ಬೆಂಗಳೂರು:ಚಂದ್ರ ಗ್ರಹಣ ನಾಳೆ ನಡೆಯಲಿದ್ದು, ಜಗತ್ತಿನ ಖಗೋಳ ಆಸಕ್ತರು, ವಿದ್ಯಾರ್ಥಿಗಳ ಆಸಕ್ತಿಯನ್ನು ಇದು ಕೆರಳಿಸಿದೆ. ನಾಳೆ ರಾತ್ರಿ 11.15ಕ್ಕೆ ಆರಂಭವಾಗಲಿರುವ ಗ್ರಹಣ ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. ಅಂದರೆ ಈ ಗ್ರಹಣದ ಒಟ್ಟು ಅವಧಿ ಮೂರು ಗಂಟೆ 19 ನಿಮಿಷ. ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕದ ಕೆಲ ಭಾಗಗಳಲ್ಲಿ ಇದು ಗೋಚರಿಸಲಿದೆ. 12.54ಕ್ಕೆ ಅದು ತನ್ನ ಪೂರ್ಣ ಸ್ವರೂಪದಲ್ಲಿ ಗೋಚರಿಸುತ್ತದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ:ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…
ಈ ನಡುವೆ, ಭಾರತದಲ್ಲಿ ಈ ಸುದ್ದಿ ವ್ಯಾಪಕವಾಗಿರುವ ಕಾರಣ, ಧಾರ್ಮಿಕ ಆಚರಣೆಯ ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದಿದೆ. ಹೀಗಾಗಿ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇದರ ಕುರಿತ ಧಾರ್ಮಿಕ ಆಚರಣೆ ಕುರಿತು ಹಿರಿಯ ಜ್ಯೋತಿಷಿ ದೈವಜ್ಞ ಸೋಮಯಾಜಿ ಅವರು ದಿಗ್ವಿಜಯ 24X7 ನ್ಯೂಸ್​ ಜತೆಗೆ ವೀಕ್ಷಕರ ತಿಳಿವಳಿಕೆಗಾಗಿ ಒಂದಷ್ಟು ಮಾಹಿತಿಯನ್ನು ಒದಗಿಸಿದ್ದಾರೆ. ಅವರ ಮಾತುಗಳ ಪೂರ್ಣಪಾಠ ವೀಕ್ಷಿಸುವುದಕ್ಕೆ ಮೇಲಿನ ಯೂಟ್ಯೂಬ್ ಲಿಂಕ್ ಅನ್ನು ಗಮನಿಸಿ..
ಜೂ. 5ರಂದು ಚಂದ್ರಗ್ರಹಣ: ಇಲ್ಲಿದೆ ಗೋಚರಿಸುವ ಸ್ಥಳ, ಸಮಯ ಮತ್ತಿತರ ವಿವರ

Sign in to your account
Please enter an answer in digits:seventeen + 9 =
Remember me
