಕ್, ಸ್ಕೂಟರ್, ಟ್ರಾ್ಯಕ್ಟರ್, ವಾಣಿಜ್ಯ ವಾಹನಗಳು ಹೀಗೆ ಆಟೊಮೊಬೈಲ್ ಕ್ಷೇತ್ರದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಸಂಚಲನ ಮೂಡಿಸಿದೆ. ಇದೇ ರೀತಿ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಬಟ್ಟೆ ಅಂಗಡಿಗಳಿಗೆ ಜನರು ದಾಂಗುಡಿ ಇಡುತ್ತಿದ್ದಾರೆ. ಮಹಿಳೆಯರ ಮನಕ್ಕೊಪ್ಪುವಂಥ ಸೀರೆ, ರೆಡಿಮೇಡ್ ಬಟ್ಟೆ, ಬ್ಯಾಗ್ ಇತ್ಯಾದಿಗಳ ಭರಪೂರ ಸಂಗ್ರಹಗಳು ತಮ್ಮಲ್ಲಿ ಕೈಗೆಟಕುವ ದರದಲ್ಲಿ ಲಭ್ಯ ಇರುವುದನ್ನು ಮಳಿಗೆದಾರರು ಪರಿಚಯಿಸಿದ್ದಾರೆ.
ಮನೆ ಅಂದಮೇಲೆ ಇಲೆಕ್ಟ್ರಾನಿಕ್ ಮತ್ತು ಇಲೆಕ್ಟ್ರಿಕಲ್ ವಸ್ತುಗಳ ಅಗತ್ಯ ಇದ್ದೇ ಇರುತ್ತದೆ. ಇವುಗಳ ಖರೀದಿ ಜೋರಾಗಿಯೇ ನಡೆಯುತ್ತಿದೆ. ಟಿವಿ, ಫ್ರಿಜ್, ವಾಷಿಂಗ್ ಮಶಿನ್, ಲ್ಯಾಪ್​ಟಾಪ್, ಮೊಬೈಲ್, ಓವನ್, ಫ್ಯಾನ್, ಗೃಹೋಪಯೋಗಿ ವಸ್ತುಗಳು… ಹೀಗೆ ಎಲ್ಲ ಮಳಿಗೆಗಳಲ್ಲಿ ಆಫರ್​ಗಳ ಹಿನ್ನೆಲೆಯಲ್ಲಿ ಖರೀದಿ ನಡೆಯುತ್ತಿದೆ. ಸಂಭ್ರಮದ ಖರೀದಿಗಾಗಿ ಫೈನಾನ್ಸ್ ಸೌಲಭ್ಯವೂ ಇರುವುದು ಗ್ರಾಹಕರಿಗೆ ಅನುಕೂಲವಾಗಿದೆ. ಇನ್ನೂ ವಿಶೇಷವೆಂದರೆ ದೀಪಾವಳಿಗೆ ಚಿನ್ನಾಭರಣ ಖರೀದಿಯೂ ಜೋರಾಗಿದೆ. ಚಿನ್ನವು ಲಕ್ಷ್ಮೀ ದೇವತೆ ಎನ್ನುವ ನಂಬಿಕೆ ಇದೆ. ಹೀಗಾಗಿ ದೀಪಾವಳಿ ಹೊತ್ತಲ್ಲಿ ಬಂಗಾರ ಖರೀದಿ ಮಾಡುವ ಸಂಪ್ರದಾಯ ಶುರುವಾಗಿದೆ. ಹೊಸ ಚಿನ್ನಾಭರಣವನ್ನು ಕಳಸಕ್ಕೆ ಇಟ್ಟು ಪೂಜಿಸಲಾಗುತ್ತದೆ. ಹೀಗಾಗಿ ಚಿನ್ನಾಭರಣ ಅಂಗಡಿಗಳಲ್ಲಿಯೂ ದೀಪಾವಳಿ ಖರೀದಿ ಜೋರಾಗಿದೆ.
ರಿಯಲ್ ಎಸ್ಟೇಟ್​ಗೂ ಶುಕ್ರದೆಸೆ:ಹಬ್ಬ ಸಮೀಪಿಸುತ್ತಿದ್ದಂತೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಶುಕ್ರದೆಸೆ ಶುರುವಾಗಿದೆ. ನಿವೇಶನ, ಮನೆ, ವಿಲ್ಲಾ, ಅಪಾರ್ಟ್​ವೆುಂಟ್​ನಲ್ಲಿ ಫ್ಲ್ಯಾಟ್, ವಾಣಿಜ್ಯ ಮಳಿಗೆ ಇತ್ಯಾದಿಗಳ ಖರೀದಿ ಪ್ರಕ್ರಿಯೆ ಚುರುಕುಗೊಂಡಿದೆ. ದೀಪಾವಳಿ ಸಂದರ್ಭದಲ್ಲೇ ನೋಂದಣಿ ಮಾಡಿಸುವ ಉದ್ದೇಶದಿಂದ ಹೆಚ್ಚಿನ ಗ್ರಾಹಕರು ಬುಕಿಂಗ್ ಆರಂಭಿಸಿದ್ದಾರೆ.
ಶೋರೂಂಗಳು ಸಜ್ಜು:ದೀಪಾವಳಿ ಹಬ್ಬಕ್ಕೆ ನಗರದ ಶೋರೂಂಗಳು ಸಜ್ಜುಗೊಂಡಿವೆ. ದೀಪಗಳಿಂದ ಅಲಂಕರಿಸಲಾಗಿದೆ. ಅಂಗಡಿಗೆ ಬರುವ ಗ್ರಾಹಕರನ್ನು ಸೆಳೆಯಲು ತರಹೇವಾರಿ ಅಲಂಕಾರಗಳನ್ನು ಮಾಡಲಾಗಿದೆ. ಆಫರ್​ಗಳ ಫಲಕಗಳ ಪ್ರದರ್ಶನದಲ್ಲೂ ಸೃಜನಶೀಲತೆ ಕಾಣಬಹುದಾಗಿದೆ. ಇದರಿಂದ ಗ್ರಾಹಕರು ಸಲೀಸಾಗಿ ಮಾಹಿತಿ ಪಡೆದು ಅಂಗಡಿ, ಮುಂಗಟ್ಟುಗಳನ್ನು ಪ್ರವೇಶ ಮಾಡುವ ದೃಶ್ಯ ಪೇಟೆಯಲ್ಲಿ ಸಾಮಾನ್ಯವಾಗಿದೆ.
ವಿಜಯೋತ್ಸವ ಶಾಪಿಂಗ್ ಉತ್ಸವದಲ್ಲಿ ಪಾಲ್ಗೊಳ್ಳುವ ಗ್ರಾಹಕರು ಈ ಹಿಂದಿನ ವರ್ಷಗಳಂತೆ ಕೂಪನ್​ನಲ್ಲಿ ಕೈಯಿಂದ ವಿವರ ಬರೆದು ಹಾಕುವ ತಾಪತ್ರಯ ಇಲ್ಲ. ಅಲ್ಲದೇ ಕೂಪನ್ ಕಳೆದುಕೊಳ್ಳುವ ಆತಂಕವೂ ಇಲ್ಲ. ಡಿಜಿಟಲ್ ಯುಗದಲ್ಲಿ ನೀವೂ ಕೂಡ ಕನಿಷ್ಠ 2 ಸಾವಿರ ರೂ. ಶಾಪಿಂಗ್ ಮಾಡಿ ಡಿಜಿಟಲ್ ಕೂಪನ್ ಭರ್ತಿ ಮಾಡಿ ಲಕ್ಕಿ ಡ್ರಾ ದಲ್ಲಿ ಭಾಗಿಯಾಗಬಹುದು. ನೀವು ಶಾಪಿಂಗ್ ಮಾಡಿದ ಅಂಗಡಿ, ಶೋರೂಂ ಅಥವಾ ಮಳಿಗೆಯಲ್ಲಿ ಕ್ಯೂ ಆರ್ ಕೋಡ್ ಸ್ಕಾ್ಯನಿಂಗ್ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಮೊಬೈಲ್​ನಲ್ಲಿ ಕ್ಯೂಆರ್ ಕೋಡ್ ಸ್ಕಾ್ಯನ್ ಮಾಡಿದರೆ ಸಾಕು ವೆಬ್​ಪೇಜ್​ನಲ್ಲಿ ಕೂಪನ್ ತೆರೆದುಕೊಳ್ಳುತ್ತದೆ. ಅದರಲ್ಲಿ ಕೇಳಿದ ಹೆಸರು, ಮೊಬೈಲ್ ನಂಬರ್, ನೀವು ಖರೀದಿಸಿದ ರಸೀದಿಯಲ್ಲಿನ ಇನ್​ವೈಸ್ ನಂಬರ್ ಬರೆದು ಕೆಳಗೆ ನಮೂದಿಸಿದ ನಿಯಮಾವಳಿಗೆ ಒಪ್ಪಿಗೆ ಎಂದು ಸೂಚಿಸಿ ಸಬ್​ವಿುಟ್ ಮಾಡಿದರೆ ನೀವು ಲಕ್ಕಿ ಡಿಪ್​ನಲ್ಲಿ ಪ್ರವೇಶ ಪಡೆಯುತ್ತೀರಿ. ನಂತರದಲ್ಲಿ ಅದರ ಸ್ಕ್ರೀನ್ ಶಾಟ್ ಅಥವಾ ವೆಬ್​ಪೇಜ್ ಡೌನ್​ಲೋಡ್ ಮಾಡಿಕೊಂಡು ರೆಫರನ್ಸ್​ಗೆ ಇಟ್ಟುಕೊಳ್ಳಬಹುದು. ಇದು ಅತ್ಯಂತ ಸರಳ ವಿಧಾನವಾಗಿದ್ದು, ಪ್ರತಿಯೊಬ್ಬರಿಗೂ ಹಿಡಿಸುತ್ತಿದೆ.
ಪ್ರತಿ ವರ್ಷದಂತೆ ವಿಜಯವಾಣಿ ವಿಜಯೋತ್ಸವದ ಅದೃಷ್ಟಶಾಲಿಗಳಿಗೆ 8 ಕಾರು, 10 ಬೈಕ್, 10 ವಾಷಿಂಗ್ ಮಶಿನ್, 10 ಫ್ರಿಜ್, ಚಿನ್ನ ಮತ್ತ ಬೆಳ್ಳಿ ನಾಣ್ಯ ಸೇರಿ 2800ಕ್ಕಿಂತ ಹೆಚ್ಚು ಬಹುಮಾನಗಳನ್ನು ನೀಡಲಾಗುತ್ತಿದೆ. ‘ಅದೃಷ್ಟ ನಿಮ್ಮದು ಕೊಡುಗೆ ನಮ್ಮದು’ ಶಾಪಿಂಗ್ ಉತ್ಸವವು ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು, ವಿಜಯಪುರ, ಬೆಳಗಾವಿ, ಗಂಗಾವತಿ, ಕಲಬುರಗಿ, ಚಿತ್ರದುರ್ಗ ಮತ್ತು ಶಿವಮೊಗ್ಗ ಆವೃತ್ತಿಗಳ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಬೆಟ್ಟಿಂಗ್​ ಆ್ಯಪ್​ನಿಂದಲೂ ಚುನಾವಣೆಗೆ ಹಣ!; ದೊಡ್ಡ ಮೊತ್ತವನ್ನೇ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + 16 =
Remember me
